ಯಾರ ಜೀವನದಲ್ಲಿ, ಯಾವ ಟೈಮ್ ನಲ್ಲಿ ಎಂಥಾ ಬದಲಾವಣೆ ಆಗುತ್ತದೆ ಎಂದು ಯಾರಿಂದಲೂ ಹೇಳಲಾಗದು.ಅದೇರೀತಿ ಸ್ಥಾನ-ಮಾನ, ಅಧಿಕಾರ ಕೂಡ.
ಅಂದು ಯಾರಿಗೆ ಸೆಲ್ಯೂಟ್ ಹೊಡೆಯುತ್ತಿದ್ದರೋ ಅವರಿಂದಲೇ ಇವತ್ತು ಸೆಲ್ಯೂಟ್ ಹೊಡೆಸಿಕೊಂಡಿರುವವರ ಸ್ಟೋರಿ ಇದು.
ಲೋಕಸಭಾ ಫಲಿತಾಂಶ ಬಂದು ವಾರ ಕಳೆದರೂ ಅದರ ಬಗ್ಗೆ ಚರ್ಚೆ ಮುಗಿಯುತ್ತಿಲ್ಲ. ಲೋಕಸಭಾ ಚುನಾವಣೆಗೂ ಮುನ್ನ ತಮ್ಮ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ಇನ್ಸ್ ಪೆಕ್ಟರ್ ಇವತ್ತು ಅದೇ ಅಧಿಕಾರಿಗಳಿಂದ ಸೆಲ್ಯೂಟ್ ಹೊಡೆಸಿಕೊಳ್ತಾ ಇದ್ದಾರೆ. ಕಾರಣ ಅವರೀಗ ಸಂಸದರು!
ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಸರ್ಕಲ್ ಇನ್ಸಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೋರಂತಲಾ ಮಾಧವ್ ಅವರಿಗೆ ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ಮೇಲಾಧಿಕಾರಿ ಸೆಲ್ಯೂಟ್ ಹೊಡೆದಿದ್ದಾರೆ. ಆ ಫೋಟೋ ವೈರಲ್ ಆಗುತ್ತಿದೆ.
ಕದಿರಿ ಸರ್ಕಲ್ ಇನ್ಸಪೆಕ್ಟರ್ ಆಗಿದ್ದ ಮಾಧವ್ ಹಿಂದೂಪುರದಿಂದ ಸ್ಪರ್ಧಿಸಿ ಟಿಡಿಪಿಯ ಕೃಷ್ಣಪ್ಪ ನಿಮ್ಮಲ ಅವರನ್ನು 1,40,748 ಮತಗಳ ಅಂತರದಿಂದ ಸೋಲಿಸಿದ್ದರು.
ಫಲಿತಾಂಶದ ದಿನ ಮತ ಎಣಿಕೆ ಕೇಂದ್ರದ ಹೊರಗೆ ಮಾಧವ್ ಮತ್ತು ಸಿಐಡಿ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಮೆಹಬೂಬ್ ಪಾಷಾ ಪರಷ್ಪರ ಸೆಲ್ಯೂಟ್ ಹೊಡೆದುಕೊಳ್ಳುತ್ತಿರುವ ಫೋಟೋಈ ಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.