ಟೀಂ ಇಂಡಿಯಾ ಪ್ರದರ್ಶನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ವೀರೇಂದ್ರ ಸೆಹವಾಗ್, ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕೆಲ ಆಟಗಾರರ ಉಲ್ಲೇಖ ಮಾಡಿದ್ದರು. ಆದರೆ, ಇದರಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಹೆಸರನ್ನು ಸೇರಿಸಲು ಸೆಹ್ವಾಗ್ ಮರೆತುಬಿಟ್ಟಿದ್ದಾರೆ. ಮೈದಾನದಲ್ಲಿ ಬ್ಯಾಟಿಂಗ್,
ಬೌಲಿಂಗ್ ಹಾಗೂ ಫೀಲ್ಡಿಂಗ್ ಮಾಡುವಾಗ ಜಡೇಜಾರ ಪ್ರದರ್ಶನವನ್ನು ಸೆಹ್ವಾಗ್ ಗಮನಿಸಲಿಲ್ಲವೇ ಎಂಬ ಒಂದು ಟ್ವೀಟ್ ಅನ್ನು ಖುದ್ದು ಜಡೇಜಾ ರೀಟ್ವೀಟ್ ಮಾಡಿದ್ದಾರೆ. ಬಹುಶಃ ಸೆಹ್ವಾಗ್ ಆತನ ಹೆಸರನ್ನು ಮರೆತುಬಿಟ್ಟಿರಬಹುದು, ಸುಖಾಸುಮ್ಮನೇ ರೀಟ್ವೀಟ್ ಮಾಡುವ ಮೂಲಕ ವಿವಾದ