2007ರಲ್ಲೇ ದರ್ಶನ್- ಮುನಿರತ್ನ ನಡುವೆ ಆ ಡೀಲ್ ಆಗಿತ್ತು..!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ರೆಡಿಯಾಗಿದೆ. ನಾಗಣ್ಣ ನಿರ್ದೇಶನದ ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ. 

ಈಗಾಗಲೇ ಕುರುಕ್ಷೇತ್ರ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ನಡುವೆ ಮುನಿರತ್ನ ಮತ್ತು ದರ್ಶನ್ ನಡುವೆ ನಡೆದ ಡೀಲ್ ಒಂದು ಬಹಿರಂಗವಾಗಿದೆ. ಹೌದು , ಇತ್ತೀಚೆಗೆ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸ್ವತಃ ಡಿ.ಬಾಸ್ ಅವರೇ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
2007ರಲ್ಲಿ ಉಪೇಂದ್ರ ಮತ್ತು ದರ್ಶನ್ ನಟನೆಯ ಅನಾಥರು ಸಿನಿಮಾ ರಿಲೀಸ್ ಆಗಿತ್ತು. ಸಾಧುಕೋಕಿಲಾ ನಿರ್ದೇಶನದ ಆ ಸಿನಿಮಾಕ್ಕೆ ಬಂಡವಾಳ ಹಾಕಿದ್ದವರು ಮುನಿರತ್ನ. ಆ ಅನಾಥರು ಸಿನಿಮಾ ಟೈಮ್​ನಲ್ಲಿ ಮುನಿರತ್ನ ಕುರುಕ್ಷೇತ್ರ ಸಿನಿಮಾವನ್ನು ಮಾಡುವ ಬಗ್ಗೆ ಮಾತಾಡಿದ್ದರಂತೆ. ಆಗ ದರ್ಶನ್ ಮಾಡಿ ಸರ್, ನಿಮ್ಮಂಥಾ ನಿರ್ಮಾಪಕರಿಂದ ಸಾಧ್ಯ ಎಂದಿದ್ದರಂತೆ.
ಕೊನೆಗೂ ಆ ಕಾಲ ಕೂಡಿ ಬಂದಿದ್ದು, ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಸಿನಿಮಾ ತನಗೆ ಇಷ್ಟವಾಗ ಹೊರತು ರಿಲೀಸ್ ಆಗ್ಬಾರ್ದು ಅಂತಿದ್ದ ಮುನಿರತ್ನ ಪೋಸ್ಟ್ ಪ್ರೊಡಕ್ಷನ್​ ವರ್ಕ್​ಗೆ ತುಂಬಾ ಸಮಯ ತೆಗೆದುಕೊಂಡಿದ್ದರು, ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.
ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...