ರಾಜ್ಯದ ಐಪಿಎಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆಯನ್ನು ನಡೆಸಿದ್ದರು.
ಡಿಜಿಪಿ ನೀಲಮಣಿರಾಜು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸುನೀಲ್ ಕುಮಾರ್, ಹರಿಶೇಖರನ್, ಪ್ರವೀಣ್ ಸೂದ್, ಹೇಮಂತ್ ನಿಂಬಾಳ್ಕರ್, ಭಾಸ್ಕರ್ ರಾವ್, ಎನ್ ಎಸ್ ಮೇಘರಿಕ್, ಪಿಬಿ ಸಂಧು, ಹಿಂತೇಂದ್ರ, ಕಮಲ್ ಪಂತ್, ಪರಮಶಿವಮೂರ್ತಿ, ಮಾಲಿನಿ ಕೃಷ್ಣ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದ ಈ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೆಲವು ಕಟ್ಟುನಿಟ್ಟಿನ ಅಂತ ಸೂಚನೆಗಳನ್ನು ಅಂತ ಹೊರಡಿಸಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಅಧಿಕಾರಿಗಳು ಶ್ರಮವಹಿಸಬೇಕು, ಎಲ್ಲಾ ಡಿಸಿಪಿಗಳು ಫೀಲ್ಡಿಗಿಳಿದು ಕೆಲಸ ಮಾಡಬೇಕು, ಕ್ರೈಂ ರೇಟ್ ಆಗದಂತೆ ನಿಗಾ ವಹಿಸಬೇಕು, ಜನಸ್ನೇಹಿ ಪೊಲೀಸ್ ಹಾಗೂ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಡಿಸಿಪಿ, ಐಜಿಪಿ ಹಾಗೂ ಎಡಿಜಿಪಿ ಗಳಿಗೆ ಖಡಕ್ ಸೂಚನೆಯನ್ನು ಯಡಿಯೂರಪ್ಪ ನೀಡಿದರು.