ಕರ್ನಾಟಕದ ಒಂದಡಿ ಜಾಗವನ್ನು ಬಿಡಲ್ಲ ಅಂತ ಸಿಡಿದ ಯಡಿಯೂರಪ್ಪ!

Date:

ಬೆಂಗಳೂರು: ಕರ್ನಾಟಕದ ಗಡಿಭಾಗ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟು ಪುಂಡಾಟಿಕೆ ನಡೆಸಿ ರಾಜ್ಯದ ಕೆಂಗಣ್ಣಿಗೆ ಗುರಿಯಾಗಿದ್ದರು.ಇದೀಗ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೀಡಿದ್ದ ಹೇಳಿಕೆಗೆ ಯಡಿಯೂರಪ್ಪ ಕೆಂಡಮಂಡಲವಾಗಿದ್ದಾರೆ. ಕಾರವಾರ ಹಾಗೂ ಬೆಳಗಾವಿಯ ಕೆಲ ಪ್ರದೇಶಗಳು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ದೇವೇಂದ್ರ ಫಡ್ನವಿಸ್​ ಹೇಳಿದ್ರು,ಇದಕ್ಕೆ ಸಂಬಧಿಸಿದಂತೆ ಮಾತನಾಡಿದ ಯಡಿಯೂರಪ್ಪ ಕರ್ನಾಟಕದ ಒಂದಿಚೂ ಜಾಗವನ್ನು ಬಿಡುವುದಿಲ್ಲ ಎಂದು ಫಡ್ನವಿಸ್​ಗೆ ತೀರುಗೇಟು ಕೊಟ್ಟಿದ್ದಾರೆ.ಮಹಾಜನ್ ವರದಿಯಂತೆ ರಾಜ್ಯಗಳಿಗೆ ಪ್ರದೇಶಗಳು ಸೇರ್ಪಡೆಯಾಗಿದೆ, ಯಾವ ಪ್ರದೇಶ ಯಾವ ರಾಜ್ಯಕ್ಕೆ ಸೇರಬೇಕೆಂಬುದು ಈಗಾಗಲೇ ತೀರ್ಮಾವಗಿರುವ ವಿಚಾರ. ಈ ಬಗ್ಗೆ ವಿವಾದ ಸೃಷ್ಟಿಸುವುದು ಸರಿಯಲ್ಲ. ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪ ವಾಗ್ದಳಿ ನಡೆಸಿದ್ದಾರೆ. ಅಲ್ಲದೆ ಗಡಿ ಭಾಗದ ಕನ್ನಡಿಗರಿಗೆ ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ ಸಿದ್ದರಾಮಯ್ಯ

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ...

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು!

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು! ಕಿವಿ...