ಈ ಅದ್ಭುತ ಕಲಾವಿದೆಗೆ ಕೈಗಳೇ ಇಲ್ಲ!

Date:

ಅಲಹಾಬಾದ್ನ ಸರಿತಾ ದ್ವಿವೇದಿ ನಾಲ್ಕು ವರ್ಷದವರಿದ್ದಾಗಲೇ ಕೈಯನ್ನು ಕಳೆದುಕೊಂಡಿದ್ರು. 11 ಸಾವಿರ ವೋಲ್ಟೇಜ್ ವಿದ್ಯುತ್ ಹರಿಯುತ್ತಿದ್ದ ಹೈಟೆನ್ಷನ್ ವೈರ್ ತಗುಲಿದ್ರಿಂದ ಸರಿತಾ ಅವರು ತಮ್ಮೆರಡು ಕೈಗಳು ಹಾಗೂ ಬಲಗಾಲನ್ನೇ ಕಳೆದುಕೊಂಡಿದ್ರು. ಆದ್ರೆ ಅಂಗವೈಕಲ್ಯ ಅವರ ಆತ್ಮವಿಶ್ವಾಸಕ್ಕೆ ಅಡ್ಡಿಯಾಗಲೇ ಇಲ್ಲ. ಎಂಥವರ ಮನಸ್ಸನ್ನಾದ್ರೂ ಸೂರೆಗೊಳ್ಳುವ ಕಲಾಕೃತಿಗಳನ್ನು ರಚಿಸಿ ರಾಷ್ಟ್ರಪತಿಯಿಂದ ಹಿಡಿದು ಎಲ್ಲರಿಂದಲೂ ಶಭಾಷ್ ಗಿರಿ ಪಡೆದಿದ್ದಾರೆ.
ಸದ್ಯ 21 ವರ್ಷದ ಸರಿತಾ ದ್ವೀವೇದಿ ಅವರು ಕೇವಲ ಕಲಾವಿದೆ ಮಾತ್ರವಲ್ಲ, ಬಹುಮುಖಿ ಕೂಡ. ಹೊಲಿಗೆ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಣ್ಣಿನ ಮಾದರಿಗಳನ್ನು ತಯಾರಿಸುವುದರಲ್ಲಿ ಪರಿಣಿತರು. ಅಂಗವೈಕಲ್ಯಕ್ಕೆ ಸವಾಲೊಡ್ಡಿ ಅವರು ಸ್ವಾವಲಂಬಿಯಾಗಿದ್ದಾರೆ. ಇತರರಿಗೂ ತನ್ನ ಕಲಾನೈಪಣ್ಯತೆಯನ್ನು ಹೇಳಿಕೊಡುತ್ತಾರೆ. ಸರಿತಾ ಅಲಹಾಬಾದ್ನ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.
ಇನ್ನು ಸರಿತಾ ದ್ವೀವೇದಿ ಅವರು ಚಿಕ್ಕಂದಿನಿಂದಲೂ ಗ್ರೀಟಿಂಗ್ ಕಾರ್ಡ್ಗಳ ತಯಾರಿಕೆ, ರಂಗೋಲಿ ಸ್ಪರ್ಧೆಗಳಲ್ಲಿ ಸರಿತಾ ಭಾಗವಹಿಸುತ್ತಿದ್ರು. ಡ್ರಾಯಿಂಗ್ ಶಿಕ್ಷಕಿಯಾದ ಪಾಂಡೆ ಅವರು, ಸರಿತಾ ಅವರ ಪೇಂಟಿಂಗ್ಗಳನ್ನು ಮೆಚ್ಚಿಕೊಳ್ಳುತ್ತಿದ್ರು, ಸದಾ ಅವರನ್ನು ಪ್ರೋತ್ಸಾಹಿಸುತ್ತಿದ್ರು. ಅಲಹಾಬಾದ್ ವಿಶ್ವವಿದ್ಯಾನಿಲಯದ ಫೈನ್ ಆರ್ಟ್ಸ್ ಡಿಪಾರ್ಟ್ಮೆಂಟ್ನ ಮುಖ್ಯಸ್ಥರಾಗಿದ್ದ ಅಜಯ್ ಜೇಟ್ಲಿ ಸರಿತಾ ಅವರು ಬೆನ್ನಿಗೆ ನಿಂತವರು.


“ಬಾಲ ಶ್ರೀ ಪ್ರಶಸ್ತಿ ಒಲಿದು ಬಂದಾಗ, ನನ್ನಲ್ಲಿ ಕಲೆಯ ಬಗ್ಗೆ ಎಂತಹ ಆಸಕ್ತಿ ಇದೆ ಅನ್ನೋದು ಅರಿವಾಗಿತ್ತು. ಈ ಗೆಲುವು ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಪೇಂಟಿಂಗ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಆಗ ನಿರ್ಧರಿಸಿದ್ದೆ. ನನ್ನನ್ನು ಒಬ್ಬ ಪ್ರತಿಭಾವಂತ ಕಲಾವಿದೆಯಾಗಿ ಜನರು ಗುರುತಿಸಬೇಕೆಂದು ಬಯಸಿದ್ದೆ. ನನ್ನ ಅಂಗವೈಕಲ್ಯದಿಂದಾಗಿಯೇ ಜನರು ನನ್ನನ್ನು ನೆನಪಿನಲ್ಲಿಟ್ಟುಕೊಳ್ಳುವಂತಾಗಬಾರದು. ಏಕೆಂದರೆ ತಮ್ಮ ನಿತ್ಯ ಜೀವನದಲ್ಲಿ ಅದರಿಂದ ಯಾವುದೇ ಅಡ್ಡಿಯಾಗಿಲ್ಲ” ಅನ್ನೋದು ಕಲಾವಿದೆ ಸರಿತಾ ದ್ವಿವೇದಿಯ ಅವರ ಮನದಾಳದ ಮಾತು.
ಹೆತ್ತವರಾಗಿ ತಾವು ಮಗಳು ಸರಿತಾ ದ್ವಿವೇದಿಯ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದೆವು, ಅವಳ ಮುಂದೆ ಬೆಟ್ಟದಂತಹ ಸವಾಲಿತ್ತು. ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರ ಕೂಡ ಇನ್ನೂ ನೆಲೆ ಕಂಡುಕೊಂಡಿರಲಿಲ್ಲ. ಆದ್ರೀಗ ಮಗಳ ಸಾಧನೆ ನೋಡಿ ಹೆಮ್ಮೆ ಉಂಟಾಗುತ್ತದೆ. ಹತ್ತಾರು ಪ್ರಶಸ್ತಿಗಳು ಅವಳನ್ನು ಅರಸಿ ಬಂದಿವೆ. ಸರಿತಾಳ ಚಿತ್ರಕಲೆಗಳಿಗೆ ಪ್ರಾಯೋಜಕರಾಗಲು ಯಾರಾದರೂ ಮುಂದೆ ಬಂದರೆ, ಅವಳ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ಭರಿಸಿದ್ರೆ ತಮಗೆ ನಿಜಕ್ಕೂ ಸಂತೋಷವಾಗುತ್ತದೆ” ಎನ್ನುತ್ತಾರೆ ಸರಿತಾ ಅವರ ತಾಯಿ ವಿಮ್ಲಾದೇವಿ.

ಸರಿತಾ ಅವರ ಕಲಾನೈಪಣ್ಯತೆಗೆ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಸ್ವೀಕರಿಸಿರುವ ಹೆಗ್ಗಳಿಕೆ ಹೊಂದಿದ್ದಾರೆ. ಅಂಗವಿಕಲತೆ ಇದ್ರೆ ಏನನ್ನೋ ಮಾಡಲು ಸಾಧ್ಯವಿಲ್ಲ ಅನ್ನೋದು ಸುಳ್ಳು. ಅಂಗವೈಕಲ್ಯ ಕೇವಲ ಮನಸ್ಸಿನ ಭ್ರಮೆ ಅಷ್ಟೆ” ಎನ್ನುತ್ತಾರೆ ಸರಿತಾ. ಕೈಗಳಿಲ್ಲದಿದ್ರೇನಂತೆ, ಹಲ್ಲುಗಳ ನಡುವೆ, ಕಾಲ್ಬೆರಳ ನಡುವೆ ಕುಂಚವನ್ನಿಟ್ಟುಕೊಂಡು ಅತ್ಯದ್ಭುತ ಚಿತ್ರಗಳನ್ನು ಸರಿತಾ ಬಿಡಿಸಿದ್ದಾರೆ. ಸರಿತಾ ಅವರ ಕಲಾ ಪ್ರೇಮ ಮತ್ತು ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗುವಂತಹದ್ದು.

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...