ಭಾರತದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ವೋಡಾಫೋನ್ – ಐಡಿಯಾ ಕಂಪೆನಿ ಭಾರೀ ನಷ್ಟದಲ್ಲಿದ್ದು, ಮುಚ್ಚುವ ಆತಂಕದ ಸ್ಥಿತಿ ತಲುಪಿದೆ.
ಸುಪ್ರೀಂಕೋರ್ಟ್ ಕಂಪನಿಗೆ ದೂರ ಸಂಪರ್ಕ ಇಲಾಖೆಗೆ ಬಾಕಿ ಇರುವ ಮೊತ್ತವನ್ನು ಪಾವತಿಸಬೇಕೆಂದು ಹೇಳಿದೆ. ಆದರೆ ಇದಕ್ಕೆ ಕಂಪೆನಿ ಅಧ್ಯಕ್ಷ ಕುಮಾರ ಬಂಗಲಮ್ ಬಿರ್ಲಾ ತೀರ್ವ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೋಡಾಫೋನ್ – ಐಡಿಯಾ ಕಂಪೆನಿ 1.17 ಲಕ್ಷ ಕೋಟಿ ರೂ ಸಾಲದ ಹೊರೆಯಲ್ಲಿದೆ. ದೂರ ಸಂಪರ್ಕ ಇಲಾಖೆಗೆ ಸಂಸ್ಥೆ 53,038 ಕೋಟಿ ರೂ ನೀಡಬೇಕಾಗಿದ್ದು, ಈ ಬಾಕಿ ಮೊತ್ತದಿಂದ ಸರಕಾರ ವಿನಾಯಿತಿ ನೀಡದಿದ್ದರೆ ಕಂಪನಿಯನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.