ಇತ್ತೀಚಿನ ದಿನಗಳಲ್ಲಿ ಹರೆಯದ ಹುಡುಗ ಹುಡುಗಿಯರು ಕುಡಿಯುವುದು ಕಾಮನ್ ಆಗಿ ಹೋಗಿದೆ. ಕೆಲವರು ವಾರಕ್ಕೆ ಇಂತಿಷ್ಟು ಬಾರಿ ಅಂತ ಫಿಕ್ಸ್ ಮಾಡಿಕೊಂಡಿದ್ರೆ ಇನ್ನು ಕೆಲವರು ನಿತ್ಯವೂ ಅಭ್ಯಾಸ ಮಾಡಿಕೊಂಡಿರ್ತಾರೆ. ವೈನ್ ಅಥವಾ ಬಿಯರ್ ಕುಡಿಯೋದ್ರಿಂದ ಸಂಬಂಧಿ ಕಾಯಿಲೆಗೆ ರಾಮಬಾಣವೆಂದು ಅಧ್ಯಯನವೊಂದು ಹೇಳಿದೆ. ಅಷ್ಟೇ ಅಲ್ಲಾ ಹೃದಯ ಕಾಯಿಲೆಯಿಂದ ಸಂಭವಿಸಬಹುದಾದ ಅಕಾಲಿಕ ಮರಣವನ್ನು ತಪ್ಪಿಸುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಬಿಯರ್ ಪ್ರಿಯರಿಗೆ ಸಂತಸ ತಂದಿದೆ.
ಟೆಕ್ಸಾಸ್ ವಿಶ್ವವಿದ್ಯಾನಿಲಯ ಹಾಗೂ ಶಾಂಡೋಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಸುದೀರ್ಘ 8 ವರ್ಷಗಳ ಕಾಲ ಅಧ್ಯಯನ ನಡೆಸಿದ್ರು. ಸಂಶೋಧಕರು 8 ವರ್ಷಗಳ ಕಾಲ 3,33,247 ಅಮೆರಿಕನ್ನರ ಮೇಲೆ ಅಧ್ಯಯನ ನಡೆಸಿ ಒಂದು ವರದಿ ನೀಡಿದೆ. ಅದೇನಪ್ಪಾ ಅಂದ್ರೆ ಕಡಿಮೆ ಪ್ರಮಾಣದಲ್ಲಿ ಬಿಯರ್ ಹಾಗೂ ವೈನ್ ಸೇವನೆ ಮಾಡುವುದು ಹೃದಯಕ್ಕೆ ಒಳ್ಳೆಯದು. ಇದನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಅಕಾಲಿಕ ಮರಣ ಹೊಂದುವ ಪ್ರಮಾಣ ಶೇಕಡಾ 22ರಷ್ಟು ಕಡಿಮೆ ಎಂದಿದೆ ಅಧ್ಯಯನ. ಹಾಗಂತ ಅತಿಯಾದ ವೈನ್ ಹಾಗೂ ಬಿಯರ್ ಸೇವನೆ ಮಾಡಿದರೆ ಕ್ಯಾನ್ಸರ್ ರೋಗ ಕಾಡುವ ಸಾಧ್ಯತೆ ಇರುತ್ತೆ ಎನ್ನುವುದನ್ನೂ ಸಂಶೋಧಕರು ತಿಳಿಸಿದ್ದಾರೆ.