ವೃಶ್ಚಿಕ ಶುಭ ಲಗ್ನದಲ್ಲಿ ಗೆಳತಿ ಪ್ರೇರಣಾ ಜೊತೆ ಧ್ರುವ ಸರ್ಜಾ ಸಪ್ತಪದಿ ತುಳಿದಿದ್ದಾರೆ.
ಅದ್ಧೂರಿ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು , ಬಹದ್ಧೂರ್ ಆಗಿ ಮಿಂಚಿ, ಭರ್ಜರಿ ಆಗಿ ಹ್ಯಾಟ್ರಿಕ್ ಬಾರಿಸಿದ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೇರಣಾ ಜತೆ ಇಂದು ಬಹದ್ಧೂರ್ ಗಂಡು ಸಪ್ತಪದಿ ತುಳಿದಿದ್ದಾರೆ. 14 ವರ್ಷಗಳ ಪ್ರೀತಿಗೆ ಇಂದು ದಾಂಪತ್ಯ ರೂಪ ಕೊಟ್ಟಿದ್ದಾರೆ. ಎರಡು ಕುಟುಂಬಗಳು, ಬಂಧುಗಳು, ಆತ್ಮಿಯರ ಸಮ್ಮುಖದಲ್ಲಿ ಶಾಸ್ತ್ರ-ಸಂಪ್ರದಾಯ ಬದ್ಧವಾಗಿ ಧ್ರುವ ಕಲ್ಯಾಣ ನೆರವೇರಿತು. ಬೆಳಗ್ಗೆ 7.15 ರಿಂದ 7೭.45 ರ ವರೆಗೆ ಸಲ್ಲುವ ವೃಶ್ಚಿಕ ಶುಭಲಗ್ನದಲ್ಲಿ ಬಹುಕಾಲದ ಗೆಳತಿ ಪ್ರೇರಣಾಗೆ ಮಾಂಗಲ್ಯಧಾರಣೆ ಮಾಡಿದ್ರು ಧ್ರುವ.