5 ವರ್ಷದ ಬಳಿಕ ಕಿಚ್ಚ ಸುದೀಪ್ ಕಮ್ ಬ್ಯಾಕ್! ಏನಿದು ‘ಪೈಲ್ವಾನ್’ ಕುರಿತ ನ್ಯೂಸ್…!?

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ಒಬ್ಬ ನಟ ಮಾತ್ರವಲ್ಲ. ಅವರೊಬ್ಬ ನಿರ್ದೇಶಕ, ನಿರ್ಮಾಪಕ…ಕಿರುತೆರೆ ನಿರೂಪಕ….ಕ್ರಿಕೆಟಿಗ!
ಆದರೆ, ಕಳೆದ 5 ವರ್ಷಗಳಿಂದ ಮರೆಯಾಗಿದ್ದ ನಿರ್ದೇಶಕ ಸುದೀಪ್ ಮತ್ತೆ ಬರ್ತಿದ್ದಾರೆ.
ಮೈ ಆಟೋಗ್ರಾಫ್ ನಿರ್ದೇಶನದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಸುದೀಪ್ , ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ , ಕೆಂಪೇಗೌಡ , ಮಾಣಿಕ್ಯ ಹೀಗೆ ಒಂದಿಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ, ಮಾಣಿಕ್ಯ ನಂತರ ಸುದೀಪ್ ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಈಗ ಮತ್ತೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.


5 ವರ್ಷದ ಬಳಿಕ ಸುದೀಪ್ ಡೈರೆಕ್ಷನ್ ಕ್ಯಾಪ್ ತೊಡ್ತಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ.
ಸದ್ಯ ಸುದೀಪ್ ಕೋಟಿಗೊಬ್ಬ 3 , ದಬಾಂಗ್ 3 ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಳ ಬಳಿಕ ಮತ್ತೆ ಒಂದೆರಡು ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳ ಬಳಿಕ ತಮ್ಮ ನಿರ್ದೇಶನದ ಸಿನಿ ಕೆಲಸ ಶುರುಮಾಡಲಿದ್ದಾರೆ. ಈಗಾಗಲೇ ಸುದೀಪ್ ಸಿನಿಮಾ ಕಥೆಯನ್ನು ಬರೆದಿಟ್ಟುಕೊಂಡಿದ್ದಾರಂತೆ‌. ಮೈ ಆಟೋಗ್ರಾಫ್ ಸಿನಿಮಾದ ಸೀಕ್ವೆಲ್ ಇದಾಗಿದೆ ಎಂದು ತಿಳಿದು ಬಂದಿದ್ದು, ಸ್ವಮೇಕ್ ಚಿತ್ರವಾಗಿರಲಿದೆಯಂತೆ.


ಒಟ್ಟಿನಲ್ಲಿ ಈ ಹಿಂದೆ ಅನೇಕಬಾರಿ ಸುದೀಪ್ ನಿರ್ದೇಶನ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಆದರೆ, ಸುದೀಪ್ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರಿಂದ ನಿರ್ದೇಶನದತ್ತ ಮುಖ ಮಾಡಿರಲಿಲ್ಲ. ಈಗ ವಾಪಸ್ ಆಗೋದು ಪಕ್ಕಾ ಆಗಿದೆ‌.

Share post:

Subscribe

spot_imgspot_img

Popular

More like this
Related

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ - ವಿಜಯ್ ! ನಟಿ ರಶ್ಮಿಕಾ ಮಂದಣ್ಣ...

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಕೃಷ್ಣ ಬೈರೇಗೌಡ 

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು:...

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ...

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...