ಸಿನಿಮಾ ನಟ-ನಟಿಯರು ಅಂದ್ರೆ ಅವರಿಗೊಂದು ಬಿರುದು ಸಾಮಾನ್ಯವಾಗಿರುತ್ತೆ. ಡಾ. ರಾಜ್ ಅವರನ್ನು ವರನಟ, ನಟಸಾರ್ಭೌಮ ಅಂತೆಲ್ಲಾ ಕರೀತೀವಿ. ಅದೇರೀತಿ ವಿಷ್ಣುವರ್ಧನ್ ಅವರಿಗೆ ಸಾಹಸಸಿಂಹ ಅಂತ, ಅಂಬರೀಶ್ ಅವರಿಗೆ ರೆಬೆಲ್ ಸ್ಟಾರ್ ಎಂದು ಕರೆಯುತ್ತೇವೆ. ಶಂಕರ್ ನಾಗ್ ಕರಾಟೆ ಕಿಂಗ್ ಎಂದೇ ಜನಪ್ರಿಯರು.
ಈ ಸ್ಟಾರ್ ನೇಮ್ಗಳನ್ನು ಬಹುತೇಕ ಎಲ್ಲ ನಟರು ಹೊಂದಿರುತ್ತಾರೆ. ರವಿಚಂದ್ರನ್ ಅವರು ಕ್ರೇಜಿಸ್ಟಾರ್ ಆಗಿ, ಜಗ್ಗೇಶ್ ಅವರು ನವರಸನಾಯಕರಾಗಿ, ಶಿವರಾಜ್ಕುಮಾರ್ ಅವರು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಆಗಿ, ಸುದೀಪ್ ಅಭಿನಯ ಚಕ್ರವರ್ತಿ ಕಿಚ್ಚ ಆಗಿ, ದರ್ಶನ್ ಅವರು ಚಾಲೆಂಜಿಂಗ್ ಸ್ಟಾರ್ ಆಗಿ, ಡಿ.ಬಾಸ್ ಆಗಿ, ಪುನೀತ್ ಪವರ್ ಸ್ಟಾರ್ ಆಗಿ , ಯಶ್ ರಾಕಿಂಗ್ ಸ್ಟಾರ್ ಆಗಿ, ಶ್ರೀಮುರಳಿ ರೋರಿಂಗ್ ಸ್ಟಾರ್ ಆಗಿ ಜನಮನದಲ್ಲಿದ್ದಾರೆ. ಅದೇ ರೀತಿ ನಾಯಕಿಯರಲ್ಲಿ ರಚಿತಾ ರಾಮ್ ಡಿಂಪಲ್ ಕ್ವೀನ್, ಮೇಘನಾ ಗಾಂವಂಕರ್ ಸ್ಯಾಂಡಲ್ವುಡ್ ಮೋನಾಲಿಸ ಆಗಿ, ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ ಸಿಂಡ್ರೆಲಾ ಆಗಿ, ರಮ್ಯಾ ಮೋಹಕತಾರೆಯಾಗಿ ನಮ್ಮ ಮುಂದಿದ್ದಾರೆ. ಹೀಗೆ ಎಲ್ಲಾ ಸ್ಟಾರ್ ಗಳಿಗೂ ಸ್ಟಾರ್ ನೇಮ್ ಇದೆ.
ಇವರೆಲ್ಲರ ಬಗ್ಗೆ ಹೇಳಿದಾಗ ಹೊಸತನದ ಹರಿಕಾರ ರಿಯಲ್ ಸ್ಟಾರ್ ಉಪೇಂದ್ರ ಅವರ ಬಗ್ಗೆ ಹೇಳದೇ ಇದ್ದರೆ ಆಗುತ್ತಾ? ಉಪೇಂದ್ರ ಅವರು ರಿಯಲ್ ಸ್ಟಾರ್ ಆಗಿ ಅಭಿಮಾನಿಗಳ ಮನದಲ್ಲಿ ನಿಂತಿದ್ದಾರೆ. ನೇರ ನೇರ ಮಾತುಗಳ ನಿರ್ದೇಶಕ, ನಟ ಉಪ್ಪಿ ರಿಯಲ್ ಸ್ಟಾರ್ ಉಪೇಂದ್ರ ಎಂದೇ ಮನೆಮಾತು. ಈ ಉಪೇಂದ್ರ ಅವರಿಗೆ ಹೊಸ ಬಿರುದು ಬಂದಿದೆ. ಉಪೇಂದ್ರ ಚಕ್ರವರ್ತಿಗಳ ಪಟ್ಟಿಗೆ ಸೇರಿದ್ದಾರೆ.
ಶಿವರಾಜ್ಕುಮಾರ್ ಅವರನ್ನು ಕರುನಾಡ ಚಕ್ರವರ್ತಿ, ಸುದೀಪ್ ಅವರನ್ನು ಅಭಿನಯ ಚಕ್ರವರ್ತಿ ಎಂದು ಕರೆಯುತ್ತೇವೆ. ಈ ಚಕ್ರವರ್ತಿಗಳ ಪಟ್ಟಿಗೆ ಉಪ್ಪಿ ಸೇರಿದ್ದಾರೆ. ಉಪೇಂದ್ರ ಅವರಿಗೆ ಅಭಿಮಾನಿಗಳ ಚಕ್ರವರ್ತಿ ಎಂಬ ಹೊಸ ಬಿರುದೊಂದು ಸಿಕ್ಕಿದೆ.
ಉಪ್ಪಿ ಸದಾ ಅಭಿಮಾನಿಗಳ ಜೊತೆಗೆ ಇರುವುದರಿಂದ ಅವರಿಗೆ ಅಭಿಮಾನಿಗಳ ಚಕ್ರವರ್ತಿ ಎಂದು ಸ್ಟಾರ್ ನೇಮ್ ಒಲಿದು ಬಂದಿದೆ. ಉಪ್ಪಿ ಐ ಲವ್ ಯು ಬಳಿಕ ತೆಲುಗಿನಲ್ಲೂ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಅವರು ಎಲ್ಲೇ ಹೋದರು ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಸದಾ ಬೆರೆತಯುವ ಉಪ್ಪಿ ನಿಜಕ್ಕೂ ಅಭಿಮಾನಿಗಳ ಚಕ್ರವರ್ತಿ.
ರಿಯಲ್ ಸ್ಟಾರ್ ಉಪೇಂದ್ರಗೆ ಹೊಸ ಸ್ಟಾರ್ ನೇಮ್… ‘ಚಕ್ರವರ್ತಿ’ ಪಟ್ಟಿಗೆ ಸೇರಿದ ಉಪ್ಪಿ..!
Date: