ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳಾ ಸುರಕ್ಷತೆ ಬಗ್ಗೆ ಎಲ್ಲಾ ಕಡೆಗಳಲ್ಲಿ ಚರ್ಚೆ ನಡೀತಾ ಇದೆ. ಬೆಂಗಳೂರು ಪೊಲೀಸರು ಮಹಿಳಾ ಸುರಕ್ಷತೆ ಕುರಿತು ಹೆಚ್ಚಿನ ಗಮನಹರಿಸಿ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ. ಅಂತೆಯೇ ಡಿಸಿಪಿಯೊಬ್ಬರು ಮಾಡಿದ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮಹಿಳೆಯರ ರಕ್ಷಣೆ ವಿಚಾರದಲ್ಲಿ ರಿಯಾಲಿಟಿ ಚೆಕ್ ಮಾಡಿಸಿದ್ದಾರೆ.
ಯುಬಿ ಸಿಟಿಯಲ್ಲಿ ತಡ ರಾತ್ರಿ ಊಟಕ್ಕೆಂದು ಮೂವರು ಯುವತಿಯರು ಬಂದಿದ್ದರು. ರೌಂಡ್ಸ್ ಹೊರಟಿದ್ದ ಡಿಸಿಪಿ ಸಹಾಯ ಬೇಕಿದ್ದಲ್ಲಿ 100ಗೆ ಡಯಲ್ ಮಾಡುವಂತೆ ತಿಳಿಸಿದ್ದಾರೆ. ಆಗ ಯುವತಿಯರು ಹರಿಯಾಣದಲ್ಲಿ ಪೊಲೀಸರಿಗೆ ಕರೆ ಮಾಡಿದ್ದೆವು. ಪ್ರಯೋಜನವಾಗಿಲ್ಲ ಎಂದಿದ್ದು, ಡಿಸಿಪಿ ಅದು ಹರಿಯಾಣ, ಇದು ಬೆಂಗಳೂರು ಇಲ್ಲೊಮ್ಮೆ ಪ್ರಯತ್ನಿಸಿ ಎಂದಿದ್ದಾರೆ.
ಯುವತಿಯರು ಕರೆಮಾಡಿದಾಗ 100 ಎಂಗೇಜ್ ಆಗಿತ್ತು. ಬಳಿಕ ತಮ್ಮ ಗನ್ ಮ್ಯಾನ್ ಮೊಬೈಲಿನಲ್ಲಿ ಕರೆ ಮಾಡಿಸಿ, ಮಾತನಾಡಿಸುತ್ತಿದ್ದಂತೆ ಲೊಕೇಷನ್ ಪಡೆದ ಡಯಲ್ 100 ಸಿಬ್ಬಂದಿ ಕೇವಲ ಮೂರು ನಿಮಿಷಕ್ಕೆ ಯುವತಿಯರಿದ್ದ ಸ್ಥಳಕ್ಕೆ ಬಂದಿದ್ದಾರೆ.
ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಕಾರ್ಯವೈಖರಿಗೆ ಯುವತಿಯರು ಫುಲ್ ಖುಷ್!
Date: