ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರದ ಸಚಿವ ಸಂಪುಟ ರಚನೆಯಾಗಿದೆ. 17 ಮಂದಿ ಸಚಿವರು ಬಿಎಸ್ ವೈ ಸಂಪುಟ ಸೇರಿದ್ದಾರೆ. ಬಿಎಸ್ವೈ ಕ್ಯಾಬಿನೆಟ್ನಲ್ಲಿ ಯಾರಿಗೆ ಸಿಗುತ್ತೆ ಮಂತ್ರಿಗಿರಿ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು ಕೆಲವು ಅಚ್ಚರಿಗಳೊಂದಿಗೆ ಸಚಿವ ಸಂಪುಟ ರಚನೆಯಾಗಿದೆ. ಇನ್ನು ಖಾತೆ ಹಂಚಿಕೆಯ ಕುತೂಹಲ ಮಾತ್ರ ಬಾಕಿ ಉಳಿದಿರುವುದು. 17 ಮಂದಿ ನೂತನ ಸಚಿವರು ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರು ನೂತನ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಬಿಎಸ್ವೈ ಕ್ಯಾಬಿನೆಟ್ನ ಮಿನಿಸ್ಟರ್ಗಳ ಪಟ್ಟಿ ಈ ಕೆಳಕಂಡಂತಿದೆ
ಆರ್.ಅಶೋಕ್
ಜಗದೀಶ್ ಶೆಟ್ಟರ್
ವಿ. ಸೋಮಣ್ಣ
ಶ್ರೀರಾಮುಲು
ಬಸವರಾಜ್ ಬೊಮ್ಮಾಯಿ
ಚಂದ್ರಕಾಂತಗೌಡ ಪಾಟೀಲ್
ಪ್ರಭು ಚೌಹಾಣ್
ಕೋಟ ಶ್ರೀನಿವಾಸ್ ಪೂಜಾರಿ
ಶಶಿಕಲಾ ಜೊಲ್ಲೆ
ಮಾಧುಸ್ವಾಮಿ
ಅಶ್ವತ್ಥ್ ನಾರಾಯಣ್
ಸುರೇಶ್ ಕುಮಾರ್
ಈಶ್ವರಪ್ಪ
ಗೋವಿಂದ ಕಾರಜೋಳ
ಸಿ.ಟಿ.ರವಿ
ನಾಗೇಶ್
ಲಕ್ಷಣ್ ಸವದಿ
ಯಾರು ನಮ್ಮ ನೂತನ ಸಚಿವರು? ಬಿಎಸ್ವೈ ಸಂಪುಟದ 17 ಸಚಿವರು ಯಾರೆಲ್ಲಾ?
Date: