ಮೂವತ್ತೇ ಮೂವತ್ತು ನಿಮಿಷದಲ್ಲಿ ಬ್ಲಡ್ ರಿಪೋರ್ಟ್ ಸಿಗುತ್ತೆ!

Date:

ಕೇವಲ ಮೂವತ್ತು ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್ ಪಡೆಯಬಹುದಾ ಎಂದು ನೀವು ಅಚ್ಚರಿ ವ್ಯಕ್ತಪಡಿಸಬಹುದು. ಆದರೆ ಅದನ್ನು ಸತ್ಯ ಮಾಡಿರುವವರು ಬೆಂಗಳೂರಿನ ಡಾಕ್ಟರ್ ಧನಂಜಯ್ ಅವರು.
ಡಾ. ಧನಂಜಯ್ ಅವರು ಅಮೇರಿಕಾದ ಎಂಐಟಿ, ಮದ್ರಾಸಿನ ಐಐಟಿಗಳಂತಹ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು. ಅಷ್ಟೇ ಅಲ್ಲದೆ ಅಮೇರಿಕಾದಲ್ಲಿ ಪಿಎಚ್ಡಿ ಪದವಿಯನ್ನು ಪಡೆದಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೆ ಅಲ್ಲೇ ಉತ್ತಮ ಸಂಬಳದ ಕೆಲಸವು ಸಿಕ್ಕಿತ್ತು. ಆದರೆ ಅದನ್ನೆಲ್ಲವನ್ನು ತ್ಯಜಿಸಿದ ಧನಂಜಯ್ ಭಾರತದಲ್ಲೇ ಏನಾದರೂ ಮಾಡಬೇಕು ಎಂದು 2009 ರಲ್ಲಿ ಸ್ವದೇಶಕ್ಕೆ ವಾಪಾಸಾದರು.
ಭಾರತಕ್ಕೆ ಹಿಂತಿರುಗಿದ ಧನಂಜಯ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಜನರಿಗೆ ಅನುಕೂಲವಾಗುವಂತಹ ಯಾವುದಾದರೂ ಒಂದು ಯೋಜನೆ ಮಾಡಬೇಕು ಎಂಬ ಹಂಬಲ ಜೋರಾಗಿತ್ತು. ಆಗ ಇವರ ಯೋಜನೆಗೆ ಡಾ. ಸೂರಿವೆಂಕಟಾಚಲಂ ಜೊತೆಯಾದರು. ಇಬ್ಬರೂ ಸೇರಿ ಅಚಿರಾ ಲ್ಯಾಬ್ಸ್ ಸಂಸ್ಥೆಯನ್ನು ಆರಂಭಿಸಿ ಬಿಟ್ಟರು. ಪಾಯಿಂಟ್ ಆಫ್ ಕೇರ್ ವೈದ್ಯಕೀಯ ಪರೀಕ್ಷೆ ಜನರಿಗೆ ಲಭ್ಯವಾಗುವಂತೆ ಡಯೋಗ್ನಸ್ಟಿಕ್ ಯಂತ್ರೋಪಕರಣಗಳನ್ನು ತಯಾರಿಸುವುದು ಅಚಿರಾ ಲ್ಯಾಬ್ಸ್ ಉದ್ದೇಶವಾಗಿತ್ತು.

ಅಚಿರಾ ಲ್ಯಾಬ್, ಕೇವಲ 30 ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್ ನೀಡುವ ಎ.ಸಿ.ಐ.ಎಕ್ಸ್ ಯಂತ್ರವನ್ನು ಸಂಶೋಧಿಸಿದೆ. ರೋಗಿಗಳ ಅಲೆದಾಟವನ್ನು ತಪ್ಪಿಸಲು ಎ.ಸಿ.ಐ.ಎಕ್ಸ್. ಯಂತ್ರ ಸಾಕಷ್ಟು ಸಹಾಯಕಾರಿಯಾಗಿದೆ. 30 ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್ ನೀಡಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಬಹುದ್ದಾರಿಂದ ಅನಗತ್ಯ ಓಡಾಟ-ಖರ್ಚನ್ನು ತಪ್ಪಿಸಬಹುದು. ಈ ಯಂತ್ರ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡುವುದರಲ್ಲಿ ಯಾವುದೆ ಅನುಮಾನವಿಲ್ಲ.
ಅತ್ಯಾಧುನಿಕ ತಂತ್ರಜಾನದ ಎ.ಸಿ.ಐ.ಎಕ್ಸ್. ಯಂತ್ರದ ಉಪಯೋಗವನ್ನು ಅರಿತ ಬೆಂಗಳೂರಿನ ಸಾಕಷ್ಟು ಆಸ್ಪತ್ರೆಗಳು ಅಳವಡಿಸಿಕೊಂಡಿವೆ. ಅವುಗಳಲ್ಲಿ ಪ್ರಮುಖವೆಂದರೆ ಅರಕೆರೆಯ ರಾಜಶ್ರೀ ಗ್ರಂಧೀಮ್ ಲ್ಯಾಬ್ಸ್ ಮತ್ತು ಬೆಂಗಳೂರಿನ ಸಾಕಷ್ಟು ಲ್ಯಾಬ್ಗಳಲ್ಲಿ ಈ ಯಂತ್ರದ ಬಳಕೆ ನಡೆಯುತ್ತಿದೆ. ಗುವಾಹಟಿಯ ಐಐಟಿ, ಮದ್ರಾಸ್ ಐಐಟಿಗಳು ಸಂಶೋಧನೆಗಾಗಿ ಈ ಅಚಿರಾ ಲ್ಯಾಬ್ಸ್ಗೆ ಚಂದಾದಾರರಾಗಿದ್ದಾರೆ.
ಅಚಿರಾ ಲ್ಯಾಬ್ ನಲ್ಲಿ ಒಟ್ಟು 42 ಜನರು ಕೆಲಸ ಮಾಡುತ್ತಿದ್ದು, ಉತ್ಪಾದನೆ ಮತ್ತು ಮಾರಾಟ ವಿಭಾಗಳನ್ನು ವಿಂಗಡಿಸಲಾಗಿದೆ. ಡಿಪ್ಲೊಮದಿಂದ ಹಿಡಿದು ಪಿಎಚ್ಡಿ ಓದಿರುವವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಯಂತ್ರವು ಮೈಕ್ರ್ಲೊಯಿಡಿಕ್ಸ್ ಆಧಾರದ ಮೇಲೆ ಲ್ಯಾಬ್ ಆನ್ ಚಿಪ್ ಎಂಬ ಕಲ್ಪನೆಯಲ್ಲಿ ಜಾರಿಗೆ ತಂದಿದ್ದಾರೆ ಡಾ. ಧನಂಜಯ್. ದೇಶ-ವಿದೇಶಗಳಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಒಟ್ಟಿನಲ್ಲಿ ವೈದ್ಯಕೀಯ ಲೋಕದ ಅತ್ಯಾಧುನಿಕ ತಂತ್ರಜಾನದ ಎ.ಸಿ.ಐ.ಎಕ್ಸ್. ಈ ಯಂತ್ರದಿಂದ ವೇಗವಾಗಿ ನಮ್ಮ ಬ್ಲಡ್ ರಿಪೋರ್ಟ್ ಪಡೆಯಬಹುದು. ರಿಪೋರ್ಟ್ಗಾಗಿ ಗಂಟೆಗಟ್ಟಲೆ ಕಾಯುವುದನ್ನು ಧನಂಜಯ್ ತಪ್ಪಿಸಿದ್ದಾರೆ ಎಂದರೆ ತಪ್ಪಿಲ್ಲ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....