ಗೂಗಲ್​​ನಲ್ಲಿ ಭಿಕಾರಿ ಅಂತ ಟೈಪ್ ಮಾಡಿ ಕಾಮಿಡಿ ನೋಡಿ..!

Date:

ಇದು ಅಂತರ್ಜಾಲ ಲೋಕ. ಈ ಲೋಕದ ಸದ್ಯದ ಸಾರಥಿ ಗೂಗಲ್ ಅಂದ್ರೆ ತಪ್ಪಾಗಲ್ಲ..! ಅತ್ಯಂದ ದೊಡ್ಡ ಜನಪ್ರಿಯ ಸರ್ಚ್​ ಇಂಜಿನ್​ ಈ ಗೂಗಲ್. ಈ ಗೂಗಲ್​ನಲ್ಲಿ ಜನ ಅರ್ಥಾತ್ ನೆಟ್ಟಿಗರು ಏನೇನೋ ಹುಡುಕಾಡುತ್ತಿರುತ್ತಾರೆ. ಗೂಗಲ್​ನಲ್ಲಿ ಆಸಕ್ತಿದಾಯಕ ವಿಚಾರಗಳು ಸಿಗುತ್ತವೆಯೇ ಅನ್ನೋ ಹುಡುಕಾಟ ಕೈಯಲ್ಲಿರೋ ಮೊಬೈಲ್​ನಲ್ಲಿ ಸದಾ ನಡೀತಾ ಇರುತ್ತೆ. ಈಗಂತೂ ಎಲ್ಲರ ಕೈಯಲ್ಲಿ ಮೊಬೈಲ್ ಇರುವುದರಿಂದ ಹುಡುಕಾಟ ತುಸು ಜಾಸ್ತಿಯೇ..!
ಹೀಗೆ ಹುಡುಕಾಡುವಾಗ ಪಾಪಿ ರಾಷ್ಟ್ರ ಪಾಕಿಸ್ತಾನದ ಬಗ್ಗೆ ಏನಾದರೂ ಕೆಟ್ಟದಾಗಿ ಬಂದರೆ ನೆಟ್ಟಿಗರು ಸುಮ್ನೆ ಇರ್ತಾರಾ.. ಸಖತ್ ಮಜಾ ತಗೊಂಡು ಟ್ರೋಲ್​ಗಳ ಮೇಲೆ ಟ್ರೋಲ್​ಗಳನ್ನು ಮಾಡ್ತಾರೆ. ಈಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್​ ಪೇಜ್​ಗಳಿಗೆ ಭರ್ಜರಿ ಆಹಾರ ಆಗಿ ಬಿಟ್ಟಿದ್ದಾರೆ.


ಗೂಗಲ್​ನಲ್ಲಿ ಇಂಗ್ಲಿಷ್​ ನಲ್ಲಿ ಭಿಕಾರಿ ಅಂತ ಟೈಪ್ ಮಾಡಿದರೆ ಇಮ್ರಾನ್​ ಖಾನ್​ ಅವರ ಭಿಕಾರಿ ಗೆಟಪ್​ನ ಫೋಟೋಗಳೇ ಬರುತ್ತಿವೆ..! ಭಿಕಾರಿ ಎಂದರೆ ಇಮ್ರಾನ್ ಖಾನ್ ಗೂಗಲ್ ಪೇಜ್​ಗಳ ತುಂಬ ತುಂಬಿಕೊಂಡಿದ್ದಾರೆ. ಅವರ ಚಿತ್ರಗಳೇ ಭಿಕಾರಿ ಕೆಟರಿಯಲ್ಲಿರುವುದು..! ಇದನ್ನು ಗಮನಿಸಿರುವ ನೆಟ್ಟಿಗರು ಭಿಕಾರಿ ಎಂದು ಸರ್ಚ್ ಮಾಡಿ. ಇಮ್ರಾನ್ ಫೋಟೋವನ್ನು ನೋಡಿ ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದರಿಂದ ಪಾಕಿಸ್ತಾನದ ಪ್ರಧಾನಿ ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ಪೀಸ್ ಆಗಿದ್ದಾರೆ.
ಆರ್ಥಿಕತೆಯಲ್ಲಿ ಪ್ರಗತಿ ಕಾಣುವ ನಿಟ್ಟಿನಲ್ಲಿ ಕೆಲಸ ಮಾಡುವ ಬದಲು ಬೇಡದ ಅನಾಚಾರಗಳನ್ನು ಮಾಡ್ಕೊಂಡು ಪಾಪದ ಕೆಲಸ ಮಾಡುತ್ತಿದೆ ಪಾಪಿಸ್ತಾನ. ಒಂದರ್ಥದಲ್ಲಿ ಪಾಕಿಸ್ತಾನ ಆರ್ಥಿಕ ದಿವಾಳಿಯಾಗಿದ್ದು, ಭಿಕಾರಿ ರಾಷ್ಟ್ರವೇ ಆಗಿದೆ. ಗೂಗಲ್​ಗೂ ಈ ವಿಷಯ ಗೊತ್ತಾಗಿದ್ದು, ಭಿಕಾರಿ ಎಂದರೆ ಆ ರಾಷ್ಟ್ರದ ಪ್ರಧಾನಿಯನ್ನು ತೋರಿಸುತ್ತದೆ.
ಇನ್ನು ಈ ಹಿಂದೆ ಈಡಿಯಟ್ ಎಂದು ಟೈಪ್ ಮಾಡಿದಾಗ ಅಮೆರಿಕಾ ಅಧ್ಯಕ್ಷ ಟ್ರಂಪ್ ಹೆಸರು ಬರುತ್ತಿತ್ತು. ಈಗಲೂ ಮೊದಲಿಗೆ ಅದೇ ಟ್ರಂಪ್ ಫೋಟೋ ಬರುತ್ತದೆ. ಆದರೆ, ಫಲಿತಾಂಶ ಸಂಖ್ಯಾವಾರು ಡೀಟೆಲ್ಸ್ ಕಡಿಮೆಯಷ್ಟೇ.

Share post:

Subscribe

spot_imgspot_img

Popular

More like this
Related

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ: ವಿಜಯೇಂದ್ರ

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ:...

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು ಎಷ್ಟಿದೆ ದರ?

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು...

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ ಬೆಂಗಳೂರು:...

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ!

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ! ನಿಂಬೆಹಣ್ಣು ಕೇವಲ ರಸಕ್ಕಾಗಿ...