ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಕೊಲೆ, ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕೊಲೆ ಹೀಗೆ ಸಾಲು ಸಾಲು ದೌರ್ಜನ್ಯಗಳ ಬೆನ್ನಲ್ಲೇ ಮತ್ತೊಂದು ಅಮಾನವೀಯ ಘಟನೆಯೊಂದು ನಡೆದಿದೆ. ಮದುವೆ ತೆರೆಳಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.
ಅಪ್ರಾಪ್ತ ಬಾಲಕಿಯನ್ನು ಮದುವೆ ಸಭಾಂಗಣದ ಬಾತ್ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
ಮದುವೆ ಸಮಾರಂಭಕ್ಕೆ ಬಂದಿದ್ದ 6 ವರ್ಷದ ಬಾಲಕಿಯನ್ನು ಅದೇ ಸಭಾಂಗಣದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬಾತ್ ರೂಮಿನೊಳಗೆ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿಯನ್ನು ಹುಡುಕುತ್ತಾ ಆಕೆಯ ತಾಯಿ ಸಭಾಂಗಣದ ಮೊದಲ ಮಹಡಿಗೆ ಬಂದಾಗ ಎದುರಾದ ಬಾಲಕಿ ತಾಯಿಯ ಬಳಿ ನಡೆದ ವಿಷಯವನ್ನು ಹೇಳಿದ್ದಾಳೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಮದುವೆ ಸಭಾಂಗಣದಲ್ಲಿ ಬಾತ್ರೂಮ್ಗೆ ಎಳ್ಕೊಂಡ್ ಹೋಗಿ ಬಾಲಕಿ ಮೇಲೆ ರೇಪ್
Date: