ವಿರಾಟ್ ಕೊಹ್ಲಿ & ಟೀಮ್ ಭಾರತಕ್ಕೆ 3ನೇ ವಿಶ್ವಕಪ್ ತರಲೆಂದು ಇಂಗ್ಲೆಂಡ್ಗೆ ಹೋಗಿದೆ. ಇಂಗ್ಲೆಂಡ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಈ ಸಲ ಕಪ್ ನಮ್ದೇ ಎಂದು ಸಾರುತ್ತಿರುವ ಭಾರತಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿ ನಮ್ಮನ್ನು ಸೋಲಿಸೋರು ಯಾರು ಇಲ್ರಿ.. ವಿಶ್ವಕಪ್ ಈ ಬಾರಿ ನಮ್ಮದೇ ಎಂದು ಹೇಳುತ್ತಿರುವ ವಿರಾಟ್ ಕೊಹ್ಲಿ ಪಡೆಗೆ ಗಾಯದ ಸಮಸ್ಯೆ ಮಾತ್ರ ಎಡಬಿಡದೆ ಕಾಣುತ್ತಿದೆ.
ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಆಟವಾಡಿ ಶತಕ ಬಾರಿಸಿದ್ದ ಆರಂಭಿಕ ಆಟಗಾರ ಶಿಖರ್ ಧವನ್. ನಂತರ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಅವರ ಎಡಗೈ ಹೆಬ್ಬೆರಳಿಗೆ ಗಂಭೀರಗಾಯವಾಗಿದ್ದು, ಅವರು ವಿಶ್ವಕಪ್ ಅಭಿಯಾನವನ್ನೇ ಮೊಟಕುಗೊಳಿಸಬೇಕಾಗಿದೆ. ಅವರು ವಿಶ್ವಕಪ್ ನಿಂದ ಔಟ್ ಆಗಿದ್ದಾರೆ.
ನಂತರದ ಭಾರತ ಪಾಕ್ ವಿರುದ್ಧ ಪಂದ್ಯವಾಡಿತು. ಅದಕ್ಕು ಮುನ್ನ ನಡೆಯಬೇಕಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಪಾಕ್ ವಿರುದ್ಧ ನಡೆದ ಪಂದ್ಯದ ವೇಳೆ ಭುವನೇಶ್ವರ್ ಕುಮಾರ್ ಸ್ನಾಯುಸೆಳೆತಕ್ಕೆ ಒಳಗಾಗಿದ್ದಾರೆ. ಅವರು ಮುಂದಿನ ಪಂದ್ಯ ಆಡುವುದು ಅನುಮಾನ. ಈಗ ಇವೆಲ್ಲದರ ನಡುವೆ ಆಲ್ ರೌಂಡರ್ ವಿಜಯ್ ಶಂಕರ್ ಪೆಟ್ಟು ಮಾಡಿಕೊಂಡಿದ್ದಾರೆ.
ಪಾಕಿಸ್ತಾದ ವಿರುದ್ಧ ವಿಶ್ವಕಪ್ಗೆ ಪಾದಾರ್ಪಣೆ ಮಾಡಿದ್ದ ಆಲ್ ರೌಂಡರ್ ವಿಜಯ್ ಬ್ಯಾಟಿಂಗ್ ನಲ್ಲಿ ಅಂತಿಮ ಹಂತದಲ್ಲಿ ಕಣಕ್ಕಿಳಿದು 15 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಬಳಿಕ ಬೌಲಿಂಗ್ ನಲ್ಲಿ 2 ವಿಕೆಟ್ ಕಿತ್ತು ಮಿಂಚಿದ್ದರು. ಎಸೆದ ಮೊದಲ ಬಾಲ್ ನಲ್ಲೇ ವಿಕೆಟ್ ಕಿತ್ತು ದಾಖಲೆ ನಿರ್ಮಿಸಿದ್ದರು.
ಮುಂದಿನ ಪಂದ್ಯಗಳಿಗೆ ಶಂಕರ್ ಆಡುವುದು ಪಕ್ಕಾ ಆಗಿತ್ತು. ಆದರೆ, ಪ್ರಾಕ್ಟೀಸ್ ವೇಳೆ ಬುಮ್ರಾ ಬಾಲ್ ಶಂಕರ್ ಕಾಲಿಗೆ ತಗುಲಿ ಗಾಯವಾಗಿದೆ. ಹೀಗಾಗಿ ವಿಜಯ್ ಅವರು ಅಪ್ಘಾನಿಸ್ತಾನದ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ವಿಜಯ್ ಹೊರಗುಳಿದಲ್ಲಿ ಮತ್ತೋರ್ವ ಆಲ್ ರೌಂಡರ್ ರವೀಂದ್ರ ಜಡೇಜ ಅವರಿಗೆ ಮಣೆ ಹಾಕಲಾಗುತ್ತದೆಯೇ ಅಥವಾ ಧವನ್ ಬದಲಿಗೆ ಎಂಟ್ರಿ ಕೊಟ್ಟಿರುವ ರಿಷಭ್ ಪಂತ್ ಗೆ ಅವಕಾಶ ಕೊಡಲಾವಗುತ್ತದೆಯೇ ಕಾದುನೋಡಬೇಕು.