ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುರಹಂಕಾರಿ. ಅವರು ಪಕ್ಷಕ್ಕೆ ಶನಿಯಿದ್ದಂತೆ. ಹಾಗಾಗಿ ಪಕ್ಷ ಸೋತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮತ್ತೊಮ್ಮೆ ಸಿದ್ದು ವಿರುದ್ಧ ಗುಡುಗಿದ್ದಾರೆ.
ಉಪು ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಕಾಂಗ್ರೆಸ್ಸಿನವರಿಗೆ ಭವಿಷ್ಯವನ್ನು ಈ ಮೊದಲೇ ಹೇಳಿದ್ದೇನೆ. ನೀವು ಇದೇ ರೀತಿ ದುರಂಹಕಾರದಿಂದ ವರ್ತಿಸಿದರೆ ಬಿಜೆಪಿಯವರನ್ನು ತಡೆಯಲು ಆಗುವುದಿಲ್ಲ ಎಂದು ಕೈ ಮುಗಿದು ಪ್ರಾರ್ಥನೆ ಮಾಡಿದೆ. ಆದರೆ ನನ್ನ ಪಕ್ಷದವರಿಗೆ ಇನ್ನೂ ಅರ್ಥವಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುರಹಂಕಾರಿಯಾಗಿದ್ದು, ಅವರು ಪಕ್ಷಕ್ಕೆ ಶನಿ ಇದ್ದಂತೆ. ಈ ಕಾರಣದಿಂದಲೇ ಪಕ್ಷ ಹೀನಾಯವಾಗಿ ಸೋತಿದೆ ಎಂದು ಹರಿಹಾಯ್ದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಳಪೆ ಕೆಲಸ ಮಾಡಿದ್ದು, ಮುಂದಿನ ಕೆಪಿಸಿಸಿ ಅಧ್ಯಕ್ಷರಾಗಲು ಡಿ ಕೆ ಶಿವಕುಮಾರ್ ಸೂಕ್ತ ವ್ಯಕ್ತಿ. ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಇದು ನನ್ನ ಅನುಭವದ ಮಾತು. ಅವರೊಬ್ಬ ಧೈರ್ಯವಂತ ಅನ್ನೋದನ್ನು ನಾನು ನೋಡಿದ್ದೇನೆ ಎಂದು ಹೊಗಳಿದರು. ಶಿವಕುಮಾರ್ ಯಾರಿಗೂ ಹೆದರದೆ ಪಕ್ಷದ ಕೆಲಸ ಮಾಡುತ್ತಾರೆ. ಅವರು ಕೆಪಿಸಿಸಿ ಅಧ್ಯಕ್ಷರಾದರೆ ಪಕ್ಷ ಉಳಿಯಲಿದೆ ಎಂದರು.