ಈರುಳ್ಳಿ ಬೆಲೆಯಿಂದ ತಲ್ಲಣಗೊಂಡಿದ್ದ ಮಾರುಕಟ್ಟೆ ಇದೀಗ ನುಗ್ಗೆಕಾಯಿ ಬೆಲೆಯಿಂದ ಕಂಗೆಡುವಂತಾಗಿದೆ. ನುಗ್ಗೆ ಕಾಯಿಬೆಲೆ ಗಗನಕ್ಕೇರಿದೆ. ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ಒಂದು ನುಗ್ಗೆಕಾಯಿ ಬೆಲೆ ೪೦ರಿಂದ ೫೦ ರೂಪಾಯಿ ಇತ್ತು. ಕೆ ಜಿ ನುಗ್ಗೆ ಕಾಯಿ ಬೆಲೆ ೪೦೦ ರೂಪಾಯಿ ಆಗಿತ್ತು ಎಂದು ವರದಿಯಾಘಿದೆ.
ಅಕಾಲಿಕ ಮಳೆಯಿಂದಾಗಿ ಹೂ ಉದುರಿದ ಕಾರಣ ನುಗ್ಗೆ ಕಾಯಿ ಫಸಲು ಇಳಿದಿದೆ. ಇದರಿಂದಾಗಿ ಬೆಲೆ ಏರಿಕೆ ಆಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಕೆ ಜಿ ತೂಕಕ್ಕೆ ೮ರಿಂದ ೧೦ ನುಗ್ಗೆಗಳು ಬೇಕಾಗುತ್ತದೆ. ಕಾಲು ಕೆ ಜಿ ನುಗ್ಗೆಗೆ ೧೦೦ ರೂ ಇದೆ. ಕಾಲು ಕೆ ಜಿಯಲ್ಲಿರುವುದು ಕೇವಲ ೨ರಿಂದ ೩ ನುಗ್ಗೆಕಾಯಿ. ತರಕಾರಿ ಪ್ರಿಯರು, ಅದರಲ್ಲೂ ನುಗ್ಗೆಕಾಯಿ ಪ್ರಿಯರಿಗೆ ಈ ದುಬಾರಿ ದರ ಸಿಡಿಲು ಬಡಿದಂತಾಗಿರುವುದು ಸುಳ್ಳಲ್ಲ.
ಮAಗಳೂರು ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ೫೦ ರೂ, ಹೊಸ ಈರುಳ್ಳಿ ದರ ೮೦ ರೂ ಹಾಗೂ ಹಳೆ ಈರುಳ್ಳಿ ೧೧೦ ರೂ ಇತ್ತು.
ಈರುಳ್ಳಿ ಆಯ್ತು ಈಗ ನುಗ್ಗೆ ಸರದಿ.. ಒಂದೇ ಒಂದು ಕಾಯಿಗೆ 50 ರೂ!
Date:






