ಗಂಡ ತುಂಬಾ ಲವ್ & ಕೇರ್ ತೋರ್ತಾನೆ ಅಂತ ಡಿವೋರ್ಸ್ ಕೇಳಿದ ಪುಣ್ಯಾತ್ಗಿತ್ತಿ..!

Date:

ಗಂಡ ದಿನ ಕುಡ್ಕೊಂಡು ಬಂದು ಹೊಡೀತಾನೆ.. ತುಂಬಾ ಹಿಂಸೆ ಕೊಡ್ತಾನೆ ಅಂತಲೋ, ಗಂಡನ ದುಡಿಮೆ ಸಂಸಾರಕ್ಕೆ ಸಾಕಾಗ್ತಿಲ್ಲ ಅಂತಾನೋ, ನಮ್ಮಿಬ್ರು ನಡುವೆ ಹೊಂದಾಣಿಕೆಯೇ ಬರ್ತಿಲ್ಲ ಅಂತಾನೋ ಅಥವಾ ಆತ ಬೇರೆಯವರೊಂದಿಗೆ ಅಕ್ರಮ ಸಂಬಂಧ ಇಟ್ಕೊಂಡಿದ್ದಾನೆ ಅಂತಲೋ ಮಹಿಳೆಯರು ವಿಚ್ಚೇದನ ಬಯಸುವುದು ಕಾಮನ್..! ಇನ್ನೂ ಅಮ್ಮಮ್ಮ ಅಂದ್ರೆ ತನ್ನ ಗಂಡನಿಗೆ ಪುರುಷತ್ವ ಇಲ್ಲ.. ಆತನಿಂದ ಲೈಂಗಿಕ ಸುಖ ಸಿಕ್ತಲ್ಲ ಅಂತ ಕೂಡ ಡಿವೋರ್ಸ್ ಪಡೆಯುವುದು ಸಹಜ..! ಆದರೆ, ಇಲ್ಲೊಬ್ಬಳು ಪುಣ್ಯಾತ್ಗಿತ್ತಿ ತನ್ನ ಗಂಡ ತುಂಬಾ ಪ್ರೀತಿಸ್ತಾನೆ.. ತುಂಬಾ ಅಂದ್ರೆ ತುಂಬಾ ಕಾಳಜಿ ತೋರ್ತಾನೆ ಎಂದೋ ವಿಚ್ಚೇದನ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾಳೆ..!


ಇದೇನ್ ನಿಜನಾ..? ಆಕೆಗೇನಾಗಿದೆ ಎಂದು ನಾವು-ನೀವು ನಮ್ ನಮ್ಮಲ್ಲಿ ಪ್ರಶ್ನೆ ಕೇಳಿಕೊಳ್ಳಬೇಕಷ್ಟೇ..! ಇದು ವಿಚಿತ್ರ ಸತ್ಯ.. ತನ್ನ ಗಂಡನ ಜೊತೆ ಸುಖವಾಗಿ ಸಂಸಾರ ನಡೆಸುತ್ತಿದ್ದೀನಿ, ಯಾವ್ದೇ ತೊಂದರೆ ಇಲ್ಲ ಎಂದು ಮಹಿಳೆ ವಿಚ್ಚೇದನ ಪಡೆಯಲು ಮುಂದಾಗಿದ್ದಾಳೆ..! ಇದು ನಡೆದಿರುವುದು ದುಬೈನಲ್ಲಿ.
ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿಯ ಕಥೆ ಇದು. ಗಂಡ ಅತಿಯಾಗಿ ಪ್ರೀತಿ ಮಾಡುತ್ತಾನೆ. ತುಂಬಾ ಕಾಳಜಿ ತೋರುತ್ತಾನೆ. ಅದನ್ನು ನಾನು ಸಹಿಸಿಕೊಳ್ಳಲಾರೆ. ನನಗದು ಸಾಧ್ಯವಾಗುತ್ತಿಲ್ಲ ವಿಚ್ಚೇದನ ಕೊಡಿ ಎಂದು ಮಹಿಳೆ ಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಧೀಶರು ಅಚ್ಚರಿಗೊಂಡು ಅಲ್ಲಮ್ಮಾ.. ಬೇರೆ ಏನಾದರೂ ಕಾರಣ ಇದೆಯಾ? ಸರಿಯಾಗಿ ಹೇಳಮ್ಮ..ಎಂದು ಕೇಳಿದ್ರೆ..ಇಲ್ಲ, ಇಷ್ಟೇ ಕಾರಣ..ನನ್ನ ಗಂಡ ನನ್ನ ಜೊತೆ ಒಂದೇ ಒಂದು ದಿನ ಜಗಳ ಆಡಿಲ್ಲ. ನನ್ನ ವಿರುದ್ಧ ಮಾತಾಡಲ್ಲ.. ಆಗಾಗ ಗಿಫ್ಟ್ ತಂದುಕೊಡ್ತಾರೆ. ಅವರ ಜೊತೆ ಜಗಳ ಮಾಡಲು ಅವಕಾಶವೇ ಸಿಗಲ್ಲ..ನಂಗೆ ನನ್ನ ಲೈಫ್​ನಲ್ಲಿ ವಿವಾದ ಇಲ್ಲದೇ ಇರುವುದು ಇಷ್ಟವಿಲ್ಲ. ಅವರು ಮನೆ ಕೆಲಸ ಅಡುಗೆ ಕೆಲಸದಲ್ಲೂ ಸಹಾಯ ಮಾಡ್ತಾರೆ. ಆದ್ದರಿಂದ ಆ ವಿಷಯದಲ್ಲೂ ಜಗಳ ಆಡಲು ಆಗಲ್ಲ ಅಂತ ಮಹಿಳೆ ಡಿವೋರ್ಸ್​ಗೆ ಅಪ್ಲೇ ಮಾಡಿದ್ದಾರೆ..!
ಈ ಬಗ್ಗೆ ಪತಿರಾಯ ನಾನು ಉತ್ತಮ ಗಂಡನಾಗಲು ಪ್ರಯತ್ನಿಸಿದೆನಷ್ಟೇ.. ಡಿವೋರ್ಸ್ ಅರ್ಜಿ ವಾಪಸ್ ಪಡಿ ಎಂದು ಹೆಂಡ್ತಿಗೆ ರಿಕ್ವೆಸ್ಟ್ ಮಾಡಿದ್ದಾನೆ. ಸದ್ಯ ಈ ನ್ಯೂಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....