ಕುಡಿದು ವಾಹನ ಚಲಾಯಸಿದ ಡೆಪ್ಯೂಟಿ ತಹಸಿಲ್ದಾರ್ ಕಾರು ಪಲ್ಟಿಯಾಗಿದ್ದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪಟ್ಟಣ,ಕಬ್ಬೂರು ಬಳಿ ಇಂದು ಮಧ್ಯಾಹ್ನ ನಡೆದಿದೆ.ಅಶೋಕ ನಂದಪ್ಪನವರ ಜಮಖಂಡಿ ತಾಲೂಕಿನ ಡೆಪ್ಯೂಟಿ ತಹಸಿಲ್ದಾರ್ ನಂದಪ್ಪನವರ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರಿನಲ್ಲಿ ತಹಶಿಲ್ದಾರ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕಾರು ಡೆಪ್ಯೂಟಿ ತಹಶೀಲ್ದಾರ ಮದ್ಯಪಾನ ಮಾಡಿ ಚಲಾಯಿಸುತ್ತಿದ್ದರು . ಈ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಇನ್ನು ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದುತಹಸಿಲ್ದಾರ್ ನಂದಪ್ಪನವರಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿತ್ತಿದ್ದಾರೆ