ಪಾಕಿಸ್ತಾನ ದೇಶದ ಪ್ರಸ್ತುತ ಕ್ರಿಕೆಟ್ ಟೀಮ್ ಎಂದರೆ ಟ್ರೋಲ್ ಕಂಟೆಂಟ್ ಆಗಿಬಿಟ್ಟಿದೆ. ಹೌದು ವಿಶ್ವದಾದ್ಯಂತ ಇರುವ ಕ್ರೀಡಾಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ತಮಗಿಷ್ಟ ಬಂದಂತೆ ಟ್ರೋಲ್ ಮಾಡುತ್ತಿದ್ದಾರೆ ಅದಕ್ಕೆ ಕಾರಣ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು. ಕಳೆದ ಬಾರಿಯ ವಿಶ್ವಕಪ್ನಲ್ಲಿ ಪಾಕಿಸ್ತಾನ ತೀರಾ ಕೆಳಮಟ್ಟದ ಪ್ರದರ್ಶನವನ್ನು ತೋರಿತ್ತು. ಅದರಲ್ಲಿಯೂ ಭಾರತದ ವಿರುದ್ಧದ ಪಂದ್ಯದಲ್ಲಿ ನಾಯಕ ಸರ್ಫರಾಜ್ ಅವರು ಆಕಸುತ್ತಿರುವ ಫೋಟೊ ತುಂಬಾ ವೈರಲ್ ಮತ್ತು ಟ್ರೋಲ್ ಆಗಿತ್ತು.
ಇನ್ನು ಈ ಪಂದ್ಯದಲ್ಲಿ ತುಂಬಾ ಕಳಪೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನದ ಆಟಗಾರರು ಸರಿಯಾದ ಫಿಟ್ನೆಸ್ ಇಲ್ಲದೆ ಫೀಲ್ಡ್ ಗೆ ಇಳಿದಿದ್ದರು ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಆಟಗಾರರು ಪಾರ್ಟಿ ಮಾಡಿದ್ದರಿಂದ ಅತಿಯಾದ ಆಹಾರ ಸೇವನೆ ಯಿಂದಾಗಿ ಈ ಇಷ್ಟೆಲ್ಲಾ ನಡೆದಿದೆ ಎಂದು ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಪಾಕಿಸ್ತಾನದ ಕೋಚ್ ಮಿಸ್ಬಾ ಉಲ್ ಹೊಸ ಆದೇಶವನ್ನು ಹೊರಡಿಸಿದ್ದು ಎರಡು ವಾರ ಯಾರೂ ಸಹ ಚಿಕನ್ ಬಿರಿಯಾನಿ ತಿನ್ನುವಂತಿಲ್ಲ ಎಂದು ಆಟಗಾರರಿಗೆ ತಾಕೀತು ಮಾಡಿದ್ದಾರೆ ಮತ್ತು ಫಿಟ್ನೆಸ್ ಪರೀಕ್ಷೆ ವೇಳೆ ಯಾರಾದರೂ ಸಿಕ್ಕಿಬಿದ್ದರೆ ಅಂಥವರನ್ನು ತಂಡದಿಂದ ಕೈಬಿಡಲಾಗುವುದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.