ಬಂಧನ ಶಿಬಿರ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರದ ಮನವಿ! ಅಮಿತ್ ಶಾ ಹೇಳಿದ್ದೇನು?

Date:

ಬಂಧನ ಶಿಬಿರಗಳ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಮಾಹಿತು ನೀಡಿದ ಬಳಿಕ ಕೇಂದ್ರ ಗೃಹಸಚಿವಾಲಯ ೨೦೦೯, ೨೦೧೨, ೨೦೧೪ ಮತ್ತು ೨೦೧೮ರಲ್ಲಿ ಎಲ್ಲಾ ರಾಜ್ಯಗಳಲ್ಲಿ ಬಂಧನ ಶಿಬಿರ ನಿರ್ಮಾಣ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.
ಅಸ್ಸಾಂನ ಗೋಲಾಪಾರಾ, ಕೊಕ್ರಾಜಹಾರ್, ಸಿಲ್ಚಾರ್, ತೇಝ್ ದಿಬ್ರುಗಢ್ ಮತ್ತು ಜೋಹ್ರಾತ್ ಪುರ್ ಸೇರಿದಂತೆ ಆರು ಬಂಧನ ಶಿಬಿರಗಳಿವೆ. ಅಸ್ಸಾಂನ ಬಂಧನ ಶಿಬಿರದಲ್ಲಿ ೬೪೬ ಪುರುಷರು, ೩೨೪ ಮಹಿಳೆಯರು ಸೇರಿದಂತೆ ೯೭೦ ಮಂದಿ ಇದ್ದಾರೆ. ಕರ್ನಾಟಕದಲ್ಲಿಯೂ ಅಕ್ರಮವಾಗಿ ವಾಸಿಸುತ್ತಿರುವ ಸುಮಾರು ೧೧೪ ಬಾಂಗ್ಲಾದೇಶಿಯರನ್ನು ಗುರುತಿಸಲಾಗಿದ್ದು, ಶೀಘ್ರವೇ ಬಂಧನ ಶಿಬಿರದ ಕೆಲಸಗಳನ್ನು ಪೂರ್ಣಗೊಳಿಸುವಂತೆ ಕೇಂದ್ರ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಬಂಧನ ಶಿಬಿರಕ್ಕೂ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಗೂ ಯಾವುದೇ ಸಂಬ0ಧವಿಲ್ಲ, ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೂ ಯಾವುದೇ ಬಂಧನ ಶಿಬಿರವನ್ನು ನಿರ್ಮಾಣವಾಗಿಲ್ಲ. ಈ ಬಗ್ಗೆ ಗಾಳಿಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...