ಕ್ರಿಕೆಟ್ ಕೇವಲ ಒಂದು ಆಟವಷ್ಟೆ. ಶಸ್ತ್ರರಹಿತ ಯುದ್ಧವಲ್ಲ..!

Date:

ಈಗ ದೇಶದಲ್ಲೆಲ್ಲಾ ಟಿ20 ಫೀವರ್. ನಾಳೆ ಭಾರತ ಪಾಕಿಸ್ತಾನಗಳ ನಡುವಿನ ಪಂದ್ಯದಲ್ಲಿ ಈ ಫೀವರ್‍ನ ಬಿಸಿ ಇನ್ನೊಂದೆರಡು ಡಿಗ್ರೀ ಮೇಲೇರುವುದಂತೂ ಖಂಡಿತ. ಏಕೆಂದರೆ ಭಾರತ ಹಾಗು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳು. ಈ ಎರಡು ದೇಶಗಳ ನಡುವಿನ ಪಂದ್ಯವನ್ನು ಕೇವಲ ಒಂದು ಪಂದ್ಯವಾಗಿ ಕಾಣುವುದಕ್ಕಿಂತ ಅದನ್ನು ಒಂದು ಯುದ್ಧವಾಗಿಯೇ ಕಾಣಲಾಗುತ್ತದೆ. ಈ ಎರಡು ದೇಶಗಳು ಆಡುತ್ತಿರುವಾಗ ಕ್ರಿಕೆಟ್ ಮೈದಾನ ರಣಾಂಗಣವಾಗುತ್ತದೆ. ಎದುರಾಳಿ ಬೌಲರ್‍ನ ಚೆಂಡನ್ನು ಸಿಕ್ಸರ್ ಬಾರಿಸಿದ ಬ್ಯಾಟ್ಸಮನ್ ಗೆದ್ದೆ ಎಂದು ಬೀಗಿದರೆ, ಮುಂದಿನ ಎಸೆತದಲ್ಲಿ ಅವನ ವಿಕೆಟ್ ಉರುಳಿಸಿ ಬೌಲರ್ ರಣಕೇಕೆ ಹಾಕುತ್ತಾನೆ. ಪ್ರೇಕ್ಷಕರೂ ಕೂಡ ಅದೇ ರಣೋತ್ಸಾಹದಿಂದ ತಮ್ಮ ತಂಡವನ್ನು ಹುರಿದುಂಬಿಸುತ್ತಾರೆ. ಏಕೆ ಹೀಗೆ?

ದೇಶದ ಗಡಿಯಲ್ಲಿ ಗುಂಡು ಹಾರಿಸುತ್ತಾ ಜೀವ ತೆಗೆಯುವ ಹಾಗು ಸ್ಟೇಡಿಯಂನೊಳಗೆ ಬಾಲು ಬಾರಿಸುತ್ತಾ ಕ್ರಿಕೆಟ್ ಆಡುವ ದೇಶಗಳು ಬಹಶಃ ಬೇರೆಲ್ಲೂ ಇಲ್ಲ. ಭಾರತ ಪಾಕಿಸ್ತಾನಗಳು ಕ್ರಿಕೆಟ್‍ನಲ್ಲಿ ಮಾತ್ರವಲ್ಲದೆ ದೇಶದ ಗಡಿಗಳಲ್ಲೂ ಸೆಣಸುತ್ತವೆ. 1999ರಲ್ಲಿ ಇಂಗ್ಲೆಂಡಿನಲ್ಲಿ ವಿಶ್ವಕಪ್ ನೆಡಯುತ್ತಿದ್ದ ಸಂದರ್ಭದಲ್ಲಿ ಭಾರತದ ಗಡಿಯಲ್ಲಿ ಕಾರ್ಗಿಲ್ ಯುದ್ಧ ನೆಡೆಯುತ್ತಿತ್ತು. ಭಾರತ ಅಲ್ಲಿ ಪಾಕಿಸ್ತಾನದ ವಿರುದ್ಧ 47 ರನ್ನುಗಳ ಜಯ ಸಾಧಿಸಿದರೆ, ಅದೇ ದಿನ ಇಲ್ಲಿ 6 ಪಾಕೀ ಸೈನಿಕರು ಹಾಗು 3 ಜನ ಭಾರತದ ಆಫೀಸರು ಮೃತಪಟ್ಟಿದ್ದರು. ಇಂತಹ ಎರಡು ದೇಶಗಳ ನಡುವಿನ ಪಂದ್ಯ ಕೇವಲ ಪಂದ್ಯಕ್ಕೆ ಸೀಮಿತಾವಗಿರದ ಹಲವು ಭಾವನೆಗಳನ್ನು ಒಳಗೊಂಡಿರುತ್ತವೆ. ತನ್ನ ದೇಶ ಪಂದ್ಯವನ್ನು ಗೆದ್ದರೆ, ಜನರಿಗೆ ಯುದ್ಧವನ್ನೇ ಗೆದ್ದಷ್ಟು ಸಂಭ್ರಮ.

ಇನ್ನು ಕ್ರಿಕೆಟ್ ಆಡುವುದರಿಂದ ಎರಡು ದೇಶಗಳ ಸ್ನೇಹ ಸಂಬಂಧಗಳು ಸುಧಾರಿಸಿ ಶಾಂತಿ ನೆಲಸುತ್ತದೆ ಎಂಬ ಕಲ್ಪನೆ ಇದೆ. ಕಳೆದ ಆರು ದಶಕಗಳಲ್ಲಿ ದೇಶಗಳ ನಡುವಿನ ಶಾಂತಿಗೆ ಕ್ರಿಕೆಟ್‍ನ ಕೊಡುಗೆ ಅಷ್ಟಕ್ಕಷ್ಟೆ. ಏಕೆಂದರೆ, ಸಾಮಾನ್ಯವಾಗಿ ಈ ಎರಡು ದೇಶಗಳ ನಡುವೆ ಸಂಬಂಧ ಚೆನ್ನಗಿದ್ದಾಗ ಮಾತ್ರ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಪರಿಸ್ಥಿತಿ ಸ್ವಲ್ಪ ಬಿಗಡಾಯಿಸಿತೆಂದರೆ ಮತ್ತೆ ಆಟ ಅಲ್ಲಿಗೆ ಬಂದ್. 2003-04ರ ವೇಳೆಯಲ್ಲಿ ಎಲ್ಲಾ ಚೆನ್ನಾಗಿದ್ದಾಗ ಪಾಕಿಸ್ತಾನಕ್ಕೆ ಹೋಗಿ ಆಟವಾಡಿ ಬಂದ ಭಾರತ 2008ರ ಮುಂಬೈ ದಾಳಿಯ ನಂತರ ಮತ್ತೆ ಆಡುವುದನ್ನು ನಿಲ್ಲಿಸಿಬಿಟ್ಟಿತು. ಆಗಿನ ಕ್ರೀಡಾ ಸಚಿವ ಎಂ.ಎಸ್. ಗಿಲ್ “ಒಂದು ತಂಡ ನಮ್ಮ ದೇಶದಲ್ಲಿ ಪ್ರಾಣ ತೆಗೆಯಲು ಬರುವಾಗ ಮತ್ತೊಂದು ತಂಡ ಕ್ರಿಕೆಟ್ ಆಡಲು ಅಲ್ಲಿ ಕಳಿಸಲು ಸಾದ್ಯವಿಲ್ಲ” ಎಂದಿದ್ದರು. ಐಸಿಸಿ ಟೂರ್ನಿಗಳನ್ನು ಬಿಟ್ಟರೆ ಅಲ್ಲಿಂದ ಮುಂದಕ್ಕೆ ಭಾರತ ಪಾಕಿಸ್ತಾನ ಕ್ರಿಕೆಟ್ ಆಡಿದ್ದೇ ಕಡಿಮೆ. ಪಾಕಿಸ್ತಾನದ ಆಟಗಾರರು ಐಪಿಎಲ್‍ನಿಂದಲೂ ಹೊರಗುಳಿದರು. ಕೇವಲ ಕ್ರಿಕೆಟ್ ಆಡುವಾಗ ಎದುರಾಳಿ ಆಟಗಾರನ ಕೈ ಕುಲುಕಿದರೆ, ನಗುತ್ತಾ ಮಾತನಾಡಿದರೆ, ಬಗ್ಗಿ ಶೂ ಲೇಸ್ ಕಟ್ಟಿದರೆ, ದೇಶಗಳ ನಡುವೆ ಶಾಂತಿ ನೆಲೆಸುವುದಿಲ್ಲವಲ್ಲ?

ಈಗ ಟಿ20 ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಭಾರತಕ್ಕೆ ಬಂದಿದೆಯಾದರೂ ಎರಡು ದೇಶಗಳ ನಡುವಿನ ಸಂಬಂಧ ಮೊದಲಿಗಿಂತಲೂ ಹಳಸಿದೆ. ಭಯೊತ್ಪಾದನೆ, ಗಡಿವಿವಾದ ಹೀಗೆ ಹಲವು ವಿಚಾರಗಳಲ್ಲಿ ಎರಡು ದೇಶಗಳ ನಡುವೆ ವೈಮನಸ್ಯವಿದೆ. ಇದರೊಡನೆ ಭಾರತ ಪಾಕಿಸ್ತಾನದ ಪಂದ್ಯವನ್ನು ಧರ್ಮಶಾಲಾ ಸ್ಟೇಡಿಯಂನಿಂದ ಈಡನ್ ಗಾರ್ಡನ್‍ಗೆ ವರ್ಗಾಯಿಸಲಾಗಿದೆ. ಕಾರಣ ತನ್ನ ರಾಜ್ಯದಲ್ಲಿರುವ ಸೈನಿಕರ ಕುಟುಂಬಗಳು ತಮ್ಮ ‘ವೈರಿ’ಯೊಡನೆ ಕ್ರಿಕೆಟ್ ಪಂದ್ಯವನ್ನು ಒಪ್ಪುವುದಿಲ್ಲ ಎಂದು ಹಿಮಾಚಲ ಪ್ರದೇಶ ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದು ಕಡೆ ‘ಭಾರತ ದೇಶದಲ್ಲಿ ನನಗೆ ಹೆಚ್ಚು ಪ್ರೀತಿ ಸಿಗುತ್ತದೆ’ ಎಂದು ಹೇಳಿದ ಅಫ್ರೀದಿ ಮೇಲೆ ಪಾಕಿಸ್ತಾನದ ವಕೀಲರೊಬ್ಬರು ದೇಶದ್ರೋಹದ ಆರೋಪದ ಮೇಲೆ ನೋಟೀಸು ಜಾರಿ ಮಾಡಿದ್ದಾರೆ.

ಅದೇನೆ ಇರಲಿ, ದೇಶಗಳ ನಡುವಿನ ತಿಕ್ಕಾಟವನ್ನು ಆಟದೊಳಗೆ ತರುವುದು ಬೇಡ. ನಾವು ಕ್ರಿಕೆಟ್ ಅಭಿಮಾನಿಗಳಾಗಿ ಪಂದ್ಯವನ್ನು ಕೇವಲ ಒಂದು ಪಂದ್ಯವನ್ನಾಗಿ ನೋಡೋಣ. ಸೋಲು ಗೆಲುವು ಕ್ರಿಕೆಟ್ ತಂಡಕ್ಕೆ ಹೊರತು ದೇಶಕ್ಕಲ್ಲ. ಪಂದ್ಯದಲ್ಲಿ ಆಡುವ ತಂಡಗಳು ಆ ದೇಶವನ್ನು ಪ್ರತಿನಿಧಿಸುತ್ತಿವೆಯೆ ಆ ದೇಶದ ರಾಜಕೀಯ ನಿಲುವುಗಳನ್ನಲ್ಲ. ತಮ್ಮ ತಂಡ ಗೆಲ್ಲಬೇಕೆಂಬ ಅಪೇಕ್ಷೆ ಇರಲಿ ಸೋಲಲೇಬಾರದೆಂಬ ಆಕ್ರೋಶವಲ್ಲ.

ಕ್ರಿಕೆಟ್ ಕೇವಲ ಒಂದು ಆಟವಷ್ಟೆ. ಶಸ್ತ್ರರಹಿತ ಯುದ್ಧವಲ್ಲ.

  • ತ್ರಿಲೋಕ್ ತ್ರಿವಿಕ್ರಮ

ಪೆಟ್ರೋಲ್, ಡಿಸೇಲ್ ಮೇಲೂ ಕಣ್ಣಿಟ್ಟ ಸರ್ಕಾರ..! ಬೆಲೆ ಏರಿಕೆಯ ಬಿಸಿ..!?

POPULAR  STORIES :

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...