ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್ವುಮೆನ್ ಸಾರಾ ಟೇಲರ್ ಇದೀಗ ಕ್ರಿಕೆಟ್ನಿಂದಾಚೆಗೆ ಸುದ್ದಿಯಾಗಿದ್ದಾರೆ. ಸಾರಾ ತಮ್ಮ ಅಮೋಘ ವಿಕೆಟ್‌ಕೀಪಿಂಗ್ ಸಾಮರ್ಥ್ಯ ಮತ್ತು ಪ್ರಭಾವಯುತ ಬ್ಯಾಟಿಂಗ್ ಮೂಲಕವೇ ಜನಪ್ರಿಯತೆ ಹಾಗೂ ಕೀರ್ತಿಗಳಿಸಿದ ಸ್ಟಾರ್ ಆಟಗಾರ್ತಿ. 30 ವರ್ಷದ ಅನುಭವಿ ಆಟಗಾರ್ತಿ ಸಾರಾ ಈಗ ಬೆತ್ತಲೆ ಚಿತ್ರದ ಮೂಲಕ ಸುದ್ದಿಯಾಗಿದ್ದಾರೆ.
ಟೇಲರ್ ಇತ್ತೀಚೆಗಷ್ಟೇ ಮಾನಸಿಕ ತೊಳಲಾಟ, ಗೊಂದಲಗಳ ಕಾರಣ ಹೇಳಿ, ಹೆಚ್ಚು ಬಳಲುತ್ತಿದ್ದೇನೆ ಎಂದು ತಿಳಿಸಿ ಆಷಸ್ ಸರಣಿಗೆ ಇಂಗ್ಲೆಂಡ್ ಟೀಮ್ ನಿಂದ ಹೊರಗುಳಿದಿದ್ದರು. ಈಗ ಸೋಶೊಯಲ್ ಮೀಡಿಯಾದಲ್ಲಿ ತಮ್ಮ ಬೆತ್ತಲೆ ಫೋಟೊ ಒಂದನ್ನು ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ, ಪಡ್ಡೆ ಹುಡುಗರ ನಿದ್ರೆ ಕೆಡಿಸಿದ್ದಾರೆ.
ಅತಿಯಾದ ಆತಂಕದ ತೊಂದರೆಯಿಂದ ಬಳಲಿದ್ದ ಸಾರಾ ಟೇಲರ್ ಅವರ, ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ಸೀರಿಸ್ನಿಂದಲೂ ಹೊರಗುಳಿದಿದ್ದರು. ಆದರೆ, ಈಗ ಅವರು ಚೇತರಿಸಿಕೊಂಡಿದ್ದು, ಸರ್ರೇ ಸ್ಟಾರ್ಸ್ ತಂಡದ ಪರ ಆಡಲು ಆರಂಭಿಸಿದ್ದಾರೆ. ಸಾರಾ, ಆಗಸ್ಟ್ 14ರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೆತ್ತಲೆ ಫೋಟೋವನ್ನು ಹಾಕಿದ್ದಾರೆ. ವಿಕೆಟ್‌ಕೀಪಿಂಗ್ ಮಾಡುತ್ತಿರುವಂತೆ ಸ್ಟಂಪ್ಸ್ ಮೇಲಿನ ಬೇಲ್ಸ್ ಎಗರಿಸಿರುವ ಸಾರಾ ಸಂಪೂರ್ಣ ಬೆತ್ತಲಾಗಿ ನಿಂತಿದ್ದಾರೆ. ಇದು ತಮ್ಮ ಸಹನೆಗೆ ಮೀರಿದ್ದಾಗಿದ್ದರೂ ಕೂಡ ಒಂದು ಉದ್ದೇಶ ಸಲುವಾಗಿ ಈ ರೀತಿ ಮಾಡಿರುವುದಾಗಿ ಫೋಟೊ ಜೊತೆಗಿನ ಶೀರ್ಷಿಕೆಯಲ್ಲಿ ಅವರು ಗೀಚಿಕೊಂಡಿದ್ದಾರೆ.
, “ಬೆತ್ತಲಾಗಿ ಕಾಣಿಸಿಕೊಳ್ಳುವುದು ನನ್ನ ಸಹನೆಗೆ ಮೀರಿದ್ದು, ಎಂಬುದನ್ನು ನನ್ನನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿದೆ. ಆದರೆ, ಮಹಿಳೆಯರ ಸಮಸ್ಯೆಗಳ ಕುರಿತಾಗಿ ಜಾಗೃತಿ ಮೂಡಿದಲು ಇಂಥದ್ದೊಂದು ಅಭಿಯಾನಕ್ಕೆ ಆಹ್ವಾನಿಸಿದ @womenshealthukಗೆ ಧನ್ಯವಾದಗಳು. ಪ್ರತಿಯೊಬ್ಬ ಮಹಿಳೆಯೂ ಅದ್ಭುತ!, ಅಂತ ಹೇಳಿದ್ದಾರೆ ಸಾರಾ..!