ನಟ ರಘು ಭಟ್ ಕುಟುಂಬದೊಂದಿಗೆ ಮನೆ ಹೋಗುತ್ತಿರುವಾಗ. ಹಲ್ಸೂರ್ ಠಾಣಾ ವ್ಯಾಪ್ತಿಯ RMZ ಬಳಿ ಕಾರೊಂದನ್ನು ಅಡ್ಡ ಗಟ್ಟಿ ದರೋಡೆಗೆ ಯತ್ನಿಸಿದ್ದ ಕಳ್ಳರು ದರೋಡೆಕೊರರಿಬ್ಬರು ಕಾರು ಚಾಲಕನ ಬಳಿ ಮೊಬೈಲ್ ಹಾಗೂ ಚೈನ್ ಪಡೆದು ಪರಾರಿಯಾಗುತ್ತಿದ್ದರು.ಮಧ್ಯರಾತ್ರಿ 2 ರಿಂದ 3 ಗಂಟೆ ಅವಧಿಯಲ್ಲಿ ಕಾರೊಂದನ್ನು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿ ಆಗ್ತಿದ್ದ ಕಳ್ಳರು ಅವರನ್ನು ಚೇಸ್ ಮಾಡಿದ ರಘುಭಟ್ ಸುಮಾರು ಎರಡು ಕಿಮೀ ಸಿನಿಮೀಯಾ ರೀತಿಯಲ್ಲಿ ಚೇಸಿಂಗ್ ಮಾಡಿ ಅವರನ್ನುಸೆರೆ ಹಿಡಿದಿದ್ದಾರೆ.
ದರೋಡೆಕೋರರು ಮಾರಕಾಸ್ತ್ರಗಳನ್ನು ಹೊಂದಿದ್ದರು ಎಂದು ಹೇಳಲಾಗುತ್ತಿತ್ತು. ನಂತರ ಅವರು ಪೋಲಿಸರಿಗೆ ವಶಕ್ಕೆ ಪಡೆದರು ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ್ದ ನಟ ರಘು ಭಟ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಸನ್ಮಾನಿಸಿ ಅಭಿನಂದಿಸಿದರು.