ವೇಲ್ಸ್ ನ ರಾಜಕುಮಾರಿ. ಪ್ರಿನ್ಸಸ್ ಆಫ್ ಬ್ರಿಟನ್. ಡಯಾನಾ ಆಕ್ಸಿಡೆಂಟ್ ನಲ್ಲಿ ಸತ್ತಿದ್ದಾಳೆ ಅನ್ನೋದು ಜಗಜ್ಜಾಹೀರು ಸಂಗತಿ. ಆದರೆ ಅದು ಕೊಲೆ ಎನ್ನಲಾಗುತ್ತಿದೆ. ಆದರೆ ಸಾಕ್ಷ್ಯ ಒದಗುತ್ತಿಲ್ಲ, ಸರಿಯಾದ ತನಿಖೆಯಾಗುತ್ತಿಲ್ಲ. ಅವತ್ತು 1997, ಆಗಸ್ಟ್ 30ರ ಶನಿವಾರ. ಗೆಳೆಯ ದೋದಿ ಫಯಾದ್ ಹಾಗೂ ಹೆನ್ರಿ ಪೌಲ್ ಜೊತೆ ಖಾಸಗಿ ವಿಮಾನದಲ್ಲಿ ಪ್ಯಾರೀಸ್ ಸುತ್ತಾಡಿಕೊಂಡು ವಾಪಾಸಾಗಿದ್ದಳು. ಈ ದೋದಿ ಫಯಾದ್, ಫ್ರಾನ್ಸ್ ನ ಖ್ಯಾತ ರಿಟ್ಜ್ ಹೋಟೆಲ್ ಮಾಲೀಕ ಮೊಹಮ್ಮದ್ ಫಯಾಜ್ನ ಮಗ. ಅವನಿಗೆ ಸ್ವಂತಕ್ಕೊಂದು ಅಪಾರ್ಟ್ ಮೆಂಟ್ ಕೂಡ ಇದೆ. ಹೆನ್ರಿ ಪೌಲ್, ಆ ಹೋಟೆಲ್ ಸೆಕ್ಯೂರಿಟಿ ನೋಡಿಕೊಳ್ಳುತ್ತಿದ್ದ ಡೆಪ್ಯೂಟಿ ಹೆಡ್. ಅವತ್ತು ಡಯಾನ ವಿಮಾನದಿಂದ ಇಳಿದು ದೊದಿ ಫಯಾದ್ ಜೊತೆ ಅಪಾರ್ಟ್ ಮೆಂಟಿನಲ್ಲಿ ಕೆಲ ಹೊತ್ತು ಕಳೆದು, ಕಪ್ಪು ಬಣ್ಣದ ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಹೊರಟಿದ್ದಾಳೆ. ಆಗ ಸಮಯ ಸರಿಯಾಗಿ ಮಧ್ಯರಾತ್ರಿ 12.20. ಅವಳ ಜೊತೆ ಕಾರಿನಲ್ಲಿ ದೊದಿ ಫಯಾದ್, ಹೆನ್ರಿ ಪೌಲ್, ಫಯಾದ್ ಫ್ಯಾಮಿಲಿಯ ಗನ್ ಮ್ಯಾನ್ ಟ್ರೆವರ್ ರೀಸ್ ಜೋನ್ಸ್ ಇದ್ರು. ಕಾರು ಅಪಾರ್ಟ್ ಮೆಂಟಿನಿಂದ ಹೊರಟ ಮೂರೇ ನಿಮಿಷಕ್ಕೆ, `ಪ್ಲೆಸ್ ದಿ ಲಾ ಕಾನ್ಕೋರ್ಡ್’ ಬಳಿ ಭೀಕರ ಅಪಘಾತಕ್ಕೀಡಾಯಿತು. ಆ ಅಪಘಾತದಲ್ಲಿ ಕಾರಿನಲ್ಲಿದ್ದ ಗನ್ ಮ್ಯಾನ್ ಟ್ರೆವರ್ ರೀಸ್ ಜೋನ್ಸ್ ಬಿಟ್ಟು ಮಿಕ್ಕವರೆಲ್ಲರೂ ಸತ್ತುಹೋದರು. ಗನ್ ಮ್ಯಾನ್ ಬದುಕಿದ್ದೇ ಆ ಅಪಘಾತದ ಇಡೀ ಚಿತ್ರಣವೇ ಅನುಮಾನ ಮೂಡಿಸಿತ್ತು. ಆದರೆ ಅದು ಕೇವಲ ಅನುಮಾನಕ್ಕೆ ಮಾತ್ರ ಸೀಮಿತವಾಯಿತು. ಆ ಬಗ್ಗೆ ಯಾವುದೇ ತನಿಖೆಯಾಗಲಿಲ್ಲ. ರಾಜಕುಮಾರಿ ಡಯಾನ ಸಾವು ಇವತ್ತಿಗೂ ನಿಗೂಢವಾಗಿದೆ.
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!