ಮುಂಬೈ : ಪುತ್ರಿ ತನ್ನ ಅಪ್ರಾಪ್ತ ಗೆಳೆಯನೊಂದಿಗೆ ಸೇರಿ ತಂದೆಯನ್ನೇ ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿನಿತ್ ರೆಬೆಲ್ಲೋ ಮೃತ ತಂದೆ. ಆರಾಧ್ಯಾ ಜಿತೇಂದ್ರ ಪಾಟೀಲ್ ಅಲಿಯಾಸ್ ರಿಯಾ ಆರೋಪಿ. ಈಕೆ ರೆಬೆಲ್ಲೋ ದತ್ತು ಪುತ್ರಿ. ನವೆಂಬರ್ 27 ರಂದು ತಂದೆಯನ್ನ ಚಾಕುವಿನಿಂದ ಇರಿದಿದ್ದಾಳೆ. ಆದರೂ ಬದುಕಿದ್ದರಿಂದ ಸೊಳ್ಳೆ ನಾಶಕ ಸಿಂಪಡಿಸಿ,ಸಾವನ್ನಪ್ಪುತ್ತಿದ್ದಂತೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎರಡು ಬ್ಯಾಗ್ ಮತ್ತು ಒಂದು ಸೂಟ್ಕೇಸಿಗೆ ತುಂಬಿ ಮುಂಬೈನ ಮಿಥಿ ನದಿಗೆ ಎಸೆದಿದ್ದಾರೆ.
ನದಿಯಲ್ಲಿ ಮನುಷ್ಯನ ದೇಹದ ಭಾಗಗಳಿದ್ದ ಸೂಟ್ ಕೇಸ್ ಸಿಕ್ಕಿತ್ತು.
ಅದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು, ತನಿಖೆ ವೇಳೆ ಕೃತ್ಯ ಬೆಳಕಿಗೆ ಬಂದಿದೆ.
ಅಪ್ರಾಪ್ತನೊಂದಿಗಿನ ತನ್ನ ಸಂಬಂಧವನ್ನ ಒಪ್ಪದ ತಂದೆಯೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತಿದ್ದರಿಂದ ಕೃತ್ಯವೆಸಗರಿರುವುದಾಗಿ ರಿಯಾ ಒಪ್ಪಿಕೊಂಡಿದ್ದಾಳೆ. ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು, ಅದೇಕಾರಣಕ್ಕೆ ನಾನು ಗೆಳೆಯನೊಂದಿಗೆ ಸೇರಿ ಅವರನ್ನು ಕೊಂದೆ ಎಂದು ಆಕೆ ಹೇಳಿಕೊಂಡಿದ್ದಾಳೆ.