ಶಿವಮೊಗ್ಗದ ಕ್ರಿಕೆಟಿಗ ಟೀಮ್ ಇಂಡಿಯಾದ ನಾಯಕ!

Date:

ಟೀಂ ಇಂಡಿಯಾ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ್ ಅವರು ಈಗ ಕ್ರಿಕೆಟ್ ಲೋಕದಲ್ಲೀಗ ಅಗಾದ ಹೆಸರು ಮಾಡಿದ್ದಾರೆ. ಅಂಧರ ಕ್ರಿಕೆಟ್ ಎಂದರೆ ಇಂದು ಶೇಖರ್ ನಾಯ್ಕ ಎನ್ನುವಷ್ಟರ ಮಟ್ಟಿಗೆ ಅವರು ಖ್ಯಾತಿಯ ಉತ್ತುಂಗದಲ್ಲಿದ್ದಾರೆ.
ಶೇಖರ್ ನಾಯ್ಕ ಮೂಲತಃ ಶಿವಮೊಗ್ಗದವರು. ಬಡತನದ ನಡುವೆ ಹುಟ್ಟಿ ಬೆಳೆದವರು. 1986 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ ಶೇಖರ್ ನಾಯ್ಕ ಒಂಭತ್ತನೇ ವಯಸ್ಸಿನಲ್ಲಿದ್ದಾಗಲೇ ಕಾಲುವೆಯೊಂದಕ್ಕೆ ಬಿದ್ದು ಕಣ್ಣು ಕಳೆದುಕೊಂಡರು. ಎಷ್ಟೇ ಚಿಕಿತ್ಸೆ ನೀಡಿದರೂ ದೃಷ್ಟಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಮರಳಿ ಬರಲೇ ಇಲ್ಲ. ಮುಸುಕು ಮುಸುಕಾಗಿ ಸ್ವಲ್ಪವಷ್ಟೇ ಕಾಣಿಸುತ್ತದೆ. ಬಣ್ಣವನ್ನೂ ಗುರುತಿಸುವುದೂ ಕೂಡ ದುಸ್ತರ ಎಂಬಂತಾಗಿತ್ತು.


ಕಣ್ಣು ಕಳೆದುಕೊಂಡ ಬೆನ್ನಲ್ಲೇ ಶೇಖರ್ ತಮ್ಮ ತಂದೆಯನ್ನೂ ಕಳೆದುಕೊಂಡರು. ಶಾಲಾ ದಿನಗಳಲ್ಲಿ ಆರಂಭವಾದ ಕ್ರಿಕೆಟ್ ಪ್ರೀತಿ ಹಾಗೇ ಮುಂದುವರಿಯಿತು. ನೋಡನೋಡುತ್ತಲೇ ಶೇಖರ್ ನಾಯ್ಕ್ ವಲಯ, ರಾಜ್ಯ ಮಟ್ಟದ ಅಂಧರ ಕ್ರಿಕೆಟ್ ನಲ್ಲಿ ಮಿಂಚಿದರು.
ಸಾಧನೆಯ ದಾರಿ ಶೇಖರ್ ನಾಯ್ಕ ಭಾರತ ಅಂಧರ ಕ್ರಿಕೆಟ್ ತಂಡದ ಆಟಗಾರನಾಗಿ ಆರಂಭಿಸಿ ನಂತರದ ದಿನಗಳಲ್ಲಿ ತಂಡದ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡರು. 2003ರಲ್ಲಿ ಅವರು ಆತಿಥೇಯ ಪಾಕಿಸ್ತಾನ ತಂಡದ ವಿರುದ್ಧ 198 ರನ್ ಬಾರಿಸಿದ್ದರು. ಇದು ಅವರ ವೃತ್ತಿ ಜೀವನದ ಅವಿಸ್ಮರಣೀಯ ಪಂದ್ಯಗಳಲ್ಲಿ ಒಂದು. ಏಕೆಂದರೆ, ಅದು ಅವರ ಜೀವನದಲ್ಲಿ ಗಳಿಸಿದ ಗರಿಷ್ಠ ರನ್.
2003ರಲ್ಲಿ ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡ ಭಾರತ ಪ್ರವಾಸ ಮಾಡಿತ್ತು. ಈ ಪಂದ್ಯದಲ್ಲೂ ಶೇಖರ್ ಅಮೋಘ ಆಟ ಪ್ರದರ್ಶಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2006ರಲ್ಲಿ ಅವರು ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. ಆದರೆ ಫೈನಲ್ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋಲು ಕಂಡು ದೊಡ್ಡ ನಿರಾಶೆ ಅನುಭವಿಸಿತ್ತು.


ಆದರೆ 2006ರ ವಿಶ್ವಕಪ್ ನಲ್ಲಿ ಶೇಖರ್ ಅವರ ಸಾಧನೆಗಾಗಿ ಸರಣಿಶ್ರೇಷ್ಠ ಮತ್ತು ಟೂರ್ನಿಯಲ್ಲಿ 3 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದರು. 2010ರಲ್ಲಿ ಮತ್ತೆ ರಾಷ್ಟ್ರೀಯ ತಂಡದ ನಾಯಕನಾಗುವ ಅವಕಾಶ ಅವರಿಗೆ ಸಿಕ್ಕಿತು.
ಇನ್ನು ಏಕದಿನ ವಿಶ್ವಕಪ್ ಗೆದ್ದ ಭಾರತ ತಂದ ಶೇಖರ್ ನಾಯಕತ್ವದಲ್ಲಿ 2012ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಅಲ್ಲದೆ ಕಳೆದ ವರ್ಷ ಭಾರತ ತಂಡ ಶೇಖರ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆದ್ದುಕೊಂಡಿತ್ತು.
ಇದು ಶೇಖರ್ ನಾಯ್ಕ್ ಅವರ ಜೀವನದ ಅತ್ಯುತ್ತಮ ಕ್ಷಣವಾಯಿತು. ಅದೂ ಪಾಕಿಸ್ತಾನದ ವಿರುದ್ಧ. ಚಿಕ್ಕಂದಿನಿಂದಲೂ ಕ್ರಿಕೆಟ್ ಆಡಬೇಕೆಂಬ ಹಂಬಲವಿದ್ದು, ಅದನ್ನೂ ಈಡೇರಿಸಿಕೊಂಡರು. ಇನ್ನು ವಿಶ್ವ ಕಪ್ ಗೆದ್ದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು ಅವರ ಅಪೂರ್ವ ಕ್ಷಣವಂತೆ . ಪ್ರಧಾನಿ ಮೋದಿಯವರಿಂದ ಅವರಿಂದ ಅಭಿನಂದನೀಯ ಮಾತುಗಳನ್ನು ಕೇಳಿದಾದ ಶೇಖರ್ ಅವರಿಗೆ ಕಣ್ಣಲ್ಲಿ ನೀರು ಬರುವಂತಂತೆ.
ದೈಹಿಕ ನ್ಯೂನತೆಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಅನ್ನೋದನ್ನ ಸಾಬೀತು ಮಾಡಿ ತೋರಿಸಿರುವ ಶೇಖರ್ ನಾಯ್ಕ ಅದೆಷ್ಟೋ ವಿಕಲ ಚೇತನರ ಪಾಲಿಗೆ ಆಶಾಕಿರಣವಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...