ಟೀಮ್ ಇಂಡಿಯಾದಲ್ಲಿ ಏಕದಿನ ಮತ್ತು ಟಿ20 ತಂಡದಿಂದ ಈಗಾಗಲೇ ಹೊರಗುಳಿದಿರುವ ಮುರಳಿ ವಿಜಯ್ ಅವರಿಗೆ ಇಂಗ್ಲೆಂಡ್ ತಂಡದಿಂದ ಕರೆಯೋಲೆ ಬಂದಿದೆ..! ಅರೆ ವಿಜಯ್ ಟೀಮ್ ಇಂಡಿಯಾ ಬಿಟ್ಟು ಇಂಗ್ಲೆಂಡ್ ತಂಡದ ಪರ ಬ್ಯಾಟ್ ಬೀಸಲು ಹೊರಟರಾ.. ಇಂಗ್ಲೆಂಡ್ ಅಲ್ಲಿನ ಯುವ ಆಟಗಾರರಿಗೆ ಮಣೆ ಹಾಕುವ ಬದಲು ವಿಜಯ್ ಅವರನ್ನು ಬರ ಮಾಡಿಕೊಳ್ಳುತ್ತಿರುವುದಾದರೂ ಯಾಕೆ ಎಂದು ಯೋಚನೆ ಮಾಡುತ್ತಿದ್ದೀರಾ..?
ಮುರಳಿ ವಿಜಯ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ತಂಡಕ್ಕೂ ಪರಿಗಣಿಸಲ್ಪಟ್ಟಿಲ್ಲ. ಮಯಾಂಕ್ ಅಗರ್ ವಾಲ್, ಕೆ.ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಖಾಯಂ ಸ್ಥಾನ ಪಡೆದಿದ್ದ ಮುರಳಿ ಪರಿಗಣಿಸಲ್ಪಟ್ಟಿಲ್ಲ. ತವರಲ್ಲೇ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಲು,ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ ಕಮ್ ಬ್ಯಾಕ್ ಆಗಲು ಮುರಳಿ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಸ್ಪೆಕ್ ಸೇವರ್ಸ್ ಕೌಂಟಿ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಸಮರ್ ಸೆಟ್ ತಂಡದ ಪರ ಭಾರತದ ಮುರಳಿ ವಿಜಯ್ ಕಣಕ್ಕಿಳಿಯಲಿದ್ದಾರೆ. ಕೊನೆಯ ಮೂರು ಪಂದ್ಯಗಳಲ್ಲಿ ಸಮರ್ ಸೆಟ್ ಪರ ಓಪನರ್ ಆಗಿ ಬ್ಯಾಟ್ ಬೀಸಲಿದ್ದಾರೆ.
ಸಮರ್ ಸೆಟ್ ತಂಡದಲ್ಲಿ ಆಡುತ್ತಿದ್ದ ಪಾಕಿಸ್ತಾನದ ಅಜರ್ ಅಲಿ ತಂಡದಿಂದ ಹೊರಗುಳಿದಿದ್ದಾರೆ. ಪಾಕಿಸ್ತಾನ ತಂಡದಿಂದ ಅಜರ್ ಗೆ ಬುಲಾವ್ ಬಂದಿದ್ದು, ಆ ಜಾಗಕ್ಕೆ ಮುರಳಿ ವಿಜಯ್ ಆಯ್ಕೆಯಾಗಿದ್ದಾರೆಂದು ಸಮರ್ ಸೆಟ್ ಕ್ರಿಕೆಟ್ ಕ್ಲಬ್ ಅಧಿಕೃತವಾಗಿ ಹೇಳಿದೆ.

35 ವರ್ಷದ ಮುರಳಿ ವಿಜಯ್ ಭಾರತದ ಪರ 61 ಟೆಸ್ಟ್ ಆಡಿದ್ದು. 38.28 ಸರಾಸರಿಯಲ್ಲಿ ಒಟ್ಟು 3982 ರನ್ ಮಾಡಿದ್ದಾರೆ.. ವೈಯಕ್ತಿಕವಾಗಿ ವಿಜಯ್ ಅವರ ಗರಿಷ್ಠ ಸ್ಕೋರ್ 167. ಲೀಸ್ಟ್ ಎ ಕ್ರಿಕೆಟ್ ನಲ್ಲಿ 131 ಟೆಸ್ಟ್ ಪಂದ್ಯಗಳನ್ನ ಆಡಿರುವ ವಿಜಯ್ 42.79ರ ಸರಾಸರಿಯಲ್ಲಿ 9116ರನ್ ಬಾರಿಸಿದ್ದಾರೆ. 266 ವೈಯಕ್ತಿಕವಾಗಿ ಗರಿಷ್ಠ ಸ್ಕೋರ್.
ವೆಸ್ಟ್ ಇಂಡೀಸ್ ವಿರುದ್ಧದ ಟೂರ್ ಗೆ ಆಯ್ಕೆಯಾಗದ ವಿಜಯ್ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಆಯ್ಕೆಯಾಗದೇ ಇದ್ದಲ್ಲಿ ಶಾಶ್ವತವಾಗಿ ತಂಡದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ.