ಎಂಥೆಂಥಾ ಕಳ್ಳರನ್ನು ನೀವು ನೋಡಿರುತ್ತೀರಾ? ಇಂಥಾ ಕಳ್ಳನನ್ನು ಮಾತ್ರ ನೀವು ನೋಡಿರಲು ಸಾಧ್ಯವೇ ಇಲ್ಲ. ಕಳ್ಳನೊಬ್ಬ ಬ್ಯಾಂಕ್ ದರೋಡೆ ಮಾಡಿ ಆ ಹಣವನ್ನು ದಾರಿಯಲ್ಲಿ ಹೋಗೋರು, ಬರೋರಿಗೆ ಎಸೆದು ಕ್ರಿಸ್ಮಸ್ ವಿಶ್ ಮಾಡಿದ ಸುದ್ದಿ ಫುಲ್ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. ಆ ಕಳ್ಳನ ಹೆಸರು ಒಲಿವೇರಾ. 65 ವರ್ಷದ ಬಿಳಿಗಡ್ಡದಾರಿ ಖದೀಮ ಒಲಿವೇರಾ ಸೋಮವಾರ ಮಧ್ಯಾಹ್ನ ಬ್ಯಾಂಕಿಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಕೆಯೊಡ್ಡಿ ಹಣ ದರೋಡೆ ಮಾಡಿದ್ದಾನೆ. ಬಳಿಕ ದಾರಿಯಲ್ಲಿ ಹಣ ಎಸೆಯುತ್ತಾ ಪಾದಚಾರಿಗಳಿಗೆ ಕ್ರಿಸ್ಮಸ್ ಶುಭಾಶಯ ಕೋರಿದ್ದಾನೆ. ಸ್ಟಾರ್ ಬಕ್ಸ್ ಸಮೀಪ ಬಂಧಿಸಲಾಗಿದೆ. ಆತ ಎಸೆದ ಹಣವನ್ನು ಕೆಲವರು ಬ್ಯಾಂಕಿಗೆ ವಾಪಸ್ ನೀಡಿದ್ದಾರೆಂದು ವರದಿಯಾಗಿದೆ.
ಬ್ಯಾಂಕ್ ದರೋಡೆ ಮಾಡಿ ದಾರೀಲಿ ಹೋಗೋರಿಗೆ ಹಣ ಎಸೆದು ಕ್ರಿಸ್ಮಸ್ ಶುಭಾಶಯ ಕೋರಿದ ಕಳ್ಳ!
Date: