ಟೀಮ್ ಇಂಡಿಯಾದ ಸ್ಟಾರ್ ಬೌಲರ್ಗಳಲ್ಲೊಬ್ಬರು ಆರ್. ಅಶ್ವಿನ್. ಆದರೆ ಇತ್ತೀಚೆಗೆ ಲಯ ಕಳೆದುಕೊಂಡು ಬಿಟ್ಟಿದ್ದಾರೆ ಈ ಸ್ಪಿನ್ ಮಾಂತ್ರಿಕ..! ವಿಶ್ವಕಪ್ ಗೂ ಅಶ್ವಿನ್ ಅವರನ್ನು ಪರಿಗಣಿಸಿರಲಿಲ್ಲ. ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟಿ20 ಮತ್ತು ಏಕದಿನದಿಂದ ಅಶ್ವಿನ್ ಅವರನ್ನು ಹೊರಗಿಡಲಾಗಿತ್ತು. ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ 11ರ ಬಳಗದಲ್ಲಿ ಅಶ್ವಿನ್ಗಿಲ್ಲ ಸ್ಥಾನ..! ಎರಡನೇ ಟೆಸ್ಟ್ನಲ್ಲೂ ಚಾನ್ಸ್ ಸಿಗುವುದು ಕಷ್ಟ..! ಬಹುಶಃ ವೆಸ್ಟ್ ಇಂಡೀಸ್ ಪ್ರವಾಸವೇ ಅಶ್ವಿನ್ಗೆ ಕೊನೆಯಾದಾದರೂ ಆಗಬಹುದು..!
ಈ ನಡುವೆ ಐಪಿಎಲ್ನಲ್ಲೂ ಅಶ್ವಿನ್ಗೆ ಸಂಕಷ್ಟ ಎದುರಾಗಿದೆ. 2017ರಲ್ಲಿ 7.8 ಕೋಟಿ ರೂಪಾಯಿ ನೀಡಿ ಅಶ್ವಿನ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿಸಿತ್ತು. ನಾಯಕತ್ವದ ಜವಾಬ್ದಾರಿಯನ್ನ ಕೂಡ ಅದು ವಹಿಸಿತ್ತು. ಎರಡೂ ಆವೃತ್ತಿಯಲ್ಲೂ ಕಿಂಗ್ಸ್ ಇಲೆವೆನ್ ತಂಡ ಪ್ಲೇ-ಆಫ್ ಪ್ರವೇಶ ಪಡೆಯಲಿಲ್ಲ. ಕ್ರಮವಾಗಿ ಆರು ಮತ್ತು ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬೌಲಿಂಗ್ ನಲ್ಲಿ ಮೋಡಿ ಮಾಡದ ಅಶ್ವಿನ್ 28 ಪಂದ್ಯಗಳಿಂದ 25 ವಿಕೆಟ್ ಕಬಳಿಸಿದ್ದರಷ್ಟೇ. ಇದರ ಪರಿಣಾಮ ನಾಯಕತ್ವದಿಂದ ಅಶ್ವಿನ್ ಅವರನ್ನ ಕೆಳಗಿಳಿಸಲು ಕಿಂಗ್ಸ್ ತಂಡ ಮುಂದಾಗಿದೆ ಎಂದು ತಿಳಿದುಬಂದಿದೆ. ಅಶ್ವಿನ್ ಬದಲು ಕನ್ನಡಿಗ ಕೆ.ಎಲ್ ರಾಹುಲ್ಗೆ ನಾಯಕನ ಪಟ್ಟ ಕಟ್ಟುವ ಸಾಧ್ಯತೆ ಇದೆ.
ಅಶ್ವಿನ್ ಅವರನ್ನು ತಂಡದಿಂದಲೇ ಪಂಜಾಬ್ ಹೊರ ಕಳುಹಿಸಿದರೆ ದೆಹಲಿ ಮತ್ತು ರಾಜಸ್ಥಾನ ರಾಯಲ್ಸ್ ತಂಡ ಅವರನ್ನು ಖರೀದಿಸಲು ರೆಡಿಯಾಗಿವೆ ಎಂಬ ಮಾತಿದೆ. ಆದರೆ. ಡೆಲ್ಲಿ ತಂಡ ಯುವ ಆಟಗಾರ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆರ್ಆರ್ಗೆ ಸ್ಮಿತ್ ಮತ್ತು ರಹಾನೆ ಬಲವಿದೆ.. ಆದ್ದರಿಂದ ಅಶ್ವಿನ್ಗೆ ನಾಯಕ ಪಟ್ಟ ಹೊಸ ತಂಡದಲ್ಲೂ ಸಾಧ್ಯವಿಲ್ಲ.. ಆಟಗಾರ ಆಗಿ ಆಡಬೇಕಷ್ಟೇ..! ಈ ಸಲ ಆಟದಲ್ಲೂ ಫೇಲ್ಯೂರ್ ಆದರೆ ಮುಂದಿನ ಐಪಿಎಲ್ಗೆ ಕಷ್ಟ.. ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡ್ತಿರುವ ಅಶ್ವಿನ್ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೂ ಮೊದಲೇ ರಾಜೀನಾಮೆ ಕೊಟ್ಟರೂ ಅಚ್ಚರಿಯಿಲ್ಲ.
ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಬಗ್ಗೆ ಮಾತುಗಳು ಕೇಳಿಬಂದಿದ್ದವು. ವೆಸ್ಟ್ ಇಂಡೀಸ್ ಟೂರ್ ಗೆ ಹೋಗದ ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ವಾಪಸ್ ಬಂದಿದ್ದಾರೆ..! ಧೋನಿ ಮುಂದಿನ ಪ್ರವಾಸಕ್ಕೆ ಟೀಮ್ ಇಂಡಿಯಾ ಸೇರುವ ಸಾಧ್ಯತೆ ಇದ್ದೇ ಇದೆ.. ಆದರೆ ಅಶ್ವಿನ್ ಕಥೆ..?