ಮರ ಸುತ್ತಿದ್ರೆ ಪುಣ್ಯ ಪ್ರಾಪ್ತಿ ಅಂತಾರೆ… ಈ ಮರ ಮುಟ್ಟಿದ್ರೆ ಮೃತ್ಯು ಪ್ರಾಪ್ತಿ.!

Date:

ಈ ಮರವನ್ನು ನೋಡಲಿಕ್ಕೇನೋ ಅತ್ಯಂತ ಆಕರ್ಷಕವಾಗಿ ಹಿತಕಾರಿಯಾಗೇ ಇದೆ. ಆದರೆ ಇದು ಅಂತಿಥ ಮರವಲ್ಲ. ಮರದ ಸೌಂದರ್ಯಕ್ಕೆ ಮಾರುಹೋಗಿ ಮರವನ್ನ ಮುಟ್ಟಲು ಹೋದರೆ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತೆ. ಹೌದು ಇದು ವಿಶ್ವದ ಅತ್ಯಂತ ಅಪಾಯಕಾರಿ ಮರ. ಮಾರಣಾಂತಿಕ ವಿಷಕಾರಿ ಆಗಿರುವ ಈ ಮರದ ಹೆಸರು ಮ್ಯಾಂಚಿನೀಲ್‌. ಈ ಮರವನ್ನು ಕ್ಯಾರಿಬಿಯನ್‌ ದೇಶದಲ್ಲಿ, ಫ್ಲೋರಿಡಾ, ಬಹಾಮಾಸ್‌, ಮೆಕ್ಸಿಕೋ ಮತ್ತು ಮಧ್ಯ ಹಾಗೂ ದಕ್ಷಿಣ ಅಮೆರಿಕದಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.

ಈ ಮರ ಸಾಮಾನ್ಯವಾಗಿ ಸಮುದ್ರ ತೀರದಲ್ಲಿ , ಹಿನ್ನೀರ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಇದು ನೋಡಲು ಆ್ಯಪಲ್‌ ಮರದಂತೆ ಇದೆ. ಆ್ಯಪಲ್‌ ಗಾತ್ರದ ಫ‌ಲವನ್ನೂ ಈ ಮರ ನೀಡುತ್ತದೆ. ಆದರೆ ಗ್ರೀನ್ ಆಪಲ್ ತರ ಇದೆ ಅಂತ ಇದನ್ನು ತಿಂದರೆ ಜೀವವೇ ಹೋಗಿಬಿಡುತ್ತೆ. ಹಾಗಾಗೇ ಈ ಹಣ್ಣನ್ನ ಸ್ಥಳೀಯರು “ಲಿಟಲ್ ಆ್ಯಪಲ್‌ ಆಫ್ ಡೆತ್‌’ ಕರೆಯುತ್ತಾರೆ.

ವಿಚಿತ್ರವೆಂದರೆ ಮಳೆಗಾಲದಲ್ಲಿ ಈ ಮರದ ಎಲೆಗಳಿಂದ ತೊಟ್ಟಿಕ್ಕುವ ನೀರು ಮರದ ಕೆಳಗೆ ನಿಂತವರ ದೇಹದ ಚರ್ಮವನ್ನು ಸುಟ್ಟು ಬಿಡುತ್ತದೆ. ಈ ಮರದ ಎಲೆಗಳು ವಿಷಕಾರಿ ದ್ರವವನ್ನು ಸ್ರವಿಸುವುದೇ ಇದಕ್ಕೆ ಕಾರಣ. ವಿಜ್ಞಾನಿಗಳ ಪ್ರಕಾರ ಈ ಮರದ ವೃಕ್ಷದಲ್ಲಿ ಹಲವು ಬಗೆಯ ವಿಷಕಾರಿ ಅಂಶಗಳಿರುವುದು ಕಂಡು ಬಂದಿದೆ. ಅಂದ ಹಾಗೆ ಈ ಮಾರಣಾಂತಿಕ ಮರ ಈಗಾಗಲೇ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್‌ ಸೇರಿಕೊಂಡಿದೆ.

Share post:

Subscribe

spot_imgspot_img

Popular

More like this
Related

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ....

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ. ಶಿವಕುಮಾರ್ ಮರುಪ್ರಶ್ನೆ

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ....

ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ

ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ ಪ್ರತಿದಿನ ಬೆಳಗ್ಗೆ ಸೂರ್ಯೋದಯದ...

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...