ನಮ್ ಬೆಂಗಳೂರಲ್ಲಿ ರಸ್ತೆ ಬದಿಯಲ್ಲೇ ಸಿಗುತ್ತೆ ಮಚ್ಚು – ಲಾಂಗ್,,, ಇದೇನ್ ಶಾಕಿಂಗ್​ ನ್ಯೂಸ್!

Date:

ರೌಡಿಗಳು, ಪುಡಾರಿಗಳಿಗೆ ಈ ಮಚ್ಚು, ಲಾಂಗು ಎಲ್ಲಿ ಸಿಗುತ್ತೆ ಎನ್ನುವುದು ನಮ್ಮಂಥಾ,,, ನಿಮ್ಮಂಥಾ ಪ್ರತಿಯೊಬ್ಬರ ಪ್ರಶ್ನೆ.. ಆದರೆ, ಬೆಂಗಳೂರಲ್ಲಿ ಆರಾಮಾಗಿ ರಸ್ತೆ ಬದಿಯಲ್ಲೇ ಮಚ್ಚು -ಲಾಂಗ್​ಗಳು ಮಾರಾಟ ಆಗುತ್ತಿವೆ..! ಕಡ್ಲೆಪುರಿಯಂತೆ ಮಾರಕಾಸ್ತ್ರಗಳು ಮಾರಾಟ ಮಾಡ್ತಿದ್ದಾರೆ… ಮಧ್ಯ ಪ್ರದೇಶ ಮೂಲದ ಅಲೆಮಾರಿ ಮಂದಿ.
ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಪಕ್ಕದಲ್ಲೇ ಮಚ್ಚು, ಲಾಂಗುಗಳು ಮಾರಾಟವಾಗುತ್ತಿವೆ. ಮಧ್ಯಪ್ರದೇಶ ಮೂಲದ ಅಲೆಮಾರಿ ಜನ ಬೀದಿಯಲ್ಲಿ ರಾಜರೋಷವಾಗಿ ಮಾರಕಾಸ್ತ್ರಗಳನ್ನು ಮಾರುತ್ತಿದ್ದಾರೆ ಎಂದು ಖಾಸಗಿ ವಾಹಿಯೊಂದು ವರದಿ ಮಾಡಿದೆ.
ಮಾಗಡಿ ರಸ್ತೆಯ ಚಿಕ್ಕ ಗೊಲ್ಲರಟ್ಟಿಯ ರಸ್ತೆ ಪಕ್ಕ ಬಿಡಾರ ಹಾಕಿರುವ ಈ ಅಲೆಮಾರಿಗಳು ಶೂಟಿಂಗಿಗೆ ಲಾಂಗ್ ಬೇಕೆಂದಾಗ ಚೀಲಗಳ ಮಧ್ಯೆಯಿಟ್ಟಿದ್ದ ಮಚ್ಚುಗಳನ್ನು ತೆಗೆಯುತ್ರಾರೆ ಎಂದು ಆ ವರದಿಯಲ್ಲಿದ್ದು, ಅದಕ್ಕೆ ಸಂಬಂಧಿಸಿದ ಎಕ್ಸ್​ ಕ್ಲೂಸಿವ್ ಫೋಟೋಸ್​ ಗಳನ್ನು ಕೂಡ ಬಿತ್ತರಿಸಿದೆ.
ರೌಡಿಗಳ ಕೈಗೆ ಮಾರಕಾಸ್ತ್ರಗಳು ಹೇಗೆ ಸಿಗುತ್ತೆ, ಎಲ್ಲಿ ಸಿಗುತ್ತೆ ಎಂಬುದು ಸಾಮಾನ್ಯರಿಗೆ ತಿಳಿಯದ ವಿಚಾರವಾಗಿತ್ತು. ಅಜ್ಞಾತ ಸ್ಥಳಗಳಲ್ಲಿ ಮಚ್ಚು – ಲಾಂಗುಗಳು ರೆಡಿಯಾಗುತ್ತಿದ್ದವು. ಇದೀಗ ಬೀದಿ ಬೀದಿಗೆ ಎಂಟ್ರಿಯಾಗಿವೆ. ಯಾವುದೇ ಅಡೆತಡೆಗಳಿಲ್ಲದೆ ಬೀದಿಯಲ್ಲಿ ಮಾರಕಾಸ್ತ್ರಗಳನ್ನು ಮಾರುತ್ತಿದ್ದರೂ ಪೊಲೀಸರು ಮಾತ್ರ ಈ ಬಗ್ಗೆ ತಮಗೇನು ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವು ಕೇಳಿಬಂದಿದೆ.

Share post:

Subscribe

spot_imgspot_img

Popular

More like this
Related

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ,...