ಇಂಗ್ಲೆಂಡ್ ಒಂದು ಕಾಲದಲ್ಲಿ ನಮ್ಮನ್ನು ಅದರ ಅಧೀನದಲ್ಲಿಟ್ಟುಕೊಂಡಿದ್ದು, ಆಳಿದ್ದು ಇತಿಹಾಸ. ಇದೀಗ ಅದೇ ಬ್ರಿಟೀಷರು ನಮಗೆ ತಲೆಬಾಗುತ್ತಿದ್ದಾರೆ. ಆ ಮಟ್ಟಿಗೆ ನಾವು ಬೆಳೆದಿದ್ದೇವೆ.
ಇದೀಗ ಭಾರತೀಯರನ್ನು ಹೊಂದಿರುವ ಲಂಡನ್ ಮತ್ತು ಯುಕೆ ಅದೃಷ್ಟಶಾಲಿ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಡಿಸೆಂಬರ್ 12ರಂದು ಲಂಡನ್ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಭಾರತೀಯ ಸಮುದಾಯದ ಮತದಾರರನ್ನು ಸೆಳೆಯುವ ಉದ್ದೇಶದಿಂದ ಅಲ್ಲಿನ ಪ್ರಸಿದ್ಧ ಹಿಂದೂ ದೇವಾಲಯಕ್ಕೆ ಜಾನ್ಸನ್ ತಮ್ಮ ಗೆಳತಿ ಕ್ಯಾರಿ ಸೈಮಂಡ್ಸ್ ಅವರೊಂದಿಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಬೋರಿಸ್ ಜಾನ್ಸನ್ ಭಾರತೀಯರನ್ನು ಹೊಂದಿರುವ ಲಂಡನ್ ಮತ್ತು ಯುಕೆ ಅದೃಷ್ಟಶಾಲಿ. ಪ್ರಧಾನಿ ಮೋದಿಯವರು ಹೊಸ ಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದು, ಅವರ ಕನಸಿನ `ಹೊಸ ಭಾರತ’ ನಿರ್ಮಾಣದಲ್ಲಿ ತಾವು ಪಾಲುದಾರರಾಗುವುದಾಗಿ ಬ್ರಿಟನ್ ಭರವಸೆ ನೀಡಿದ್ದಾರೆ. ಭಾರತೀಯರು ಯಾವಾಗಲೂ ಗೆಲುವಿನ ಕಡೆ ಇರುತ್ತಾರೆ ಎಂದು ಹೇಳಿದ್ದಾರೆ.