ಗಂಗೂಲಿ ಟ್ವೀಟ್​​ಗೆ ರೀ ಟ್ವೀಟ್ ಮಾಡಿದ ಭಜ್ಜಿ ದ್ರಾವಿಡ್​ಗಿಂತ ಉತ್ತಮ ವ್ಯಕ್ತಿ ಸಿಗಲ್ಲ ಅಂದಿದ್ದೇಕೆ?

Date:

ಯಾರೂ ಕೂಡ ಆ ಕ್ರಿಕೆಟ್​ ವೈಭವವನ್ನು ಮರೆತಿಲ್ಲ. ಮರೆಯಲು ಸಾಧ್ಯವೂ ಇಲ್ಲ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಈ ಮೂವರು ಖ್ಯಾತನಾಮರು ಟೀಮ್ ಇಂಡಿಯಾದ ಆಧಾರಸ್ತಂಭಗಳಾಗಿ ನಿಂತು ಇಡೀ ವಿಶ್ವ ಕ್ರಿಕೆಟನ್ನು ಆಳಿದ್ದ ಸುವರ್ಣ ಯುಗ. ಸೌರವ್ ಗಂಗೂಲಿ ನಾಯಕತ್ವ, ರಾಹುಲ್ ದ್ರಾವಿಡ್ ಆ ತಂಡದ ಉಪ ನಾಯಕ.. ಗಂಗೂಲಿ ಸಾರಥ್ಯದ ಟೀಮ್ ನ ಯಶಸ್ಸಿಗೆ ದ್ರಾವಿಡ್ ಪಾತ್ರ ಬಹು ಮುಖ್ಯ. ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಬೇಕಾಗಿದ್ದನ್ನೆಲ್ಲಾ ಧಾರೆ ಎರೆದ ಸಹೃದಯಿ..
ಟೀಮ್ ಇಂಡಿಯಾ ಹಾಗೂ ವಿಶ್ವ ಕ್ರಿಕೆಟ್​ ಗೆ ದ್ರಾವಿಡ್ ಕೊಡುಗೆ ಏನೆಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ, ಬಿಸಿಸಿಐ ಮಾತ್ರ ದ್ರಾವಿಡ್​​ರಂಥಾ ದ್ರಾವಿಡ್​ರನ್ನೇ ಅವಮಾನಿಸಿ ಬಿಟ್ಟಿದೆ.
ದ್ರಾವಿಡ್​ಗೆ ಸ್ವ ಹಿತಾಸಕ್ತಿ ಸಂಘರ್ಷ ನೋಟಿಸನ್ನು ಕಳುಹಿಸಿದೆ. ಇದನ್ನು ಸೌರವ್ ಗಂಗೂಲಿ ತೀವ್ರವಾಗಿ ವಿರೋಧಿಸಿದ್ದಾರೆ. ರಾಹುಲ್​​​ ದ್ರಾವಿಡ್ ಅವರು ಇಂಡಿಯಾ ಸಿಮೆಂಟ್ ನ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ನಿರ್ದೇಶಕರಾಗಿ ಸ್ವಹಿತಾಸಕ್ತಿ ಸಂಘರ್ಷವನ್ನು ಒಳಗೊಂಡ ಆರೋಪವನ್ನು ಎದುರಿಸುತ್ತಿದ್ದಾರೆ . ಈ ಹಿನ್ನಲೆಯಲ್ಲಿ ಬಿಸಿಸಿಐ ಅಧಿಕಾರಿಗಳು ಅವರಿಗೆ ನೋಟಿಸ್ ನ್ನು ಜಾರಿ ಮಾಡಿದ್ದಾರೆ. ಈಗ ಈ ಕ್ರಮಕ್ಕೆ ಸೌರವ್ ಗಂಗೂಲಿ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಫ್ಯಾಷನ್…..ಸ್ವಹಿತಾಸಕ್ತಿಯ ಸಂಘರ್ಷ….ಸುದ್ದಿಯಲ್ಲಿ ಉಳಿಯಲು ಉತ್ತಮ ದಾರಿ ಎಂದರೆ.. ದೇವರು ಭಾರತೀಯ ಕ್ರಿಕೆಟ್ ಗೆ ಸಹಾಯ ಮಾಡಬೇಕು …… ದ್ರಾವಿಡ್‌ಗೆ ಬಿಸಿಸಿಐ ನೀತಿ ಸಂಹಿತೆ ಅಧಿಕಾರಿಯಿಂದ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಬಂದಿದೆ ,” ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ. ಗಂಗೂಲಿ ಟ್ವೀಟ್ ಗೆ ಬೆಂಬಲ ಸೂಚಿಸಿರುವ ಹರ್ಭಜನ ಸಿಂಗ್ ಅವರು ಹಿರಿಯ ಆಟಗಾರರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಕಿಡಿಕಾರಿದ್ದಾರೆ.

ನಿಜವಾಗಿಯೂ? ಇದೆಲ್ಲಿಗೆ ತಲುಪುತ್ತದೆ ಎನ್ನುವುದು ಗೊತ್ತಿಲ್ಲ..ಭಾರತೀಯ ಕ್ರಿಕೆಟ್ ಗೆ ಅವರಿಗಿಂತ ಉತ್ತಮ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ಅವರಿಗೆ ನೋಟಿಸ್ ಕಲಿಸುವ ಮೂಲಕ ಅವಮಾನ ಮಾಡಲಾಗಿದೆ..ಕ್ರಿಕೆಟ್ ಗೆ ಅವರ ಸೇವೆ ತುಂಬಾ ಅಗತ್ಯವಿದೆ…ದೇವರೇ ಭಾರತ ಕ್ರಿಕೆಟನ್ನು ಕಾಪಾಡಬೇಕು ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಹೀಗೆ ದ್ರಾವಿಡ್​​ ಗೆ ನೋಟಿಸ್​ ನೀಡಿದ್ದಕ್ಕೆ ಬಿಸಿಸಿಐ ತೀವ್ರ ಟೀಕೆಗೆ ಗುರಿಯಾಗುತ್ತಿದೆ.

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...