ಪಾಕಿಸ್ತಾನದ ಮಾಜಿ ಕ್ರಿಕೆಟಿಗ. ಮಾಜಿ ಕ್ಯಾಪ್ಟನ್ ಮಿಸ್ಬಾ ಉಲ್ ಹಕ್ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಬಗ್ಗೆ ಗಹೆಮ್ಮೆಯ ಹೇಳಿಕೆಯನ್ನು ನೀಡಿದ್ದಾರೆ.
ಭಾರತ ಕ್ರಿಕೆಟ್ ಆಟಗಾರರಲ್ಲಿ ಎಂಎಸ್ ಧೋನಿ ನನಗೆ ಮಾದರಿ ಆಟಗಾರ ಎಂದು ಮಿಸ್ಬಾ ಧೋನಿಯನ್ನು ಕೊಂಡಾಡಿದ್ದಾರೆ.
ಇಂಡಿಯಾ ಟುಡೇಯ ವಿಶ್ವಕಪ್ ವಿಶೇಷ ಶೋ ಒಂದರಲ್ಲಿ ಭಾಗವಹಿಸಿದ್ದ ಮಿಸ್್ಬಾ ಗೆ ಟೀಮ್ ಇಂಡಿಯಾದ ಮಾದರಿ ಆಟಗಾರರನ್ನು ಆಯ್ಕೆ ಮಾಡಿ ಎಂದು ಹೇಳಲಾಗಿತ್ತು. ಮೊದಲು ಸಚಿನ್ ತೆಂಡೂಲ್ಕರ್ ಹೆಸರು ಹೇಳಿ ಬಳಿಕ ತೇಪೆ ಹಚ್ಚಿ, ತನ್ನ ವರಸೆ ಬದಲಿಸಿ ಬ್ಯಾಟ್ಸ್ಮನ್ ಆದರೆ ನಾನು ಸಚಿನ್ ತೆಂಡೂಲ್ಕರ್ ಅವರನ್ನು ಆರಿಸುತ್ತೇನೆ. ಆದರೆ ಎಲ್ಲವನ್ನೂ ಸೇರಿಸಿದರೆ ನಾನು ಎಂಎಸ್ ಧೋನಿಯನ್ನು ಹೆಸರಿಸಲಿಚ್ಚಿಸುತ್ತೇನೆ ಎಂದರು.
ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಅಪರೂಪದ ಸಾಧನೆಗಳನ್ನು ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಅನೇಪ ಅಪರೂಪದ ಸಾಧನೆಗಳನ್ನು ಮಾಡಿದೆ ಎಂದರು. ಅದಲ್ಲದೆ ದ್ರಾವಿಡ್ ಮತ್ತು ಗಂಗೂಲಿಯನ್ನು ಸ್ಮರಿಸಿ, ಅವರ ಕೊಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.