ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್‌ಗೆ ವಿಶ್ ಮಾಡಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ ಟ್ವೀಟ್ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಹೌದು, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್‌ಗೆ ಭಾರತ ಕ್ರಿಕೆಟ್ ತಂಡದ ನಾಯಕ, ರನ್ಮಷಿನ್, ವಿಶ್ವದ ನಂಬರ್ 1 ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ‘ಹ್ಯಾಪಿ ರಿಟೈರ್ಮೆಂಟ್’ ಎಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಜೊತೆಗೆ ‘ಆಟದ ನಿಜವಾದ ಚಾಂಪಿಯನ್’ ಎಂದು ಕೊಹ್ಲಿ ಸ್ಟೇನ್ ಅವರನ್ನು ಬಣ್ಣಿಸಿದ್ದಾರೆ.
ಆಟದ ನಿಜವಾದ ಚಾಂಪಿಯನ್ ವೇಗದ ಮೆಷೀನ್ ಡೇಲ್ ಸ್ಟೇನ್ ಅವರ ನಿವೃತ್ತಿ ಜೀವನ ಖುಷಿಯಾಗಿಲಿ’ ಎಂದು ಕೊಹ್ಲಿ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ-ಭಾರತ ಮುಖಾಮುಖಿಯ ವೇಳೆ ಕೊಹ್ಲಿ-ಸ್ಟೇನ್ ಇಬ್ಬರೂ ದೈತ್ಯ ಪ್ರತಿಭೆಗಳು ಪರಸ್ಪರ ಪೈಪೋಟಿಗೆ ಇಳಿಯುತ್ತಿದ್ದುದನ್ನು ಕಂಡಿದ್ದ ಅಭಿಮಾನಿಗಳು, ಐಪಿಎಲ್ನಲ್ಲಿ ಇಬ್ಬರೂ ಒಂದೇ ಟೀಮ್ಗೆ ಬಲ ತುಂಬಿದ್ದನ್ನೂ ಕಣ್ತುಂಬಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 2008ರಿಂದ 2010ರ ವರೆಗೆ ಡೇಲ್ ಸ್ಟೇನ್ ಆಡಿದ್ದರು. ಗಾಯಕ್ಕೀಡಾಗಿ ಕೆಲ ವರ್ಷ ಕ್ರಿಕೆಟ್ನಿಂದ ದೂರ ಇದ್ದ ಸ್ಟೇನ್ 2019ರಲ್ಲಿ ಆರ್‌ಸಿಬಿ ಪರ ಎರಡು ಪಂದ್ಯಗಳಲ್ಲಿ ಆಡಿ ಎರಡೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು..!
A true champion of the game.
Happy retirement to the pace machine @DaleSteyn62 ???— Virat Kohli (@imVkohli) August 5, 2019
ಆದರೆ ಐಪಿಎಲ್ ನಲ್ಲಿ ಪುನಃ ಭುಜದ ಗಾಯಕ್ಕೊಳಗಾಗಿ ಟೂರ್ನಿಯಿಂದ ಹೊರಬಿದ್ದ ಡೇಲ್ ಸ್ಟೇನ್‌ಗೆ ಅನಂತರ ವರ್ಲ್ಡ್ಕಪ್ನಲ್ಲೂ ಆಡಲಾಗಲಿಲ್ಲ. ಸದ್ಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಸೀಮಿತ ಓವರ್ ಪಂದ್ಯಗಳನ್ನು ಮುಂದುವರೆಸೋ ಇಂಗಿತ ವ್ಯಕ್ತಪಡಿಸಿದ್ದಾರೆ.