ಪೆನ್ಸಿಲ್ ಚುಚ್ಚಿ ಕಣ್ಣು ಕಳೆದುಕೊಂಡರು, ದೃಷ್ಟಿಹೀನತೆ ಸಾಧನೆಗೆ ಅಡ್ಡಿಯಾಗಲಿಲ್ಲ!

Date:

ಪ್ರಾಂಜಲ್ ಪಟೇಲ್. ಅಂಗವಿಕಲತೆಯನ್ನ ಮೆಟ್ಟಿನಿಂತವರು. ದೃಷ್ಟಿಹೀನರು ಇರಬಹುದು. ಆದರೆ, ಇವರ ಸಾಧನೆಗೆ ಇದ್ಯಾವುದು ಅಡ್ಡಿಯಲ್ಲ ಎಂದು ತೋರಿಸಿಕೊಟ್ಟವರು. ಎಷ್ಟೋ ಅವಮಾನಗಳನ್ನ ಮೆಟ್ಟಿನಿಂತ ಇವರು ಕೊನೆಗೊಂದು ದಿನ ಇಡೀ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದವರು. ಕಣ್ಣಿಲ್ಲದಿದ್ದರೂ ಐಎಎಸ್ನದಲ್ಲಿ 124ನೇ ರ್ಯಾಂಕ್ ಪಡೆದು ಇತರರಿಗೆ ಆದರ್ಶರಾಗಿದ್ದಾರೆ.
ಪ್ರಾಂಜಲ್ ಪಟೇಲ್ ಆಗಿನ್ನೂ 6 ವರ್ಷದ ಬಾಲಕಿ. ತನ್ನ ಸ್ನೇಹಿತೆಯೊಬ್ಬಳು ಪೆನ್ಸಿಲ್ ನಿಂದ ಕಣ್ಣಿಗೆ ಚುಚ್ಚಿದ ಪರಿಣಾಮ ಒಂದು ಕಣ್ಣು ಕಳೆದುಕೊಂಡರು. ದುರಾದೃಷ್ಠ ಎನ್ನುವಂತೆ ಆನಂತರ ಮೆಡಿಸಿನ್ ಗಳ ಅಡ್ಡ ಪರಿಣಾಮಗಳ ಕಾರಣದಿಂದ ಇನ್ನೊಂದು ಕಣ್ಣನ್ನು ಕಳೆದುಕೊಂಡರು. ಹತ್ತನೇ ತರಗತಿಯವರೆಗೂ ಅಂಧರ ಶಾಲೆಯಲ್ಲಿ ಓದಿದರು.


ಪ್ರಾಂಜಲ್ ಪಟೇಲ್, ಕಾಲೇಜು ಶಿಕ್ಷಣಕ್ಕಾಗಿ ಮುಂಬೈ ಹೊರವಲಯದಲ್ಲಿರುವ ಥಾಣೆ ಜಿಲ್ಲೆಯ ಉಲ್ಲಾಸ್ನಗರದ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಆ ಕಾಲೇಜು ಪ್ರಾಂಜಲ್ರ.ವರ ಮನೆಯಿಂದ ಒಂದು ಗಂಟೆ ಹತ್ತು ನಿಮಿಷ ದೂರವಿತ್ತು. ಇನ್ನು ಇವ್ರ ಈ ಕಾಲೇಜಿನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಎಷ್ಟೋ ಮಂದಿ ಇದ್ದರಂತೆ. ಅವ್ರ ಆ ಇಂಗ್ಲಿಷ್ ಭಾಷೆ ಪ್ರಾಂಜಲ್ಗೆಿ ಅರ್ಥ ಮಾಡಿಕೊಳ್ಳಲು ತುಂಬಾನೇ ಕಷ್ಟವಾಗುತ್ತಿತ್ತಂತೆ ಆದ್ರೂ ಪಟ್ಟು ಬಿಡದೇ ಕಲಿತೆ ಎನ್ನುತ್ತಾರೆ ಅವರು.
ಎಲ್ಲರಂತೆ ಪ್ರಾಂಜಲ್ ಪಟೇಲ್ ಅವರಿಗೂ ತಾಯಿಯೇ ಮೊದಲ ಗುರು. ಇನ್ನು ಪ್ರಾಂಜಲ್‍ ಅವರು ಬೇರೆಯವರ ನೋಟ್ಸ್ ಬರೆದು ತಂದು ತಾಯಿಗೆ ನೀಡಿ, ತಾಯಿಯಿಂದ ಗಟ್ಟಿಯಾಗಿ ಓದಿಸಿಕೊಂಡು ಕೇಳುತ್ತಿದ್ದರು. ಇದನ್ನ ಇದನ್ನು ಮತ್ತೆ ನೆನಪಿಟ್ಟುಕೊಂಡು ಅಭ್ಯಾಸ ಮಾಡುವುದು ಪ್ರಾಂಜಲ್ ಅವರ ನಿತ್ಯ ಕಾಯಕವಾಗಿತ್ತು. ಈ ರೀತಿ ಶ್ರದ್ಧೆಯಿಂದ ಓದಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆದರು.
2014ರಲ್ಲಿ ಪ್ರಾಂಜಲ್ ಪಟೇಲ್ ಅವರಿಗೆ ಮದುವೆಯಾಯಿತು. ಮದುವೆಯ ನಂತರ ಪ್ರಾಂಜಲ್ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧವಾಗಬೇಕೆಂಬ ನಿರ್ಧಾರಕ್ಕೆ ಬಂದರು. ಆಗಿನಿಂದಲೇ ಇದ್ದಕ್ಕೆ ಬೇಕಾದ ತಯಾರಿಯನ್ನ ಕೂಡ ನಡೆಸಿದರು. 2016 ರಲ್ಲಿ 773ನೇ ರಾಂಕಿಂಗ್ ನಲ್ಲಿ ಪಾಸ್ ಆದರೂ ರೈಲ್ವೇ ಸೇವೆಗಳಿಗೆ ನೇಮಕಗೊಂಡಿದ್ದರು. ಆದರೆ, ಇಲಾಖೆಯು 100 ರಷ್ಟು ದೃಷ್ಟಿಹೀನತೆ ಹೊಂದಿದ್ದ ಕಾರಣ ಈ ಕೆಲಸಕ್ಕೆ ಅನರ್ಹ ಎಂದು ಪರಿಗಣಿಸಿತು.
ಪ್ರಾಂಜಲ್ ಪಟೇಲ್ ಅವರು ಪಟ್ಟು ಹಿಡಿದು ಓದಿ, ಕಳೆದ 2018ರಲ್ಲಿ 124 ನೇ ರಾಂಕ್ ನಲ್ಲಿ ಐಎಎಸ್ ಪಾಸ್ ಮಾಡಿ ದೇಶದ ದೊಡ್ಡ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...