ತೆಂಗಿನಕಾಯಿ ವೈನ್ ಕುಡಿದು ಸುಮಾರು 11 ಜನರು ಸಾವನ್ನಪ್ಪಿ ಸುಮಾರು 300 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ.
ಫಿಲಿಪೈನ್ಸ್‌ನ ದಕ್ಷಿಣ ಮನಿಲಾದ ಲಗುನಾ ಮತ್ತು ಕ್ವಿಜೋನ್ ಪ್ರಾಂತ್ಯಗಳಲ್ಲಿ ಈ ಘಟನೆ ನಡೆದಿದ್ದು, ಈ ಸ್ಥಳೀಯವಾಗಿ ಜನಪ್ರಿಯವಾಗಿರುವ ಪಾರ್ಟಿಗಳಲ್ಲಿ, ರಜೆಯ ಮಜಾಕ್ಕಾಗಿ ಹಾಗೂ ಕ್ರಿಸ್ಮಸ್ ಜೋಶ್ ನೆಪದಲ್ಲಿ ತೆಂಗಿನಕಾಯಿ ವೈನ್ “ಲ್ಯಾಂಬಾನಾಗ್ ಎಂಬ ಪಾನೀಯವನ್ನು ಸೇವಿಸಿದ್ದರು. ವೈನ್ ಸೇವಿಸಿದ ಬಹುತೇಕ ಎಲ್ಲರೂ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ 11 ಮಂದಿ ಮೃತಪಟ್ಟಿದ್ದಾರೆ. 300 ಮಂದಿ ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ರಕ್ತದ ಮಾದರಿ ಹಾಗೂ ಮತ್ತು ಉಳಿದಿರುವ ಲ್ಯಾಂಬನಾಗ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಲ್ಯಾಂಬನಾಗ್ ಸ್ಥಳೀಯ ಪಟ್ಟಣವೊಂದರಲ್ಲಿ ಉತ್ಪಾದಿಸಲಾಗಿತ್ತು ಸರ್ಕಾರ ಸಾಕಷ್ಟು ಎಚ್ಚರವಹಿಸಿದರೂ ಫಿಲಿಪೈನ್ಸ್‌ನಲ್ಲಿ ಲ್ಯಾಂಬನಾಗ್ ಪಾನೀಯ ಅನಿಯಂತ್ರಿತವಾಗಿ ಉತ್ಪಾದನೆಯಾಗುತ್ತಿದೆನ ಎಂದು ತಿಳಿದುಬಂದಿದೆ.