ಆ ಯುವಕ ಮತ್ತು ಯುವತಿ ಆತ್ಮೀಯ ಸ್ನೇಹಿತರಂತೆ. ಕಾಲೇಜು ವಿದ್ಯಾರ್ಥಿಗಳಾದ ಅವರಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಯುವತಿ ಅಸ್ವಸ್ಥಳಾಗಿದ್ದಂತೆ ಕಂಡುಬಂದಿದೆ..! ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಅದನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿದ್ದಾರೆ. ಆಗ ಆ ಯುವಕ ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಅನುಮಾನಗೊಂಡ ಸಾರ್ವಜನಿಕರು ಕಾರನ್ನು ತಡೆ ಹಿಡಿದಿದ್ದಾರೆ. ಬಳಿಕ ತಡಬಡಾಯಿಸಿ ಮಾತನಾಡಿದ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಹೀಗೆ ಯುವಕನೊಬ್ಬನ ಜೊತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದು ಶಂಕೆಗೊಂಡ ಸಾರ್ವಜನಿಕರು ವಿಚಾರಿಸುತ್ತಿದ್ದಂತೆ ಯುವಕ ಪರಾರಿಯಾಗಿರುವ ಘಟನೆ ನಗರ ಹೊರವಲಯದ ಕುಳಾಯಿ ಬಳಿ ನಡೆದಿದೆ. ಶುಕ್ರವಾರ ಬೆಳಗ್ಗೆ ಯುವಕನ ಜೊತೆಗಿದ್ದ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಸ್ಥಳೀಯರು ಈ ವೇಳೆ ಕಾರನ್ನು ನಿಲ್ಲಿಸಲು ಸನ್ನೆ ಮಾಡಿದ್ದಾರೆ. ಆದರೆ, ಯುವಕ ಕಾರನ್ನು ನಿಲ್ಲಿಸದೆ ಮುಂದಕ್ಕೆ ಓಡಿಸಿದಾಗ ಅನುಮಾನಗೊಂಡ ಸಾರ್ವಜನಿಕರು ಕಾರನ್ನು ತಡೆದು ಯುವಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಏನೇನೋ ಮಾತನಾಡಲು ತಡಬಡಾಯಿಸಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಯುವಕ ಮತ್ತು ಯುವತಿ ಪರಸ್ಪರ ಸ್ನೇಹಿತರಾಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆದರೆ, ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಕಮಿಷನರ್ ಡಾ ಪಿ ಎಸ್ ಹರ್ಷ, ಇವರಿಬ್ಬರೂ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಸ್ನೇಹಿತರಾಗಿದ್ದಾರೆ. ಈ ಬಗ್ಗೆ ಹರಡುತ್ತಿರುವ ಸುದ್ದಿಯಲ್ಲಿ ಹುರುಳಿಲ್ಲ ಎಂದಿದ್ದಾರೆ.
ಕಾರಿನಲ್ಲಿದ್ದ ಅವಳ ಸ್ಥಿತಿ ಕಂಡು ಜನ ಅಡ್ಡಗಟ್ಟಿದ್ರು… ಅವನು ಎಸ್ಕೇಪ್ ಆದ!
Date:






