ಈ ಹಾಟ್​ ಬ್ಯೂಟಿಯೇ ಹಾರ್ದಿಕ್ ಹಾರ್ಟ್​ಬೀಟ್!

Date:

ಟೀಮ್ ಇಂಡಿಯಾದ ಸ್ಟಾರ್ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಹೆಸರು ಸದಾ ಒಬ್ಬರಲ್ಲ ಒಬ್ಬರು ಚೆಲುವೆಯರ ಜೊತೆ ತಳುಕು ಹಾಕಿಕೊಳ್ಳುತ್ತಿರುತ್ತದೆ. ಮಾಡಲಿಂಗ್, ಸಿನಿ ಕ್ಷೇತ್ರದ ಸುಂದರಿಯರ ಜೊತೆ ಕ್ರಿಕೆಟ್ ಆಟಗಾರರ ಹೆಸರು ಬರುವುದು ಸಾಮನ್ಯವಾಗಿಬಿಟ್ಟಿದೆ. ಕ್ರಿಕೆಟ್ ಗೂ ಸಿನಿಮಾಕ್ಕೂ ಅದೆಂಥಾ ಅವಿನಾಭಾವ ನಂಟಿದೆಯೋ.. ಹಾಗೆಯೇ ಜನಪ್ರಿಯ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ! ಎಲಿ ಅವ್​ ರಾಮ್, ಇಶಾ ಗುಪ್ತಾ ಮತ್ತು ಊರ್ವಶಿ ರೌಟೆಲಾ ಸೇರಿದಂತೆ ಕೆಲವು ಹೆಸರುಗಳು ಪಾಂಡ್ಯ ಜೊತೆ ಕೇಳಿಬಂದಿದ್ದವು. ಮದುವೆ ಆಗುತ್ತಾರೆ ಎಂಬ ಸುದ್ದಿಗಳು ಬಂದಿದ್ದವು. ಆದರೆ, ಹಾರ್ದಿಕ್ ಪಾಂಡ್ಯ ಮದುವೆ ಆಗಲಿರುವ ಹುಡುಗಿ ಇವರಾರು ಅಲ್ಲ. ಅವರು ಸರ್ಬಿಯಾ ಮೂಲದ ನಟಿ.


ಹೌದು ಹಾರ್ದಿಕ್ ಪಾಂಡ್ಯ ಸರ್ಬಿಯಾ ಮೂಲದ ನಟಿ, ಮಾಡೆಲ್, ಡ್ಯಾನ್ಸರ್ ನತಾಶಾ ಅವರನ್ನು ವಿವಾಹವಾಗಲಿದ್ದಾರಂತೆ. ಬಾದ್​ ಶಾನ ಡಿಜೆ ವಾಲೇ ಬಾಬು ಎಂಬ ಹಾಡಿನ ಮೂಲಕ ಸಾಕಷ್ಟು ಜನಪ್ರಿಯತೆಗಳಿಸಿಕೊಂಡಿರುವ ನತಾಶ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಬಾಲಿವುಡ್ ನ ಸತ್ಯಾಗ್ರಹ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟಿದ್ದ ನತಾಶ, ಹಿಂದಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯೂ ಆಗಿದ್ದರು.

ಹಾರ್ದಿಕ್ ಪಾಂಡ್ಯ ನತಾಶಾ ಅವರನ್ನು ತನ್ನ ಸಂಬಂಧಿಕರಿಗೆ, ತಂದೆ-ತಾಯಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ನತಾಶ ಹಾರ್ದಿಕ್ ಕುಟುಂಬಸ್ಥರಿಗೂ ಇಷ್ಟವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನತಾಶಾರನ್ನೇ ಹಾರ್ದಿಕ್ ಪಾಂಡ್ಯ ಮದುವೆ ಆಗಲಿದ್ದಾರಂತೆ. ಯಾವುದಕ್ಕೂ ಅವರೇ ಎಲ್ಲಾ ವಿಷಯವನ್ನು ಬಹಿರಂಗಪಡಿಸಬೇಕಾಗಿದೆ.

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...