ಇಂಟರ್ನೆಟ್ ಯುಗದಲ್ಲಿ ತಂತ್ರಜ್ಞಾನಗಳು ಹೆಚ್ಚಾದಂತೆ ನಮ್ಮ ಸೀಕ್ರೆಟ್ ಮಾಹಿತಿಗಳನ್ನು ಕದಿಯುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಅಕೌಂಟ್ ಗಳನ್ನು ಹ್ಯಾಕ್ ಮಾಡೋದು ಒಂದು ರೀತಿ ಕಾಮನ್ ಆಗಿ ಆಗಾಗ ನಡಿಯುತ್ತಲೇ ಇರುತ್ತೆ. ಆದ್ರೆ ಈಗ ಹ್ಯಾಕರ್ಸ್ ಗಳು ಮೊಬೈಲ್ ಕ್ಯಾಮೆರಾಗಳ ಮೇಲೆಯು ಕಣ್ಣಿಟ್ಟಿದ್ದಾರೆ.ಈಗಾಗಲೇ ವಾಟ್ಸಪ್ ಮೇಲೆ ಹ್ಯಾಕರ್ಸ್ ಗಳು ಕಣ್ಣು ಹಾಕಿರೋದು ಗೊತ್ತಾಗುತ್ತಿದ್ದಂತೆ ಹ್ಯಾಕರ್ಸ್ ಗಳ ಇನ್ನೊಂದು ದಾರಿ ಕಂಡುಕೊಂಡಿದ್ದಾರೆ.
ಸೈಬರ್ ಸೆಕ್ಯುರಿಟಿ ಸಂಸ್ಥೆಯ ಚೆಕ್ ಮಾರ್ಕ್ ಇದರ ಬಗ್ಗೆ ಮಾಹಿತಿ ನೀಡಿದ್ದು, ಆಂಡ್ರಾಯ್ಡ್ ಸ್ಯಾಮ್ಸಂಗ್ ಫೋನ್ ಕ್ಯಾಮೆರಾದಲ್ಲಿ ಮತ್ತು ಗೂಗಲ್ ಕ್ಯಾಮೆರಾ ಆ್ಯಪ್ ನಲ್ಲಿ ಬಗ್ ಕಂಡುಬಂದಿದೆ. ಆದ್ದರಿಂದ ಈ ಸಂಸ್ಥೆ ಸ್ಯಾಮ್ಸಂಗ್ ಫೋನ್ ಬಳಕೆದಾರರು ಫೋಟೋ ಕ್ಲಿಕ್ಕಿಸಿದರೆ , ವೀಡಿಯೋ ಚಿತ್ರೀಕರಣ ಮಾಡುವುದರಿಂದ ಲೊಕೇಶನ್ ಮೂಲಕ ನಿಮ್ಮ ಮಾಹಿತಿ ಹ್ಯಾಕರ್ಸ್ ಗಳ ಕೈ ಸೇರುತ್ತವೆ. ಅಷ್ಟೇ ಅಲ್ಲ ಗೂಗಲ್ ಪ್ಲೇಸ್ಟೋರ್ ನಲ್ಲಿರುವ ನಕಲಿ ಆ್ಯಪ್ ಬಳಸಿದಾಗಲೂ ಮಾಹಿತಿಯನ್ನು ದುರುಪಯೋಗಪಡಿಸುತ್ತಾರೆಂದು ಎಚ್ಚರಿಕೆ ನೀಡಿದೆ. ಹ್ಯಾಕರ್ಸ್ ಗಳು ಬಳಕೆದಾರರ ಮಾಹಿತಿ ಕದಿಯಲು ಒಂದಲ್ಲ ಒಂದು ದಾರಿ ಹುಡುಕುತ್ತಾರೆ. ಗೂಗಲ್ ಪ್ರತಿಬಾರಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಅನ್ನು ಅಪ್ಡೇಟ್ ಮಾಡುತ್ತಲೇ ಇರುತ್ತದೆ. ಆದರೂ ಬಳಕೆದಾರರಿಗೆ ಲಿಂಕ್ ಕಳುಹಿಸುವುದು, ವೀಡಿಯೋಗಳು ಹೀಗೆ ಅನೇಕ ದಾರಿಗಳ ಮೂಲಕ ಮಾಹಿತಿಯನ್ನು ಕದಿಯುತ್ತಾರೆ. ಆದ್ದರಿಂದ ಬಳಕೆದಾರರು ಯಾವುದೇ ಆ್ಯಪ್ ಗಳನ್ನು ಬಳಸಬೇಕಾದ್ರೂ ಎಚ್ಚರ ವಹಿಸಿ ನಿಮ್ಮ ಖಾಸಗಿ ಮಾಹಿತಿಗಳನ್ನು ಸೇಫಾಗಿ ಕಾಪಾಡಿಕೊಳ್ಳಿ.