ನವಿಲುನ್ನ ನೋಡಿ ಕೆಂಬೂತ ರೆಕ್ಕೆ ಕಟ್ಕೊಂಡು ಕುಣಿತಂತೆ ಹಾಗಾಯ್ತು ನಮ್ ರೈನಾ ಕಥೆ.

Date:

ಮಾತು ಮನೆ ಕೆಡಸ್ತು ತೂತು ಒಲೆ ಕೆಡಸ್ತು ಅಂತಾರೆ… ಹಾಗೆ ನಾವ್ ಆಡೋ ಮಾತು ನಮ್ಮ ವ್ಯಕ್ತಿತ್ವ ತೋರಿಸುತ್ತೆ. ಅಂಥದ್ದೇ ಒಂದು ಮಾತು ದಿ ಗ್ರೇಟ್ ಕ್ರಿಕೆಟರ್ ಸುರೇಶ್ ರೈನಾ ಅಸಲಿತನವನ್ನ ಬಿಚ್ಚಿಟ್ಟಿದೆ. ಗುಜರಾತ್ ಲಯನ್ಸ್ ತಂಡ ಏರ್ಪಡಿಸಿದ್ದ ಪ್ರೆಸ್ಸ್ ಮೀಟ್ ನಲ್ಲಿ ಹೇಗೆ ಬೇಕೋ ಹಾಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಟಿ ಟ್ವೆಂಟಿ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾ ಸೋತಾಗ ಸುದ್ದಿಗೋಷ್ಠಿಯಲ್ಲಿ ವಿದೇಶಿ ಪರ್ತಕರ್ತ ಕೇಳಿದ ಪ್ರಶ್ನೆಗೆ ಧೋನಿ ತುಂಬಾ ಬುದ್ಧಿವಂತಿಕೆಯಿಂದ ಉತ್ತರ ಕೊಟ್ಟಿದ್ರು. ಪರ್ತಕರ್ತನ ಪ್ರಶ್ನೆಗೆ ಆತನಿಂದಲೇ ಉತ್ತರವನ್ನು ತೆಗೆಸಿದ್ರು. ಪರ್ತಕರ್ತರು, ಎಲ್ಲಾ ಮಾಧ್ಯಮಗಳು ಧೋನಿ ಬುದ್ಧಿವಂತಿಕೆಯನ್ನ ಹಾಡಿಹೊಗಳಿದ್ರು. ಧೋನಿಯ ತಾಳ್ಮೆ ಮತ್ತು ಸಮಯೋಚಿತ ಪ್ರತಿಕ್ರಿಯೆಗೆ ಪ್ರಶಂಸೆ ವ್ಯಕ್ತಪಡಿಸಿದ್ರು. ಮಾಹಿಯ ಪಕ್ಕಾ ದೋಸ್ತ್ ಆಗಿರುವ ರೈನಾ ಮಾಹಿಯನ್ನೇ ಕಾಪಿ ಮಾಡಲು ಹೋಗಿ ನಗೆ ಪಾಟಲಿಗೆ ಗುರಿಯಾಗಿದ್ದಾರೆ.
ಇಷ್ಟಕ್ಕೂ ಪರ್ತಕರ್ತ ಕೇಳಿದ ಪ್ರಶ್ನೆ ಇಷ್ಟೇ… ಟೀಂ ಇಂಡಿಯಾಗೆ ಯಾರು ಕೋಚ್ ಆದ್ರೆ ತಾವು ಕಂಫರ್ಟಬಲ್ ಆಗಿರ್ತೀರಿ ಆಂತ. ಅಂದ್ರೆ ವಿದೇಶಿ ಆಥವಾ ದೇಶಿ ಕೋಚ್ ಬಗ್ಗೆ, ಸುರೇಶ್ ರೈನಾ ಒಬ್ಬ ಜವಾಬ್ದಾರಿಯುತ ಆಟಗಾರನಾಗಿ ತನ್ನ ಅಭಿಪ್ರಾಯವನ್ನು ತಿಳಿಸಬೇಕಿತ್ತು ಆದ್ರೆ ರೈನಾ ಹಾಸ್ಯಾಸ್ಪದವಾಗಿ ಉತ್ತರ ನೀಡಿ ಬೇಜವಬ್ದಾರಿ ಪ್ರದರ್ಶಿಸಿರೋದಲ್ಲದೇ ತಮ್ಮ ವ್ಯಕ್ತಿತ್ವದ ಅಸಲಿಯತ್ತನ್ನ ಪರಿಚಯ ಮಾಡಿಸಿದ್ದಾರೆ.
ಹೌದು ಪರ್ತಕರ್ತರ ಪ್ರಶ್ನೆಗೆ ರೈನಾ, ನೀವು ನಿಮ್ಮ ಹೆಂಡತಿಯೊಡನೆ ಕಂಫರ್ಟೆಬಲ್ ಆಗಿರ್ತೀರೋ ಅಥವಾ ಬೇರೆಯವರ ಜೊತೆಗೋ ಅಂತ ಉತ್ತರಿಸಿ ವಿವಾದಕ್ಕೀಡಾಗಿದ್ದಾರೆ. ಕೂಲ್ ಕ್ಯಾಪ್ಟನ್ ಮಾಹಿಯನ್ನ ಕಾಪಿ ಮಾಡಲು ಹೋಗಿ ರೈನಾ ಪೇಚಿಗೆ ಸಿಲುಕಿದ್ದಾರೆ. ನವಿಲುನ್ನ ನೋಡಿ ಕೆಂಬೂತ ರೆಕ್ಕೆ ಕಟ್ಕೊಂಡು ಕುಣಿತಂತೆ ಹಾಗಾಯ್ತು ನಮ್ ರೈನಾ ಕಥೆ. ಧೋನಿಯ ತಾಳ್ಮೆ ವಿವೇಕ ಸಮಯಕ್ಕೆ ತಕ್ಕಂತ ಆಟ ಮತ್ತು ಬುದ್ಧಿವಂತಿಕೆ ಕಾಪಿ ಮಾಡುವಂತದ್ದಲ್ಲ . ಇತ್ತೀಚಿಗೆ ರನ್ ಗಳಿಸಲು ಮರೆತಂತಿರುವ ರೈನಾ ಯಾರೊಂದಿಗೆ ಹೇಗೆ ವರ್ತಿಸಬೇಕು, ಎಲ್ಲಿ ಹೇಗೆ ಮಾತನಾಡಬೇಕು ಅನ್ನೋದನ್ನು ಮರೆತಂತಿದ್ದಾರೆ.

  •  “ಶ್ರೀ”

POPULAR  STORIES :

9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ.! ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ..!

ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...