ಜಸ್ಟ್ ಮಿಸ್, ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ದಾವೂದ್ ಫಿನಿಶ್..!
ದಾವೂದ್ ಇಬ್ರಾಹೀಂ ಎಲ್ಲಿದ್ದಾನೆ..? ಅವನು ಬದುಕಿದ್ದಾನಾ..? ಇಲ್ಲ ಸತ್ತಿದ್ದಾನಾ..? ಬದುಕಿದ್ರೆ ಎಲ್ಲಿದ್ದಾನೆ..? ಏನ್ ಮಾಡ್ತಿದ್ದಾನೆ..? ಅವನ ಅವತಾರಗಳೇನು..? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಆ ಉತ್ತರ ಗೊತ್ತಿರುವುದು ಪಾಕಿಸ್ತಾನಕ್ಕೆ ಮಾತ್ರ. ದಾವೂದ್ ಕರಾಚಿಯಲ್ಲಿರುವುದು ಪಕ್ಕಾ. ಈ ಹಿಂದೆ ಭಾರತ, ಅಮೇರಿಕಾ ಮಿಲಿಟರಿ ಪಡೆ ಅವನ ಅಡ್ಡಾಕ್ಕೆ ನುಗ್ಗಿದ್ದು ನಿಜ. ಆದರೆ ಅವತ್ತು ಕೂದಲೆಳೆಯಲ್ಲಿ ಪಾರಾದ. ಅದು ಜಾಗತೀಕ ಸತ್ಯ. ಆದ್ರೆ ಪಾಕಿಸ್ತಾನ ಮಾತ್ರ ಸುತಾರಂ ಒಪ್ಪಿಕೊಳ್ಳುತ್ತಿಲ್ಲ. ಪಾಕಿಸ್ತಾನದ ಕಥೆಗಳನ್ನ ಕೇಳಿ ರೋಸಿ ಹೋಗಿರುವ ಭಾರತ, ಅಮೇರಿಕಾ ಜೊತೆ ಜಂಟಿಯಾಗಿ ದಾವೂದ್ ನನ್ನು ಕೆಡವಲು ಸಿದ್ದವಾಗಿತ್ತು. ಅಮೇರಿಕಾ ತನ್ನ ಹಿಟ್ ಲಿಸ್ಟ್ ನಲ್ಲಿ ದಾವೂದ್ ಹೆಸರು ಬರೆದುಕೊಂಡಿದ್ದು, ಆತನನ್ನ ಭಯೋತ್ಪಾದಕರ ಪಟ್ಟಿಗೆ ಸೇರಿಸಿತ್ತು.
ದಾವೂದ್ ನನ್ನು ಕೆಡವೋದೇನು ದೊಡ್ಡ ವಿಚಾರವಲ್ಲ. ಆದರೆ ಶತ್ರು ರಾಷ್ಟ್ರಕ್ಕೆ ನುಗ್ಗಿ ಅವನನ್ನು ಹೊಡೆದರೇ ಅದು ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಮಸ್ಯೆಗೆ ಕಾರಣವಾಗುತ್ತದೆ. ಯುದ್ಧವು ಸಂಭವಿಸಬಹುದು. ಈ ವಿಚಾರದಲ್ಲಿ ಚೀನಾದ ಬೆಂಬಲ ಪಡೆಯೋಣ ಅಂದರೇ, ಪಾಕಿಸ್ತಾನದ ವಿಚಾರದಲ್ಲಿ ಆ ದೇಶದ ನಿಲುವು ಸ್ಪಷ್ಟವಾಗಿದೆ. ಅವರನ್ನು ನಂಬುವಂತಿಲ್ಲ. ಆದರೆ ಅಮೇರಿಕಾ ಬೆಂಬಲ ಪಡೆದರೇ ಎಲ್ಲವೂ ಸಲೀಸು. ಪಾಕಿಸ್ತಾನ ಕಮಕ್ ಕಿಮಕ್ ಎನ್ನುವುದಿಲ್ಲ. ಇದು ಮೋದಿ ಪ್ಲಾನ್..! ದಾವೂದ್ ಪಾಪಕೃತ್ಯಗಳ ಆರಂಭಿಕ ದಿನಗಳಲ್ಲಿ ಭಾರತದ ಜೈಲುಗಳಲ್ಲಿ ಕಂಬಿ ಎಣಿಸಿದ್ದಾನೆ. 1993ರ ಮುಂಬೈ ಬ್ಲಾಸ್ಟ್ ನಂತರ ಆಸಾಮಿ ಪತ್ತೆಯೇ ಇಲ್ಲ. ಅಂದರೇ ಡಾನ್ ಭೂಗತವಾಗಿ ಇಪ್ಪತ್ಮೂರು ವರ್ಷಗಳಾಗಿದೆ. ಅಲ್ಲೆಲ್ಲೋ ದುಬೈನಲ್ಲಿ ತನ್ನ ಮಗಳ ಮದುವೆಗೆ ಬಂದು ಹೋಗಿದ್ದ ಎಂಬ ಪುಕಾರು ಬಿಟ್ಟರೇ.. ಮತ್ತೆಲ್ಲೂ ಆತನ ಸುದ್ಧಿಯಾಗಿಲ್ಲ. ಡಾನ್ ಆಗಿ ಒಂದು ಮಟ್ಟಕ್ಕೆ ಬೆಳೆದ ನಂತರ ದುಬೈನಲ್ಲಿ ಕುಂತು ಆಪರೇಟ್ ಮಾಡುತ್ತಿದ್ದ ಈ ಪರಮ ಪಾತಕಿ, ಹಾಕಾಂಗ್, ಆಸ್ಟ್ರೇಲಿಯ ಸೇರಿದಂತೆ- ವಿದೇಶಗಳಲ್ಲೇ ಕುಂತು ವಿದ್ವಂಸಕ ಕೃತ್ಯಗಳನ್ನು ನಡೆಸಿದ್ದೇ ಹೆಚ್ಚು.
ದಾವೂದ್ ನನ್ನು ಹಿಡಿಯಲು ಇಂಟರ್ ಫೋಲ್ ಒಂದು ಹಂತದಲ್ಲಿ ಭೂಗತ ಪಾತಕಿಗಳ ಬೆಂಬಲವನ್ನು ಯಾಚಿಸಿತ್ತು. ಚೋಟಾ ರಾಜನ್ ನಂಥ ಡಾನ್ ಗಳು ದಾವೂದ್ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಅಂತಿಮವಾಗಿ ಆತ ಪಾಕಿಸ್ತಾನದಲ್ಲಿಯೇ ಇರುವುದು ಖಾತ್ರಿಯಾಗಿತ್ತು. ಆದರೆ ಪಾಕಿಸ್ತಾನದಲ್ಲಿರುವ ದಾವೂದ್ ನನ್ನು ಮುಟ್ಟೋದ್ ಹೇಗೆ..? ರಿಸ್ಕ್ ತೆಗೆದುಕೊಳ್ಳುವುದಕ್ಕೆ ಭಾರತ ಮನಸು ಮಾಡಲಿಲ್ಲ. ಈ ಹಿಂದೆ ನರೇಂದ್ರ ಮೋದಿ ಅಮೇರಿಕಾ ಭೇಟಿಯ ವೇಳೆ, ದಾವೂದ್ ಬಗ್ಗೆ ಪ್ರಸ್ತಾಪವೆತ್ತಿ, ಆತನನ್ನು ಮಟ್ಟ ಹಾಕುವುದಕ್ಕೆ ಸಹಕರಿಸಿ ಎಂದು ಕೇಳಿದ್ದರು. ಇಲ್ಲೊಂದು ಪರಸ್ಪರ ಒಮ್ಮತದ ಅಭಿಪ್ರಾಯಗಳನ್ನು ಗಮನಿಸಬಹುದು. ಅದೇನೆಂದರೇ, ಕಾಯುವಷ್ಟು ಕಾದು ಈಗ ಐಸಿಸ್ ಉಗ್ರರನ್ನು ಮಟ್ಟ ಹಾಕುತ್ತಿರುವ ಅಮೇರಿಕಾ, ಐಸಿಸ್ ಉಗ್ರರನ್ನು ಸರ್ವನಾಶ ಮಾಡುವುದಕ್ಕೆ ಭಾರತದ ಬೆಂಬಲ ಕೇಳಿತ್ತು. ಅದಕ್ಕೆ ಭಾರತವೂ ಸಮ್ಮತಿಸಿತ್ತು. ಇದೇ ವೇಳೆ ದಾವೂದ್ ಮಟ್ಟ ಹಾಕುವ ಮಾತುಕತೆಯೂ ನಡೆದಿತ್ತು.
ಪರಮಪಾಪಿಯೊಬ್ಬ ಸೃಷ್ಟಿಸಿಕೊಂಡ ಕರಾಳ ಜಗತ್ತದು. ಇಲ್ಲಿ ಪಿತೂರಿ ಇದೆ, ಭಯವಿದೆ, ಸಾವಿದೆ. ಎಲ್ಲವೂ ಮಾಸ್ಟರ್ ಮೈಂಡ್ ಲೆಕ್ಕಾಚಾರ. ಜಿದ್ದಿಗೆ ಬಿದ್ದು ಮಚ್ಚು ಹಿಡಿದು ಬಡಿದಾಡುವ ಗಲ್ಲಿ ರೌಡಿಗಳು ಅವರಲ್ಲ. ತೀರಾ ಅಮಾಯಕರನ್ನೂ ಅವರು ಕಾಡುವುದಿಲ್ಲ. ಅವರಿಗೆ ಬೇಕಿರೋದು ಕರೆನ್ಸಿ, ಅರ್ಥಾತ್ ಹಫ್ತಾ. ಅದಕ್ಕಾಗಿ ಅವರು ಏನು ಬೇಕಾದ್ರೂ ಮಾಡುತ್ತಾರೆ. ಒಂದು ಸಮುದಾಯಕ್ಕೆ ಗಾಡ್ ಅನಿಸಿಕೊಳ್ಳುತ್ತಾರೆ. ಹುಟ್ಟಿ ಬೆಳೆದ ದೇಶಕ್ಕೆ ಬಾಂಬಿಟ್ಟು ಬಿಡುತ್ತಾರೆ. ಅಂಥವರಲ್ಲಿ ದಾವೂದ್ ಇಬ್ರಾಹೀಂ ಕೂಡ ಒಬ್ಬ. `ಅವನ್ಯಾರೋ, ಅದೆಲ್ಲೋ ಕುಂತು ಇಡೀ ದೇಶವನ್ನು ಆಪರೇಟ್ ಎನ್ನುವುದನ್ನು ತಮಾಷೆ ಅಂದುಕೊಂಡರೇ ಅದು ಮೂರ್ಖತನ. ಇರಬಹುದೇನೋ ಅಂದುಕೊಂಡರೇ, ಅದೇ ವಾಸ್ತವ..! ಕೆಟ್ಟ ಹುಳುಗಳನ್ನು ಹೊಸಕಿ ಹಾಕದಷ್ಟು ಅಸಮರ್ಥವಾಗಿದೆಯಾ ನಮ್ಮ ಆಡಳಿತ..?
ಒಂದಂತೂ ನಿಜ. ಮತ್ತೆ-ಮತ್ತೆ ದಾವೂದ್ ಇಬ್ರಾಹೀಂ ಕಾಡುತ್ತಿದ್ದಾನೆ. ಛೋಟಾ ಶಕೀಲ್ ಗುಡುಗುತ್ತಿದ್ದಾನೆ. ಟೈಗರ್ ಮೆಮೋನ್, ಛೋಟಾ ರಾಜನ್, ರವಿ ಪೂಜಾರಿ, ವಿಕ್ಕಿ ಶೆಟ್ಟಿ, ಹೆಬ್ಬೆಟ್ಟು ಮಂಜ..! ಒಬ್ಬರಾ..? ಇಬ್ಬರಾ..? ಅಷ್ಟಕ್ಕೂ ಇವರ್ಯಾರು ಕೈಗೆಟುಕದಷ್ಟು ದೂರದಲ್ಲಿದ್ದಾರಾ..? ಇವರನ್ನು ಹಿಡಿಯೋದು ಅಷ್ಟು ಕಷ್ಟಾನಾ..? ಹೋಗಲಿ, ಇವರೆಲ್ಲಾ ಲ್ಯಾಡೆನ್ ಗಿಂಥ ಬಲಿಷ್ಟರಾ..? ಒಬ್ಬನನ್ನ ಹೊಡೀಲೇಬೇಕು ಅಂದರೇ ಒಂದು ದೇಶದ ಮಟ್ಟಿಗೆ ಎಷ್ಟು ದಿನದ ಮಾತು. ಆದರೆ ಹಾಗಾಗುತ್ತಿಲ್ಲ ಯಾಕೆ..?. ದಾವೂದ್ ಡ್ರಗ್ಸ್ ಮಾಫಿಯಾ, ಕೆಮಿಕಲ್ ಮಾಫಿಯಾ, ವೆಪನ್ಸ್ ಮಾಫಿಯಾ, ಫಿಲ್ಮ್ ಮಾಫಿಯಾ- ಎಲ್ಲಾ ವಲಯಗಳಲ್ಲೂ ಅಕ್ರಮವಾಗಿ ಅಕ್ಷರಶಃ ಮೆರೆಯುತ್ತಿದ್ದಾನೆ. ಹಫ್ತಾಕ್ಕಾಗಿ ಹತ್ಯೆ, ಸ್ಮಗ್ಲಿಂಗ್, ಡ್ರಗ್ಸ್ ಮಾಫಿಯಾ, ಹೀಗೆ ಹಲವಾರು ಕ್ರಿಮಿನಲ್ ಚಟುವಟಿಕೆಗಳ ಜೊತೆಗೆ ಫಿಲ್ಮ್ ಗಳಿಗೆ ಫೈನಾನ್ಸ್ ಮಾಡುತ್ತಾನೆ. ಅದೆಷ್ಟು ತಿಪ್ಪರಲಾಗವೋ ಗೊತ್ತಿಲ್ಲ, ದಾವೂದ್ ನೆರಳೂ ಹಿಡಿಯುವುದಕ್ಕಾಗದೇ ಪೇಚಾಡುತ್ತಿದೆ ನಮ್ಮ ದೇಶ.
`ಡಿ’ಕಂಪನಿ, ನಿಜಕ್ಕೂ ಭಾರತದ ಪಾಲಿಗೆ ಡೇಂಜರಸ್ ಕಂಪನಿ. ಅದೇ ದಾವೂದ್ ಇಬ್ರಾಹೀಂನ ಹಳೇ ಫೋಟೋ ಇಟ್ಟುಕೊಂಡು, ದಾವೂದ್ ಇದ್ದಾನಾ..? ಅಂತ ಪಾಕಿಸ್ತಾನವನ್ನ ಗುಟ್ಟಿನಲ್ಲಿ ಕೇಳುವ ಛಾಳಿಯನ್ನು ನಮ್ಮ ದೇಶ ಬಿಟ್ಟಿರಲಿಲ್ಲ. ಅದೆಷ್ಟು ಪ್ರೈಂ ಮಿನಿಸ್ಟ್ರು ಬಂದ್ರೂ ದಾವೂದ್ ನಂಥ ಪಾತಕಿಗಳ ಸದ್ದಡಗಿಸುವುದು ಸಾಧ್ಯವಿಲ್ಲದ ಮಾತಾಗಿತ್ತು.. ಅಸಲಿಗೆ ಈಗವನು ಹೇಗಿದ್ದಾನೆ ಎನ್ನುವುದೇ ಯಾರಿಗೂ ಗೊತ್ತಿಲ್ಲ..? ಪಾಕಿಸ್ತಾನವನ್ನು ಬಿಟ್ಟು..!! ದಾವೂದ್ ಇಬ್ರಾಹೀಂ ಈಗ ಕೇವಲ ಭೂಗತ ಪಾತಕಿಯಾಗುಳಿದಿಲ್ಲ. ಅವನೀಗ ಭಯೋತ್ಪಾದಕ. ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಟೆರ್ರರಿಸ್ಟ್. ಸ್ಮಗ್ಲಿಂಗ್ ಮಾಡುತ್ತಿದ್ದ ಹುಡುಗ, ಮುಂದೊಂದು ದಿನ ಮುಸಲ್ಮಾನರ ನಾಯಕನಾಗಲು ಹೊರಟಿದ್ದ. ಭಾರತದಲ್ಲಿ ಮುಸಲ್ಮಾನರಿಗೆ ಉಳಿಗಾಲವಿಲ್ಲ, ಮುಸ್ಲೀಮರನ್ನು ಕಂಡರೇ ಭಾರತ ನಡುಗಬೇಕು ಅಂತ ನಿರ್ಧಾರಕ್ಕೆ ಬಂದಿದ್ದ. ಬಾಬ್ರಿ ಮಸೀದಿ ಕೆಡವಿದ್ದನ್ನೇ ಮುಂದಿಟ್ಟುಕೊಂಡು ಮುಂಬೈಗೆ ಅನಾಮತ್ತಾಗಿ ಬಾಂಬಿಟ್ಟು ಸಾವಿರಾರು ಜನರ ಸಾವಿಗೆ ಕಾರಣನಾದ. ಅವತ್ತೇ ಕೊನೆ, ದಾವೂದ್ ಭೂಗತನಾಗಿದ್ದ.
2011ರ ಪೋರ್ಬ್ಸ್ ವರದಿಯ ಪ್ರಕಾರ ಜಗತ್ತಿಗೆ ಬೇಕಾಗಿರುವ ಟಾಪ್ ಟೆನ್ ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ದಾವೂದ್ ಮೂರನೇ ಸ್ಥಾನದಲ್ಲಿದ್ದಾನೆ. ಸಧ್ಯ ಆತ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಹಾಗೂ ಖೋಟಾ ನೋಟು ಚಲಾವಣೆಯನ್ನು ತೆರಪಿಲ್ಲದೇ ಮುಂದುವರಿಸಿದ್ದಾನೆ. ಆಯಾ ದೇಶದ ಕರೆನ್ಸಿಯ ಪಡಿಯಚ್ಚಿನಂತಿರುವ ಖೋಟಾ ನೋಟುಗಳನ್ನು ತಯಾರಿಸಿ, ಆಯಾ ದೇಶಗಳ ಹದ್ದಿನಕಣ್ಣನ್ನು ತಪ್ಪಿಸಿ ಮನಿ ಟ್ರಾನ್ಸ್ ಫರ್ ಮಾಡಿಸುತ್ತಿರುವ ಈತನ ಅನ್ಅಫೀಶಿಯಲ್ ಆಪರೇಶನ್ಗೆ `ಹವಾಲಾ’ ಅಂತ ಹೆಸರಿಟ್ಟುಕೊಂಡಿದ್ದಾನೆ. ದಶಕಗಳ ಹಿಂದೆ `ಏನೋ ಮಾಡಿಕೊಂಡು ಹೋಗಲಿ, ನಮಗೂ ಪ್ರಾಫಿಟ್ಟಿದೆಯಲ್ಲಾ…! ಅಂತ ಭಾರತ, ದಾವೂದ್ ನನ್ನು ಅವನ ಪಾಡಿಗೆ ಬೆಳೆಯಲು ಬಿಟ್ಟ ತಪ್ಪಿಗೆ, ಅದರ ಒಡಲಿಗೆ ಬಾಂಬಿಟ್ಟು, ತಾನು ನಿಯ್ಯತ್ತಿನ ಮನುಷ್ಯ ಅಲ್ಲ ಎನ್ನುವುದನ್ನು ಸಾಬೀತು ಮಾಡಿದ್ದ. ಅವತ್ತು ಯುಎಸ್ಎ ಹಾಗೂ ಭಾರತ ಜಂಟಿಯಾಗಿ ಇವನನ್ನು ಗ್ಲೋಬಲ್ ಟೆರ್ರರಿಸ್ಟ್ ಎಂದು ಘೋಷಿಸಿತ್ತು. ಅಂದು ಡೆಪ್ಯೂಟಿ ಪ್ರೈಂ ಮಿನಿಸ್ಟರ್ ಆಗಿದ್ದ ಎಲ್ ಕೆ ಅಡ್ವಾಣಿ, ಇವನನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಿದ್ದರು. ಆದರೆ ಮುಂಬೈ ಬ್ಲಾಸ್ಟ್ ನಡೆದು 23 ವರ್ಷ ಕಳೆದರೂ ದಾವೂದ್ ಇವರ ಕೈಗೆ ಸಿಕ್ಕಿಲ್ಲ. `ಏನ್ರಪ್ಪಾ…. ಇದು ಎಂದು ಕೇಳಿದ್ರೆ, ಪಕ್ಕದ ಪಾಕಿಸ್ತಾನದತ್ತ ಅಸಹಾಯಕರಾಗಿ ಕೈ ತೋರಿಸುತ್ತಿತ್ತು ಭಾರತ ಸರ್ಕಾರ. ಆದರೆ ನರೆಂದ್ರ ಮೋದಿ ಇವೆಲ್ಲವನ್ನು ಬದಿಗಿಟ್ಟು ದಾವೂದ್ ಹೆಣ ಕೆಡವಲು ಮುಂದಾಗಿದ್ದಾರೆ. ಜೀವಂತ ಸೆರೆಹಿಡಿಯುವ ಪ್ರಯತ್ನವೂ ನಡೆಯುತ್ತಿದೆ.
ದಾವೂದ್ ನ ವಯಸ್ಸನ್ನು ಗಣನೆಗೆ ತೆಗೆದುಕೊಂಡರೇ ಈಗ ಬರೋಬ್ಬರಿ ಅರವತ್ತು ವರ್ಷ ದಾಟಿರಬಹುದು. ಅವನಿಗಿರದ ದುಶ್ಚಟಗಳಿಲ್ಲ. ಹೆಣ್ಣು, ಹೊನ್ನು, ಮಣ್ಣನ್ನು ಅಕ್ಷರಶಃ ಅನುಭವಿಸಿದ್ದಾನೆ. ವಿಪರೀತ ಸಿಗರೇಟ್ ಸೇದುತ್ತಿದ್ದ. ಕುಡಿತ ಫ್ಯಾಶನ್ ಆಗಿತ್ತು. ಡ್ರಗ್ಸ್ ಚಟಗಳಿತ್ತು. ಇಷ್ಟೆಲ್ಲಾ ಘನಂಧಾರಿ ಅಭ್ಯಾಸಗಳಿದ್ದ ದಾವೂದ್ ಈಗಲೂ ಬದುಕಿದ್ದರೇ ಅದೇ ದೊಡ್ಡ ವಿಚಾರ. ಅಕಸ್ಮಾತ್ ಬದುಕಿದ್ದರೇ ಅದು ಪಾಕಿಸ್ತಾನಕ್ಕೆ ಮಾತ್ರ ಗೊತ್ತಿರುತ್ತದೆ ಎಂದೆಲ್ಲಾ ಅನುಮಾನವಿತ್ತು. ಆದರೆ ಆತ ಬದುಕಿರುವುದು ಖಚಿತವಾಗಿದ್ದೇ 2014ರಲ್ಲಿ ಅವನ ಅಡಗುದಾಣ, ಕರಾಚಿಯ ಬಂಗಲೆಯೊಂದರ ಮೇಲೆ ಅಮೇರಿಕಾ, ಭಾರತದ ಮಿಲಿಟರಿ ಪಡೆ ದಾಳಿ ನಡೆಸಿತ್ತು. ಆದರೆ ಕೆಲವೇ ಘಂಟೆಗಳ ಮೊದಲು ಪಾಕಿಸ್ತಾನದ ಬೇಹುಗಾರಿಕೆ ಪಡೆ ಐಎಎಸ್ ನಿಂದ ಮಾಹಿತಿ ಪಡೆದ ದಾವೂದ್ ಅಲ್ಲಿಂದ ಪರಾರಿಯಾಗಿದ್ದ. ಆಗವನು ಅಫ್ಘಾನಿಸ್ತಾನದ ಗಡಿಗಳಲ್ಲಿ ಅಥವಾ ಪಾಕಿಸ್ತಾನದ ಆಯಕಟ್ಟಿನ ಜಾಗೆಗಳಲ್ಲಿ ತಲೆಮರೆಸಿಕೊಂಡಿರಬಹುದು ಎಂಬ ಅನುಮಾನವಿತ್ತು.
ಅಷ್ಟಕ್ಕೂ ಅವ್ನೇನು ಸಾಮಾನ್ಯ ಡಾನ್ ಏನಲ್ಲ. ಅವನು ಬದುಕಿರಲಿ, ಇಲ್ಲದಿರಲಿ.. ಸೌತ್ ಏಷ್ಯಾ, ಮಿಡ್ಡಲ್ ಈಸ್ಟ್, ಆಫ್ರಿಕಾ, ಯು.ಕೆ, ವೆಸ್ಟರ್ನ್ ಯೂರೋಪ್- ಮುಂತಾದ ಕಡೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾನೆ. 1990ರ ಹೊತ್ತಿಗೇ ಅಲ್ ಖೈದಾ ಜೊತೆ ನಂಟು ಹೊಂದಿದ್ದ. ಸತ್ತಿರುವ ಒಸಾಮಾ ಬಿನ್ ಲ್ಯಾಡೆನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅವನನ್ನು ಅಫ್ ಘಾನಿಸ್ತಾನದಲ್ಲಿ ಆಗಾಗ ಭೇಟಿಯಾಗುತ್ತಿದ್ದ. ಬಾಬ್ರಿ ಮಸೀದಿಯ ಧ್ವಂಸಕ್ಕೆ ಆತ ಮುಂಬೈಗೆ ಬಾಂಬಿಟ್ಟು ರಿವೇಂಜ್ ಹೇಳಲಿಲ್ಲ. ಆತನ ಜೊತೆಗಿದ್ದ ರಕ್ಕಸ ಅಲ್ ಖೈದಾದ ಮತಾಂಧರಿಗೆ ಭಾರತವನ್ನು ಸುಡಲೇಬೇಕೆನ್ನುವ ದರ್ದಿತ್ತು. ಅವರೇ ಹೇಳುವ ಪ್ರಕಾರ ಅದು ಜಿಹಾದ್. ಅದಕ್ಕೆ ದಾವೂದ್ ಎಂಬ ಅಸ್ತ್ರವನ್ನು ಎನ್ ಕ್ಯಾಶ್ ಮಾಡಿಕೊಂಡಿದ್ದರು. ದಾವೂದ್ ಬಾಬ್ರಿ ಮಸೀದಿ ದ್ವಂಸಕ್ಕೆ ರಿವೇಂಜ್ ಹೇಳುವ ಮೂಲಕ ದೇಶದ ಅಸಂಖ್ಯಾ ಮುಸ್ಲೀಮರ ರೋಲ್ ಮಾಡೆಲ್ ಆಗಲು ಹವಣಿಸಿದ್ದ. ಆ ನಿಟ್ಟಿನಲ್ಲಿ ಅಲ್ಪಮಟ್ಟಿಗೆ ಯಶಸ್ವಿಯೂ ಆದ. ಸತ್ತವರಲ್ಲಿ ಮುಸ್ಲೀಮರೂ ಇದ್ದರೂ ಎಂಬ ವಾಸ್ತವ ಅವರಿಗೆ ಬೇಕಿರಲಿಲ್ಲ. ಯಾರು ಸತ್ತರೇನು..? ಭಾರತದ ನೆಲದಲ್ಲಿ ನೆತ್ತರು ಹರಿಯಬೇಕಷ್ಟೇ..! ರಿವೇಂಜ್ ಹೇಳಲು ಹೊರಟ ದಾವೂದ್, ಅನಾಮತ್ತಾಗಿ ಮುಂಬೈನಲ್ಲಿ ಬಾಂಬಿಟ್ಟುಬಿಟ್ಟಿದ್ದ.
ಅವತ್ತೇ `ಡಿ’ ಕಂಪನಿಯಿಂದ ಛೋಟಾ ರಾಜನ್ ಹಾಗೂ ಶರದ್ ಶೆಟ್ಟಿ ಹೊರಬಂದಿದ್ದರು. ಆಮೇಲೆ ಶರದ್ ಶೆಟ್ಟಿ, ಛೋಟಾ ರಾಜನ್ ದುಬೈನಲ್ಲಿ ಕುಂತು ಇಲ್ಲಿಗಲ್ ದಂಧೆಗಳನ್ನು ಪೋಷಿಸತೊಡಗಿದರು. ಭಾರತದ ಗುಪ್ತಚರ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡು, ದಾವೂದ್ ನಡೆಸುತ್ತಿದ್ದ ಅವ್ಯವಹಾರ, ಸ್ಕೆಚ್ಚು, ಡೀಲುಗಳ ಮಾಹಿತಿಯನ್ನು ಒದಗಿಸತೊಡಗಿದ್ದರು. ಇದರ ಪರಿಣಾಮ ಶರದ್ ಶೆಟ್ಟಿಯನ್ನು ದುಬೈನ ಗಾಲ್ಫ್ ಕ್ಲಬ್ ನಲ್ಲಿ ಶೂಟ್ ಮಾಡಿ ಕೊಲ್ಲಲಾಯಿತು. ದಾವೂದ್ ತನ್ನನ್ನು ಬಿಡಲ್ಲ ಅಂತ ಹೆದರಿದ ಛೋಟಾ ರಾಜನ್ ಅಲ್ಲಿಂದ ಬ್ಯಾಂಕಾಕ್ ಗೆ ಹೋದ. ಗೆಳೆಯ ರೋಹಿತ್ ವರ್ಮ ಅವನಿಗೆ ಆಶ್ರಯ ಕೊಟ್ಟ. ಆದರೆ ದಾವೂದ್ ಇದೇ ಶರದ್ ಶೆಟ್ಟಿಯ ಆಪ್ತ ವಿನೋದ್ ಶೆಟ್ಟಿಯನ್ನು ಬೆದರಿಸಿ ಛೋಟಾ ರಾಜನ್ ಅಡಗುದಾಣವನ್ನ ಪತ್ತೆ ಹಚ್ಚಿದ. ಅವನನ್ನು ಕೊಲ್ಲಲು ಛೋಟಾ ಶಕೀಲ್ ಮೂಲಕ ರಶೀದ್ ಮಲಬಾರಿಗೆ ಡೀಲ್ ಒಪ್ಪಿಸಿದ್ದ. ಇಸವಿ 2000ದಂದು ಬ್ಯಾಂಕಾಕ್ ನಲ್ಲಿ ನಡೆದ ಶೂಟೌಟ್ ನಲ್ಲಿ ರೋಹಿತ್ ವರ್ಮ ಸತ್ತರೇ, ಗುಂಡೇಟು ತಿಂದ ರಾಜನ್ ತಪ್ಪಿಸಿಕೊಂಡಿದ್ದ.
ಹಾಗೆಯೇ ದಾವೂದ್ ಮೇಲೂ ಅನೇಕ ಅಟ್ಯಾಕ್ ಗಳು ನಡೆದಿವೆ. ಆಗೆಲ್ಲಾ ಕೂದಲಂತರದಲ್ಲಿ ಬಚಾವಾಗಿದ್ದಾನೆ. ಈ ಪಾಪಕೂಪದಲ್ಲಿ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾನೆ. ಅಪಾರ ಸ್ನೇಹಿತರು, ಶಿಷ್ಯರನ್ನು ಬೆಳೆಸಿದ್ದಾನೆ. ಕರಾಚಿಯಲ್ಲಿ ಅದೊಮ್ಮೆ ಚೋಟಾ ರಾಜನ್ ದಾವೂದ್ ಗೆ ಸ್ಕೆಚ್ ಇಟ್ಟಿದ್ದ. ದಾವೂದ್ ಕರಾಚಿಯ ತನ್ನ ಅಡಗುದಾಣದ ಸಮೀಪವೇ ಇರುವ ದರ್ಗಾಕ್ಕೆ ಭೇಟಿ ಕೊಡುತ್ತಾನೆ ಎನ್ನುವುದು ಅಲ್ಲಿಗೆ ಹೋಗಿದ್ದ ಶಾರ್ಪ್ ಶೂಟರ್ಗಳ ತಂಡಕ್ಕೆ ಸಿಕ್ಕಿಯಾಗಿದ್ದ ವಿಚಾರ. ಹಂತಕರು ಬೇರೇನನ್ನು ಯೋಚಿಸಲು ಹೋಗಲಿಲ್ಲ. ಸ್ಪಾಟ್ ಫಿಕ್ಸ್ ಆಗಿತ್ತು. ಆಪರೇಷನ್ ಕರಾಚಿ, ದರ್ಗಾದಲ್ಲೇ ಸಮಾಪ್ತಿ ಅಗೋ ಸಿದ್ದತೆ ನಡೆದಿತ್ತು. ಹಂತಕರು ಸರ್ವಸನ್ನದ್ಧರಾಗಿ ದಾವೂದ್ ನನ್ನು ಬಲಿಹಾಕಲು ಕಾದುಕುಂತರು. ಆದರೆ ಅಲ್ಲಿಗೆ ದಾವೂದ್ ಬರಲಿಲ್ಲ. ಆವತ್ತು ಮಾತ್ರವಲ್ಲ, ಮತ್ಯಾವತ್ತು ದಾವೂದ್ ಆ ದರ್ಗಾಕ್ಕೆ ಕಾಲಿಡಲಿಲ್ಲ. ಸಾವಿನ ವಾಸನೆ ಅದಾಗಲೇ ಅವನ ಮೂಗಿಗೆ ಬಡಿದಿತ್ತು, ಹುಷಾರಾಗಿದ್ದ..! ಬಹುಶಃ ಚೋಟಾ ರಾಜನ್ ಬದುಕಿರಬಾರದು ಎಂದು ದಾವೂದ್ ನಿರ್ಧರಿಸಿದ್ದು ಆಗಲೇ…!. ಆ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಿದ್ದ. ಈಗಲೂ ಮಾಡುತ್ತಿದ್ದಾನೆ. ಇವತ್ತು ಛೋಟಾ ರಾಜನ್ ಅರೆಸ್ಟ್ ಆಗಿ ಭಾರತದ ಜೈಲಿನಲ್ಲಿದ್ದಾನೆ. ಅವತ್ತು ಒಬ್ಬ ಲ್ಯಾಡೆನ್ ನನ್ನು ಪಾಕಿಸ್ತಾನಕ್ಕೆ ನುಗ್ಗಿ ಹತ್ಯೆಗೈದಿದ್ದ ಅಮೇರಿಕಾ, ದಾವೂದ್ ಬಗ್ಗೆ ಅಷ್ಟೇನೂ ಆಸ್ಥೆ ತೋರಿಸಲಿಲ್ಲ. ಭಾರತಕ್ಕೆ ಪಾಕಿಸ್ತಾನದ ಉಗ್ರಕೋಟೆಯನ್ನು ಭೇದಿಸಿ, ದಾವೂದ್ ನನ್ನು ಹಿಡಿಯೋ ಬಾಹ್ಯ ಶಕ್ತಿಯಿದ್ದರೂ, ನೈತಿಕವಾಗಿ ದುರ್ಬಲವಾಗಿತ್ತು.
ಇನ್ನು ಆತನ ವೈಯುಕ್ತಿಕ ವಿಚಾರಕ್ಕೆ ಬರುವುದಾದರೇ, ಚಿತ್ರಾ ಹೆಸರಿನ ಅಧಿಕೃತ ಹೆಂಡತಿ, ಮೆಹ್ರುಕ್ ಎಂಬ ಅಧಿಕೃತ ಮಗಳಿದ್ದಾಳೆ. ಅವನ ಅನಧಿಕೃತ ಸಂಬಂಧಗಳು, ಕೆಲ ಬಾಲಿವುಡ್ ನಟಿಮಣಿಯರ ವೈಯುಕ್ತಿಕ ಹಿತಾಸಕ್ತಿಗಳು ಬೇಕಿಲ್ಲದ ಸಮಾಚಾರ..! ದಾವೂದ್, ಕೆಲ ವರ್ಷಗಳ ಹಿಂದೆ ತನ್ನ ಮಗಳನ್ನು ಪಾಕಿಸ್ತಾನದ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಮಗನಿಗೆ ನಿಖಾ ಮಾಡಿಕೊಟ್ಟಿದ್ದ. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ರನ್ನು ಭೇಟಿಯಾಗಿದ್ದನಂತೆ. ಅಷ್ಟೇ ಮತ್ಯಾವ ಸಮಾರಂಭದಲ್ಲಾಗಲೀ, ಕಾರ್ಯಕ್ರಮದಲ್ಲಾಗಲೀ, ದಾವೂದ್ ಹೆಸರೇ ಪ್ರಸ್ತಾಪವಾಗಲಿಲ್ಲ. ಆತ ಮತ್ತೆಲ್ಲೂ ಕಾಣಿಸಿಕೊಂಡೂ ಇಲ್ಲ.
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!