ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿದ್ದಾರೆ. ‘ವಾಲ್’ ಆಟಕ್ಕೆ ದಕ್ಷಿಣ ಆಫ್ರಿಕಾ ಆಟಗಾರರು ಬಳಲಿ ಬೆಂಡಾಗಿದ್ದಾರೆ. ವಿಶಾಕಪಟ್ಟಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿದ್ದಾರೆ.
ಮೊದಲ ದಿನವಾದ ನಿನ್ನೆ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ ವಾಲ್ ವಿಕೆಟ್ ನಷ್ಟವಿಲ್ಲದೆ 202ರನ್ ಗಳ ಜೊತೆಯಾಟ ಆಡಿದ್ದರು. ಇಡೀ ದಿನ ಒಂದೇ ಒಂದು ವಿಕೆಟ್ ತೆಗೆಯಲು ಆಗದೆ ಹರಿಣಗಳು ಪರದಾಡಿದ್ದರು. ಇಂದು ಸಹ ರೋಹಿತ್ ಶರ್ಮಾ ಮತ್ತು ಅಗರ್ ವಾಲ್ ತಮ್ಮ ಬ್ಯಾಟಿಂಗ್ ಮುಂದುವರೆಸಿದರು. ಈ ಜೋಡಿ 317ರನ್ ಜೊತೆಯಾಟವಾಡಿತು.
ರೋಹಿತ್ ಶರ್ಮಾ ಡಬಲ್ ಸೆಂಚುರಿ ಮಾಡುವ ನಿರೀಕ್ಷೆ ಇತ್ತು. ಆದರೆ ಅವರು 176ರನ್ಗೆ ಔಟಾದರು. ಚೇತೇಶ್ವರ್ ಪೂಜಾರ (6), ಕ್ಯಾಪ್ಟನ್ ಕೊಹ್ಲಿ (20) ಬೇಗ ಪೆವಿಲಿಯನ್ ಸೇರಿದರು. ಆದರೆ, ಕನ್ನಡಿಗ ಮಯಾಂಕ್ ಅಗರ್ ವಾಲ್ ಮಾತ್ರ ತಾಳ್ಮೆಯ ಆಟವಾಡಿ ದ್ವಿಶತಕ ಸಿಡಿಸಿದ್ದಾರೆ. ಅಗರ್ವಾಲ್ ಸಿಡಿಸಿದ ಮೊದಲ ಟೆಸ್ಟ್ ಶತಕ ಹಾಗೂ ದ್ವಿಶತಕವೂ ಇದಾಗಿದೆ. 371 ಎಸೆತಗಳಲ್ಲಿ 215ರನ್ ಮಾಡಿ ಔಟಾದರು.. ಇವರ ಇನ್ನಿಂಗ್ಸ್ನಲ್ಲಿ 23 ಬೌಂಡರಿ 6 ಸಿಕ್ಸರ್ಗಳು ಇತ್ತು