ಶಿರಡಿ ಬಾಬಾ, ಸತ್ಯ ಸಾಯಿ ಬಾಬಾರ ಅವತಾರ ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಗಳವಾರ ಪೇಟೆಯಲ್ಲಿ ಪವಾಡ ಪುರುಷ ಎಂದು ಹೇಳಲಾಗುತ್ತಿರುವ ವ್ಯಕ್ತಿಯನ್ನು ಜನ ಪೂಜಿಸುತ್ತಿದ್ದಾರೆ.
ಪ್ರಕಾಶ್ ಎಂಬುವವರ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಪ್ರೇಮ್ ಸಾಯಿ ಬಾಬಾ ಎಂಬ ವ್ಯಕ್ತಿ ಚಮತ್ಕಾರ ಸೃಷ್ಟಿಸಿದ್ದು, ಇವರನ್ನು ನೋಡಲು ಭಕ್ತರು ಮುಗಿಬೀಳುತ್ತಿದ್ದಾರೆ.
ಚಿಕ್ಕಮಗಳೂರಿನ ಪುಟ್ಟಸ್ವಾಮಿ ಗೌಡ ಎಂಬುವವರ ಸಮಾಧಿ ಬಳಿಯಿದ್ದ ಇವರು ಮೂರು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದಾರೆ. ಇವರ ಬಳಿ ಸಮಸ್ಯೆ ಹೇಳಿಕೊಂಡು ಬಂದವರಿಗೆ ಶಿರಡಿ ಸಾಯಿ ಬಾಬಾ ಅವತಾರವಾಗಿ ಜನರಿಗೆ ದರ್ಶನ ನೀಡುತ್ತಿದ್ದಾರೆ ಎಂಬ ನಂಬಿಕೆಯಿದೆ.
ಬರಿಗೈಯಲ್ಲಿ ಭಕ್ತರಿಗೆ ಸಾಯಿಬಾಬಾ ಫೋಟೋ, ತಾಯ್ತಾ, ಸಿಹಿ ತಿನಿಸನ್ನು ನೀಡುತ್ತಿದ್ದಾರೆ. ಸಮಸ್ಯೆಗಳನ್ನು ಹೇಳಿ ಕೊಂಡು ಬರುತ್ತಿರುವ ಭಕ್ತರಿಂದ ಯಾವುದೇ ಕಾಣಿಕೆ ಪಡೆಯದೇ ಪರಿಹಾರ ನೀಡುತ್ತಿದ್ದಾರೆನ್ನಲಾಗಿದೆ.