ಬುಮ್ರಾ ಜೊತೆ ಪ್ರೀತಿ ಬಲೆಯಲ್ಲಿ ನಟಸಾರ್ವಭೌಮ ನಾಯಕಿ?

Date:

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಜೋಡಿಯಾಗಿ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರೀತಿ ಬಲೆಯಲ್ಲಿ ಬಿದ್ದಿದ್ದಾರೆ. ಅದು ಟೀಮ್ ಇಂಡಿಯಾದ ಬೌಲಿಂಗ್ ಅಸ್ತ್ರ, ವಿಶ್ವದ ನಂಬರ್ 1 ಬೌಲರ್ ಜಸ್​​ಪ್ರೀತ್ ಬುಮ್ರಾ ಅವಡೊನೆ.
ಹೌದು ಸಿನಿಮಾ ಸ್ಟಾರ್​ಗಳಿಗೆ ಕ್ರಿಕೆಟರ್​ಗಳ ಮೇಲೆ ಪ್ರೀತಿ ಆಗುವುದು ಕಾಮನ್. ಅನೇಕ ಸ್ಟಾರ್ ಕ್ರಿಕೆಟರ್ಸ್, ಸಿನಿ ತಾರೆಯರು ಪ್ರೀತಿಸಿ ಮದುವೆ ಆಗಿದ್ದಾರೆ. ಅದಲ್ಲದೆ ಎಷ್ಟೋ ಜನರ ಮೇಲೆ ಗಾಸಿಪ್ ಹರಿದಾಡಿದ್ದೂ ಇದೆ. ಅದೇರೀತಿ ಈಗ ಬುಮ್ರಾ ಮತ್ತು ನಟ ಸಾರ್ವಭೌಮ ಹೀರೋಯಿನ್ ಅನುಪಮಾ ಪರಮೇಶ್ವರನ್ ಮೇಲೆ ಕೇಳಿಬಂದಿದೆ.
ಮಲೆಯಾಳಂನ ಸ್ಟಾರ್ ನಟಿ ಅನುಪಮಾ ನಟಸಾರ್ವಭೌಮಗೆ ನಾಯಕಿಯಾಗಿ ಮಿಂಚಿದ್ದಾರೆ. ಬುಮ್ರಾ ಮತ್ತು ಅನುಪಮಾ ನಡುವೆ ಈಗಾಗಲೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಅನುಪಮಾ ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ನಟಿ, ಬೂಮ್ರ ಉತ್ತರ ಭಾರತದವರು ಇವರಿಬ್ಬರ ಒಡನಾಟ ಹೇಗಾಯ್ತು ಅನ್ನೋದು ನೆಟ್ಟಿಗರ ಯಕ್ಷ ಪ್ರಶ್ನೆ.
ಮಲೆಯಾಳಂ ಬೆಡಗಿ ಅನುಪಮಾ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂದಲ್ಲೂ ಗುರುತಿಸಿಕೊಂಡಿದ್ದಾರೆ. ಗುಜರಾತ್ ಮೂಲದವರಾದ ಬುಮ್ರಾಗೆ ಮತ್ತು ಅನುಪಮಾ ಅವರ ಸ್ನೇಹ ಹೇಗಾಯ್ತು ಅನ್ನೋದು ನೆಟ್ಟಿಗರನ್ನು ಕಾಡುತ್ತಿದೆ,
ಸೋಶಿಯಲ್ ಮೀಡಿಯಾದಲ್ಲಿ ಕೆಲವೇ ಕೆಲವು ಮಂದಿಯನ್ನು ಫಾಲೋ ಮಾಡುತ್ತಿರುವ ಬುಮ್ರಾ, ಅನುಪಮ ಪರಸ್ಪರ ಫಾಲೋ ಮಾಡುತ್ತಿದ್ದಾರೆ. ಲೈಕ್ , ಕಾಮೆಂಟ್ ಕೂಡ ಜೋರಾಗಿ ನಡೆಯುತ್ತಿದೆ. ಇದು ಪ್ರೀತಿಯ ಅನುಮಾನವನ್ನು ಹುಟ್ಟು ಹಾಕಿದೆ. ಸದ್ಯ ಬುಮ್ರಾ ವರ್ಲ್ಡ್ ಕಪ್ ಆಡಲು ಇಂಗ್ಲೆಂಡ್​​ಗೆ ಹೋಗಿದ್ದಾರೆ. ಬುಮ್ರಾ ಮತ್ತು ಅನುಪಮಾರೇ ಪ್ರೀತಿ ವಿಷಯ ಸ್ಪಷ್ಟ ಪಡಿಸಬೇಕಿದೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...