ಪಾಕಿಸ್ತಾನ ಮತ್ತೆ ಭಾರತದೊಂದಿಗೆ ಅಂಚೆ ವ್ಯವಹಾರ ಮುಂದುವರೆಸಲು ಇಚ್ಛಿಸಿದೆ. ಕೇಂದ್ರ ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಬಳಿಕ ಅಂಚೆ ಸೇವೆ ಕಡಿದುಕೊಂದಿದ್ದ ಪಾಕಿಸ್ತಾನ ಪುನಃ ಅಂಚೆ ಸಂಬಂಧ ಮುಂದುವರೆಸಲು ಮನಸ್ಸು ಮಾಡಿದೆ.
ಹೌದು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ್ನು ಕೇಂದ್ರ ಸರಕಾರ ರದ್ದು ಮಾಡಿದ ಬಳಿಕ ಮೂರು ತಿಂಗಳ ಹಿಂದೆ ಪಾಕಿಸ್ತಾನ ಭಾರತದೊಂದಿಗೆ ಅಂಚೆ ಸಂಬಂಧವನ್ನು ಕಡಿದುಕೊಂಡಿತ್ತು. ಆದರೆ, ಇದೀಗ ಈಗ ಪುನಃ ವಾಘಾ ಗಡಿಯ ಮೂಲಕ ಸಾಮಾನ್ಯ ಅಂಚೆ ಸೇವೆ ಮತ್ತು ಎಕ್ಸ್‍ಪ್ರೆಸ್ ಮೈಲ್ ಸೇವೆಗಳನ್ನು ಆರಂಭಿಸಲು ನಿರ್ಧರಿಸಿದೆ.
ಈ ಕುರಿತು ಮೂರು ದಿನಗಳ ಹಿಂದೆಯೇ ಪಾಕ್ ಅಂಚೆ ಇಲಾಖೆ ಆದೇಶಿಸಿತ್ತು. ವಿದೇಶಾಂಗ ಇಲಾಖೆ ಕೂಡ ಭಾರತದ ವತಿಯಿಂದ ಅಂಚೆ ಸೇವೆಗಳನ್ನು ಪುನರಾರಂಭಿಸುವುದರ ಬಗ್ಗೆ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.