ಇಲ್ಲಿ ನಿಮಗೆ ಮಾಮೂಲಿ ಪ್ಲೇಟ್ ನಲ್ಲಿ ತಿಂಡಿ-ಊಟ ಕೊಡಲ್ಲ..!
ಟಾಯ್ಲೆಟ್ ಕಮೋಡ್ ನಲ್ಲಿ ಊಟ-ತಿಂಡಿ ಕೊಡ್ತಾರೆ..! ಏನ್ ಗುರು ಇದು ಕರ್ಮ..? ಕಮೋಡ್ ನಲ್ಲಿ ಊಟ ಕೊಡೋದಾ ಅಂತ ನಾವು ನೀವು ಮೂಗ್ ಮುರೀತೀವಿ..! ಗಲೀಜು ಅಂತೀವಿ..! ಆದರೆ, ಇವಾಗ ಇದೇ ಟ್ರೆಂಡ್.
ಹಾಳಾಗಿ ಹೋಗ್ಲಿ, ಒಳ್ಳೇ ಗ್ಲಾಸ್ ನಲ್ಲಿ ನೀರು ಅಥವಾ ಜ್ಯೂಸ್ ಕೊಡ್ತಾರಾ..? ಅದೂ ಇಲ್ಲ..! ಯೂರಿನ್ ಕಲೆಕ್ಷನ್ ಬಾಟಲ್ ನಲ್ಲೇ ಪಾನೀಯಗಳನ್ನು ನೀಡೋದು. ಇದೊಂದು ಮಾರ್ಡನ್ ರೆಸ್ಟೋರೆಂಟ್.

ಕೇಳಲು ಒಂಥರಾ ಅನ್ಸಿದ್ರೂ ಈಗ ‘ಟಾಯ್ಲೆಟ್ ರೆಸ್ಟೋರೆಂಟ್ ‘ನದ್ದೇ ಹವಾ!
ತೈವಾನ್ ನ ರಾಜಧಾನಿ ತೈಪೆಯಲ್ಲಿ ಶುರುವಾದ ‘ಟಾಯ್ಲೆಟ್ ರೆಸ್ಟೋರೆಂಟ್’, ಈಗ ಜಗತ್ತಿನ ಬೇರೆ ಬೇರೆ ಕಡೆಗಳಲ್ಲೂ ಇವೆ.
ಇಲ್ಲಿ ನೀವು ಯಾವ್ದೇ ತಿಂಡಿ , ಊಟ ತಗೊಂಡ್ರೂ ಅದನ್ನು ಕಮೋಡ್ ರೀತಿಯ ಪಾತ್ರೆಯಲ್ಲೇ ಸರ್ವ್ ಮಾಡೋದು. ನೀವು ಅದೇರೀತಿಯ ಪ್ಲೇಟ್ ಗೆ ಬಡಿಸಿಕೊಂಡೇ ತಿನ್ಬೇಕು! ಕುಡಿಯಕ್ಕೆ ಏನೇ ಕೇಳಿದ್ರೂ ‘ಯೂರಿನ್ ಕಲೆಕ್ಷನ್ ಬಾಟಲ್ ‘ನಲ್ಲೇ ಕೊಡೋದು. ನೀವು ಅದರಲ್ಲೇ ಕುಡಿಬೇಕು..!
ಅಷ್ಟೇ ಅಲ್ಲ ಕುಳಿತುಕೊಳ್ಳೋ ಚೇರ್ ಕೂಡ ಕಮೋಡ್ ರೀತಿಯೇ ಇರುತ್ತೆ..! ಇನ್ನೂ ವಿಶೇಷ ಅಂದ್ರೆ ಏಷ್ಯನ್ ಮತ್ತು ವೆಸ್ಟರ್ನ್ ಕಮೋಡ್ ಎರಡೂ ಥರದ ಚೇರ್ ಗಳು, ಪಾತ್ರೆಗಳು ಸಿಗುತ್ತವೆ. ನೀವು ಬಯಸಿದ ಕಮೋಡ್ ನಲ್ಲೇ ತಿಂಡಿ ಕೊಡ್ತಾರಂತೆ..!
ಇಷ್ಟೆ ಆದ್ರೆ, ಹೇಗೋ ಅಡ್ಜೆಸ್ಟ್ ಮಾಡ್ಕೊಂಡು ತಿನ್ಬೊಹುದು…ಇನ್ನೂ ಅಸಹ್ಯ ಅನ್ಸೋದು ಏನಪ್ಪಾ ಅಂದ್ರೆ ‘ಮಲ’ವನ್ನು ಹೋಲುವ ತಿಂಡಿ ಕೂಡ ಇಲ್ಲಿದೆ.
ನಮ್ಗೆ-ನಿಮ್ಗೆ ಇದು ಗಲೀಜು, ಹಿಂಸೆ ಅಂತ ಅನಿಸ್ಬಹುದು. ವಾಕರಿಕೆ ಬರ್ಬಹುದು. ಆದರೆ, ಈ ರೆಸ್ಟೋರೆಂಟ್ ನ ಹುಡ್ಕೊಂಡೋಗಿ ಕಮೋಡ್ ನಲ್ಲಿ ಮಲದ ಆಕಾರ, ಬಣ್ಣ ಇರುವ ತಿಂಡಿ ತಿನ್ನೋರು ಇದ್ದಾರೆ. ಏನ್ರೀ ಇದು….ಅಬ್ಬಾ…! ಏನೇನಲ್ಲಾ ಟ್ರೆಂಡ್ ಆಗುತ್ತೋ.?






